ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಮಿಥಾಲಿ ರಾಜ್ 

Last Updated 3 ಸೆಪ್ಟೆಂಬರ್ 2019, 11:11 IST
ಅಕ್ಷರ ಗಾತ್ರ

ನವದೆಹಲಿ: ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮಂಗಳವಾರ ವಿದಾಯ ಘೋಷಿಸಿದ್ದಾರೆ.

2021ರ ಏಕದಿನ ವಿಶ್ವಕಪ್ಪಂದ್ಯದತ್ತ ಹೆಚ್ಚು ಗಮನ ಹರಿಸಿ, ತಯಾರಿ ನಡೆಸುವುದಕ್ಕಾಗಿಟಿ20 ಅಂತರಾಷ್ಟ್ರೀಯ ಪಂದ್ಯಕ್ಕೆ ವಿದಾಯ ಘೋಷಿಸಿರುವುದಾಗಿ ಮಿಥಾಲಿ ಹೇಳಿದ್ದಾರೆ.

32 ಬಾರಿ ಟಿ20 ಅಂತರರಾಷ್ಟ್ರೀಯ ಪಂದ್ಯಗಳ ನಾಯಕತ್ವ ವಹಿಸಿದ್ದರು 36ರ ಹರೆಯ ಮಿಥಾಲಿ.

2006ರಿಂದ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧೀಕರಿಸಿದ ನಂತರ 2021ರಲ್ಲಿ ನಡೆಯುವ ಏಕದಿನ ವಿಶ್ವಕಪ್ ಪಂದ್ಯಕ್ಕಾಗಿ ನನ್ನ ಸಾಮರ್ಥ್ಯವನ್ನು ಬಳಿಸಿ ಸಜ್ಜಾಗಬೇಕಿದೆ. ಅದಕ್ಕಾಗಿ ನಾನು ವಿದಾಯದ ನಿರ್ಧಾರ ತೆಗೆದು ಕೊಂಡೆ ಎಂದು ಮಿಥಾಲಿ ಹೇಳಿಕೆ ನೀಡಿದ್ದಾರೆ. 2006ರಲ್ಲಿ ಡರ್ಬಿಯಲ್ಲಿ ನಡೆದ ಮೊದಲ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಮಿಥಾಲಿ ಭಾರತೀಯ ತಂಡದ ನಾಯಕತ್ವ ವಹಿಸಿದ್ದರು,.

ವಿಶ್ವಕಪ್ ಗೆಲ್ಲುವುದು ನನ್ನ ಕನಸು. ಅದಕ್ಕಾಗಿ ನಾನು ನನ್ನಿಂದಾದ ಪ್ರಯತ್ನ ಮಾಡುತ್ತಿದ್ದೇನೆ. ನಿರಂತರ ಬೆಂಬಲ ನೀಡಿದ ಬಿಸಿಸಿಐಗೆ ನನ್ನ ಧನ್ಯವಾದಗಳು. ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿರುವ ಟಿ20 ತಂಡಕ್ಕೆ ನನ್ನ ಶುಭಕಾಮನೆಗಳು ಎಂದು ಮಿಥಾಲಿ ಬಿಸಿಸಿಐ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ 89 ಪಂದ್ಯಗಳನ್ನಾಡಿರುವ ಮಿಥಾಲಿ 37.5 ಸರಾಸರಿಯೊಂದಿಗೆ 2364 ರನ್ ಗಳಿಸಿದ್ದು, ಅತೀ ಹೆಚ್ಚು ರನ್ ದಾಖಲಿಸಿದ ಕ್ರೀಡಾಪಟು ಆಗಿದ್ದಾರೆ. ಔಟಾಗದೆ 97 ರನ್ ಗಳಿಸಿದ್ದು ಅವರ ಅತ್ಯಧಿಕ ರನ್ ಆಗಿದೆ.

1999ರಲ್ಲಿಟಿ20 ಅಂತರರಾಷ್ಟ್ರೀಯ ಪಂದ್ಯಕ್ಕೆ ಪಾದರ್ಪಣೆ ಮಾಡಿದ್ದ ಇವರು ಮಾರ್ಚ್ ತಿಂಗಳಲ್ಲಿ ಗುವಾಹಟಿಯಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಪಂದ್ಯವಾಡಿದ್ದರು. ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2000 ರನ್ ದಾಖಲೆ ಮಾಡಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟರ್ ಆಗಿದ್ದಾರೆ ಮಿಥಾಲಿ ರಾಜ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT