ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಬ್ಳೆ ಪುತ್ರನ ಕಂಗಳಲ್ಲಿ ವ್ಯಾಘ್ರ ಕದನ!

Last Updated 19 ಜುಲೈ 2020, 13:37 IST
ಅಕ್ಷರ ಗಾತ್ರ
ADVERTISEMENT
""

‘ಮಕ್ಕಳು ಪುಸ್ತಕದ ಓದಿನಿಂದ ಕಲಿಯುವುದು ಕಡಿಮೆ. ಆದರೆ, ತಮ್ಮ ಆಪ್ತ ವಲಯದಿಂದ ಕಲಿಯುವುದೇ ಹೆಚ್ಚು’ ಎಂದು ಹಿರಿಯರು ಹೇಳುವ ಮಾತು ಅಕ್ಷರಶಃ ನಿಜ.

ಕ್ರಿಕೆಟ್‌ ಕ್ಷೇತ್ರದ ದಿಗ್ಗಜ ಲೆಗ್‌ಸ್ಪಿನ್ನರ್ ಅನಿಲ್ ಕುಂಬ್ಳೆ ಅವರ ಮಗ ಮಯಾಸ್ ತಮ್ಮ ತಂದೆಯ ಹಾದಿಯಲ್ಲಿಯೇ ಹೆಜ್ಜೆ ಹಾಕಿದ್ದಾರೆ. ಆದರೆ ಅವರು ಕ್ರಿಕೆಟ್‌ ಚೆಂಡು ಹಿಡಿದು ಕಣಕ್ಕಿಳಿದಿಲ್ಲ. ಅಪ್ಪನ ಹವ್ಯಾಸವಾದ ವನ್ಯಜೀವಿ ಛಾಯಾಗ್ರಹಣದತ್ತ ವಾಲಿದ್ದಾರೆ. ಅಷ್ಟೇ ಅಲ್ಲ ಈಚೆಗೆ ಅವರು ಪ್ರತಿಷ್ಠಿತ ‘ನೇಚರ್ ಇನ್ ಫೋಕಸ್‌’ ನಿಯತಕಾಲಿಕೆಯ ಗೌರವಕ್ಕೂ ಪಾತ್ರರಾಗಿದ್ದಾರೆ.

ಮಹಾರಾಷ್ಟ್ರದ ನಾಗಪುರ ಸಮೀಪದ ತಾಡೋಬಾ ರಾಷ್ಟ್ರೀಯ ಉದ್ಯಾನದಲ್ಲಿ ಎರಡು ಹುಲಿಗಳ ಕಾದಾಟವನ್ನು ಮಯಾಸ್ ಸೆರೆ ಹಿಡಿದಿದ್ದರು. ಆ ಚಿತ್ರಗಳನ್ನು ಎನ್‌ಐಎಫ್‌ ನಿಯತಕಾಲಿಕೆಗೆ ಲೇಖನ ಸಹಿತ ನೀಡಿದ್ದರು.ನಿಯಕಾಲಿಕೆಯು ಪ್ರಮುಖ ವಿಭಾಗದಲ್ಲಿ ಈ ಚಿತ್ರ–ಲೇಖನವನ್ನು ಪ್ರಕಟಿಸಿ ಗೌರವಿಸಿದೆ. ಏಷ್ಯಾದ ವನ್ಯಜೀವಿ ಛಾಯಾಗ್ರಾಹಕರ ಚಿತ್ರ, ಲೇಖನಗಳಿಗೆ ಇದರಲ್ಲಿ ಪ್ರಾಶಸ್ತ್ಯ ನೀಡಲಾಗುತ್ತದೆ.

ಈ ಸಂಗತಿಯನ್ನು ಟ್ವೀಟ್ ಮಾಡಿರುವ ಅನಿಲ್ ಕುಂಬ್ಳೆ, ‘ಪ್ರತಿಷ್ಠಿತ ಎನ್‌ಐಎಫ್‌ನಲ್ಲಿ ನನ್ನ ಮಗನ ಚಿತ್ರ ಮತ್ತು ಲೇಖನ ‘ತಾಡೋಬಾ ಥ್ರೂ ಮೈ ಲೆನ್ಸ್‌’ ಪ್ರಕಟವಾಗಿದೆ. ನನಗೆ ತುಂಬಾ ಹೆಮ್ಮೆ ಎನಿಸುತ್ತಿದೆ’ ಎಂದಿದ್ದಾರೆ.

ಅನಿಲ್ ಅವರು ಕ್ರಿಕೆಟ್‌ ಜೊತೆಗೆ ವನ್ಯಜೀವಿ ಛಾಯಾಚಿತ್ರ ತೆಗೆಯುವಲ್ಲಿಯೂ ಸಿದ್ಧಹಸ್ತರು. ಅವರ ಹಲವಾರು ಚಿತ್ರಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಗಳಿಸಿವೆ. 16 ವರ್ಷದ ಮಯಾಸ್ ತಮ್ಮ ತಂದೆಯ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ.

ಟೆಸ್ಟ್ ಕ್ರಿಕೆಟ್‌ ಪಂದ್ಯದ ಒಂದೇ ಇನಿಂಗ್ಸ್‌ನಲ್ಲಿ ಹತ್ತು ವಿಕೆಟ್‌ಗಳನ್ನು ಪಡೆದ ವಿಶ್ವದಾಖಲೆ ಅನಿಲ್ ಅವರ ಹೆಸರಿನಲ್ಲಿದೆ. ಭಾರತ ತಂಡದ ನಾಯಕರಾಗಿ ಮತ್ತು ಕೋಚ್ ಆಗಿ ಅವರು ನೀಡಿದ ಕಾಣಿಕೆ ಮಹತ್ವದ್ದು. ಸದ್ಯ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ ತಾಂತ್ರಿಕ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಬಿಡುವಿನ ವೇಳೆಯಲ್ಲಿ ಪುತ್ರನಿಗೆ ಛಾಯಾಗ್ರಹಣದ ಮಜಲುಗಳನ್ನು ಹೇಳಿಕೊಡುತ್ತಾರೆ. ಮಯಾಸ್ ಈಗ ತಮ್ಮ ಸಾಧನೆಯ ಪಯಣ ಆರಂಭಿಸಿದ್ದಾರೆ.

ನಿಯತಕಾಲಿಕೆಯಲ್ಲಿ ಪ್ರಕಟವಾದ ಚಿತ್ರ ಇದು. ಅನಿಲ್ ಕುಂಬ್ಳೆ ತಮ್ಮ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT