ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CWC 2023: ಪಾಕ್‌ ಬೌಲಿಂಗ್‌ ಕೋಚ್‌ ಹುದ್ದೆ ತೊರೆದ ಮಾರ್ನ್‌ ಮಾರ್ಕೆಲ್‌

Published 13 ನವೆಂಬರ್ 2023, 13:11 IST
Last Updated 13 ನವೆಂಬರ್ 2023, 13:11 IST
ಅಕ್ಷರ ಗಾತ್ರ

ಲಾಹೋರ್‌: ಪಾಕಿಸ್ತಾನ ಕ್ರಿಕೆಟ್‌ ತಂಡದ ಬೌಲಿಂಗ್‌ ಕೋಚ್‌ ಆಗಿದ್ದ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಮಾರ್ನ್‌ ಮಾರ್ಕೆಲ್‌ ಅವರು ಸೋಮವಾರ ಹುದ್ದೆ ತ್ಯಜಿಸಿದ್ದಾರೆ.

ವಿಶ್ವಕಪ್‌ ಟೂರ್ನಿಯಲ್ಲಿ ಪಾಕ್‌ ತಂಡದ ಅಭಿಯಾನ ಕೊನೆಗೊಂಡ ಎರಡು ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ. ಕೋಲ್ಕತ್ತದಲ್ಲಿ ಶನಿವಾರ ನಡೆದಿದ್ದ ಕೊನೆಯ ಲೀಗ್‌ ಪಂದ್ಯದಲ್ಲಿ ಪಾಕ್‌ ತಂಡ ಇಂಗ್ಲೆಂಡ್‌ ಎದುರು 93 ರನ್‌ಗಳಿಂದ ಸೋತಿತ್ತು. ಬಾಬರ್‌ ಅಜಂ ಬಳಗ ಒಂಬತ್ತು ಪಂದ್ಯಗಳಲ್ಲಿ ಐದರಲ್ಲಿ ಪರಾಭವಗೊಂಡು, ಸೆಮಿಫೈನಲ್‌ ಪ್ರವೇಶಿಸಲು ವಿಫಲವಾಗಿತ್ತು.

ಮಾರ್ಕೆಲ್‌ ಅವರು ಜೂನ್‌ ತಿಂಗಳಲ್ಲಿ ಪಾಕ್‌ ತಂಡದ ಬೌಲಿಂಗ್ ಕೋಚ್‌ ಆಗಿ ನೇಮಕಗೊಂಡಿದ್ದರು. ಅವರು ಪಿಸಿಬಿ ಜತೆ ಆರು ತಿಂಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದರು.

‘ಹೊಸ ಬೌಲಿಂಗ್‌ ಕೋಚ್‌ಅನ್ನು ಮುಂದಿನ ದಿನಗಳಲ್ಲಿ ನೇಮಕ ಮಾಡಲಾಗುವುದು‘ ಎಂದು ಪಿಸಿಬಿ ತಿಳಿಸಿದೆ. ಪಾಕ್‌ ತಂಡ ಡಿ.14 ರಿಂದ ಜ.7ರ ವರೆಗೆ ಆಸ್ಟ್ರೇಲಿಯಾ ಪ್ರವಾಸ  ಮಾಡಲಿದ್ದು, ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT