ಶುಕ್ರವಾರ, ಮೇ 29, 2020
27 °C

ಐಪಿಎಲ್ | ತವರಿಗೆ ಮರಳಿದ ಆರ್‌ಸಿಬಿಯ ಮೈಕ್ ಹೆಸನ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನ್ಯೂಜಿಲೆಂಡ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ರಿಕೆಟ್‌ ನಿರ್ದೇಶಕ ಮೈಕ್ ಹೆಸನ್ ಅಂತೂ ಇಂತೂ ಮಂಗಳವಾರ ತಮ್ಮ ತವರು ನ್ಯೂಜಿಲೆಂಡ್‌ಗೆ ಮರಳಿದ್ದಾರೆ.

ಕೊರೊನಾ ವೈರಸ್ ಸೋಂಕು ತಡೆಗಟ್ಟಲು ದೇಶದಲ್ಲಿ ಲಾಕ್‌ಡೌನ್‌ ವಿಧಿಸುವ ಮುನ್ನವೇ ಅವರು ಭಾರತಕ್ಕೆ ಬಂದಿದ್ದರು. ಆದರೆ. ಮರಳಿ ಹೋಗಲು ಸಾಧ್ಯವಾಗಿರಲಿಲ್ಲ. ವಿದೇಶಿ ವಿಮಾನಯಾನ ಕೂಡ ರದ್ದಾಗಿದ್ದರಿಂದ ಅವರು ಇಲ್ಲಿಯವರೆಗೂ ಬೆಂಗಳೂರಿನಲ್ಲಿಯೇ ಇದ್ದರು.

‘ಹೆಚ್ಚು ಕಡಿಮೆ ಒಂದು ದಿನದ ಬಸ್‌ ಪ್ರಯಾಣದಲ್ಲಿ ಮುಂಬೈ ವಿಮಾನ ನಿಲ್ದಾಣ ತಲುಪಿದೆ. ದಾರಿಯಲ್ಲಿ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಂಡೆ. ಎಲ್ಲ ಸಿಬ್ಬಂದಿಯ ನೆರವು ತುಂಬಾ ಸೊಗಸಾಗಿತ್ತು’ ಎಂದು ಹೆಸನ್ ಟ್ವೀಟ್ ಮಾಡಿದ್ದಾರೆ.

‘ಭಾರತದ ಪ್ರಧಾನಿ ನರೇಂದ್ರ ಮೋದಿ, ನ್ಯೂಜಿಲೆಂಡ್‌ ರಾಯಭಾರಿ ಕಚೇರಿ, ನ್ಯೂಜಿಲೆಂಡ್ ಪ್ರಧಾನಿ ಜೆಸಿಂದಾ ಅರ್ಡ್ರನ್ ಮತ್ತು ನ್ಯೂಜಿಲೆಂಡ್ ವಿದೇಶಾಂಗ ಸಚಿವಾಲಯದ ನೆರವಿಗೆ ನಾನು ಅಭಾರಿ’ ಎಂದು ಉಲ್ಲೇಖಿಸಿದ್ದಾರೆ.

ಮೈಕ್ ಮಾರ್ಚ್‌ 5ರಂದು ಭಾರತಕ್ಕೆ ಬಂದಿದ್ದರು. ಅದೇ ತಿಂಗಳು 29ರಿಂದ ಆರಂಭವಾಗಬೇಕಿದ್ದ ಐಪಿಎಲ್‌ ಟೂರ್ನಿಯ ಸಿದ್ಧತೆಯನ್ನು ಆರಂಭಿಸಿದ್ದರು. ಆದರೆ, ಕೊರೊನಾ ವೈರಸ್‌  ಲಾಕ್‌ಡೌನ್‌ ನಿಂದಾಗಿ ಟೂರ್ನಿಯನ್ನು ಮುಂದೂಡಲಾಯಿತು. ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು