ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ 'ಎ' ತಂಡಕ್ಕೆ ಸರಣಿ

ಕ್ರಿಕೆಟ್: ಶಮ್ಸ್‌ಗೆ ಐದು ವಿಕೆಟ್, ಮಿಂಚಿದ ಜೈನ್
Published 4 ಫೆಬ್ರುವರಿ 2024, 11:18 IST
Last Updated 4 ಫೆಬ್ರುವರಿ 2024, 11:18 IST
ಅಕ್ಷರ ಗಾತ್ರ

ಅಹಮದಾಬಾದ್: ಎಡಗೈ ಸ್ಪಿನ್ನರ್ ಶಮ್ಸ್ ಮುಲಾನಿ ಮೋಡಿಯ ಮುಂದೆ ಇಂಗ್ಲೆಂಡ್ ಲಯನ್ಸ್ ತಂಡವು ಭಾರತ 'ಎ' ತಂಡಕ್ಕೆ ಶರಣಾಯಿತು.

ಭಾನುವಾರ ಇಲ್ಲಿ ಮುಕ್ತಾಯವಾದ ‘ಟೆಸ್ಟ್‌‘ ಪಂದ್ಯದಲ್ಲಿ  ಭಾರತ ಎ ತಂಡವು 134 ರನ್‌ಗಳಿಂದ ಜಯಿಸಿತು. ನಾಲ್ಕು ಪಂದ್ಯಗಳ ಸರಣಿಯನ್ನು ಅತಿಥೇಯ ಬಳಗವು 2–0ಯಿಂದ ಗೆದ್ದಿತು. ಶಮ್ಸ್‌ ಮುಲಾನಿ  ಐದು ವಿಕೆಟ್ ಗೊಂಚಲು ಗಳಿಸಿದರು.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 403 ರನ್‌ಗಳ ಬೃಹತ್ ಗೆಲುವಿನ ಬೆನ್ನಟ್ಟಿದ್ದ  ಇಂಗ್ಲೆಂಡ್ ಲಯನ್ಸ್ ತಂಡಕ್ಕೆ 72.4 ಓವರ್‌ಗಳಲ್ಲಿ 268 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.

ಮುಲಾನಿ ಅವರೊಂದಿಗೆ ಸಾರಾಂಶ್ ಜೈನ್ (50ಕ್ಕೆ3) ಉತ್ತಮ ಜೊತೆ ನೀಡಿದರು.

ಪ್ರವಾಸಿ ಬಳಗದ ಆರಂಭಿಕ ಬ್ಯಾಟರ್ ಅಲೆಕ್ಸ್ ಲೀಸ್ (55; 96ಎ) ಮತ್ತು ಎಂಟನೇ ಕ್ರಮಾಂಕದ ಒಲಿವರ್ ರಾಬಿನ್ಸನ್ (80; 105ಎ) ಹೋರಾಟ ತೋರಿದರು. ಆದರೆ ಉಳಿದ ಪ್ರಮುಖ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿರಲಿಲ್ಲ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಭಾರತ ಎ: 192, ಇಂಗ್ಲೆಂಡ್ ಲಯನ್ಸ್: 199. ಎರಡನೇ ಇನಿಂಗ್ಸ್: ಭಾರತ ಎ: 107.1 ಓವರ್‌ಗಳಲ್ಲಿ 409. ಇಂಗ್ಲೆಂಡ್ ಲಯನ್ಸ್: 72.4 ಓವರ್‌ಗಳಲ್ಲಿ 268 (ಅಲೆಕ್ಸ್ ಲೀಸ್ 55, ಒಲಿವರ್ ರಾಬಿನ್ಸನ್ 80, ಜೇಮ್ಸ್ ಕೋಲ್ಸ್ 31, ಶಮ್ಸ್ ಮುಲಾನಿ 60ಕ್ಕೆ5, ಸಾರಾಂಶ್ ಜೈನ್ 50ಕ್ಕೆ3) ಫಲಿತಾಂಶ: ಭಾರತ ಎ  ತಂಡಕ್ಕೆ 134 ರನ್ ಜಯ. 2–0 ಯಿಂದ ಸರಣಿ. ಪಂದ್ಯಶ್ರೇಷ್ಠ: ಸಾಯಿ ಸುದರ್ಶನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT