ಸೋಮವಾರ, ಸೆಪ್ಟೆಂಬರ್ 20, 2021
21 °C

ಇಂಗ್ಲೆಂಡ್‌ ತಂಡಕ್ಕೆ ಮರಳಿದ ಮೋಯಿನ್‌ ಅಲಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಆಲ್‌ರೌಂಡರ್‌ ಮೋಯಿನ್‌ ಅಲಿ ಅವರು ಇಂಗ್ಲೆಂಡ್‌ ತಂಡ ಸೇರಿಕೊಂಡಿದ್ದಾರೆ.

ಭಾರತದ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯವು ಲಾರ್ಡ್ಸ್‌ ಅಂಗಳದಲ್ಲಿ ಇದೇ 12ರಿಂದ ಆರಂಭವಾಗಲಿದ್ದು, ಈ ಪಂದ್ಯದಲ್ಲಿ ಮೋಯಿನ್‌ ಕಣಕ್ಕಿಳಿಯುವ ಸಾಧ್ಯತೆ ಇದೆ.

‘ಸ್ಪಿನ್ನರ್‌ ಮೋಯಿನ್‌ ಅವರು ಮಂಗಳವಾರ ತಂಡದ ಇತರ ಸದಸ್ಯರ ಜೊತೆ ಅಭ್ಯಾಸ ನಡೆಸಲಿದ್ದಾರೆ’ ಎಂದು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ಪ್ರಕಟಣೆ ತಿಳಿಸಿದೆ.

ಮೊದಲ ಟೆಸ್ಟ್‌ನಲ್ಲಿ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಸಾಮರ್ಥ್ಯ ತೋರಿರಲಿಲ್ಲ. ಹೀಗಾಗಿ ಆತಿಥೇಯರು ಮೊದಲ ಇನಿಂಗ್ಸ್‌ನಲ್ಲಿ 183ರನ್‌ಗಳಿಗೆ ಆಲೌಟ್‌ ಆಗಿದ್ದರು. ಇದು ಮುಖ್ಯ ಕೋಚ್‌ ಕ್ರಿಸ್‌ ಸಿಲ್ವರ್‌ವುಡ್‌ ಅವರಿಗೂ ತಲೆಬಿಸಿ ತಂದಿತ್ತು. ಹೀಗಾಗಿ ಅವರು ಆಡುವ ಬಳಗದಲ್ಲಿ ಕೆಲ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. 

ತಂಡದ ಪ್ರಮುಖ ಆಲ್‌ರೌಂಡರ್‌ಗಳಾದ ಬೆನ್‌ಸ್ಟೋಕ್ಸ್‌ ಮತ್ತು ಕ್ರಿಸ್‌ವೋಕ್ಸ್‌ ಅವರ ಅನುಪಸ್ಥಿತಿಯಲ್ಲಿ ಮೋಯಿನ್‌ ತಂಡಕ್ಕೆ ಬಲ ತುಂಬಬಹುದು ಎಂಬ ಲೆಕ್ಕಾಚಾರವೂ ಸಿಲ್ವರ್‌ವುಡ್‌ ಅವರದ್ದಾಗಿದೆ. 2019ರ ಆ್ಯಷಸ್‌ ಸರಣಿಯ ಮೊದಲ ಪಂದ್ಯದಲ್ಲಿ ಮೋಯಿನ್‌ ಆಡಿದ್ದರು. ಅನಂತರ ಅವರು ತವರಿನ ಅಂಗಳದಲ್ಲಿ ಟೆಸ್ಟ್‌ ಪಂದ್ಯ ಆಡಿಲ್ಲ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು