ಶನಿವಾರ, ಆಗಸ್ಟ್ 13, 2022
27 °C

ಮುಷ್ಫಿಕುರ್, ಕ್ಯಾಥ್ರಿನ್‌ ಐಸಿಸಿ ತಿಂಗಳ ಆಟಗಾರರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಬಾಂಗ್ಲಾದೇಶ ತಂಡದ ಮಾಜಿ ನಾಯಕ ಮುಷ್ಫಿಕುರ್ ರಹೀಮ್ ಮತ್ತು ಸ್ಕಾಟ್ಲೆಂಡ್‌ ಮಹಿಳಾ ತಂಡದ ಆಲ್‌ರೌಂಡರ್‌ ಕ್ಯಾಥ್ರಿನ್ ಬ್ರೈಸ್ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮೇ ತಿಂಗಳ ಆಟಗಾರರನ್ನಾಗಿ ಸೋಮವಾರ ಆಯ್ಕೆ ಮಾಡಿದೆ.

ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮುಷ್ಫಿಕುರ್ ರಹೀಮ್ ಮೇ ತಿಂಗಳಲ್ಲಿ ಶ್ರೀಲಂಕಾ ಎದುರು ಒಂದು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಏಕದಿನ ಸರಣಿಯಲ್ಲಿ ಒಟ್ಟು 125 ರನ್ ಗಳಿಸಿ ಶ್ರೀಲಂಕಾ ವಿರುದ್ಧ ತಮ್ಮ ತಂಡ ಮೊದಲ ಬಾರಿ ಏಕದಿನ ಸರಣಿ ಗೆಲ್ಲಲು ನೆರವಾಗಿದ್ದರು.

ಐಸಿಸಿ ವೋಟಿಂಗ್ ಅಕಾಡೆಮಿಯ ವಿವಿಎಸ್‌ ಲಕ್ಷ್ಮಣ್‌ ಅವರು ಮುಷ್ಫಿಕುರ್ ಸಾಮರ್ಥ್ಯದ ಬಗ್ಗೆ ಪ್ರತಿಕ್ರಿಯಿಸುತ್ತ ‘15 ವರ್ಷ ಉತ್ತಮ ಗುಣಮಟ್ಟದ ಕ್ರಿಕೆಟ್ ಆಡುತ್ತಿದ್ದರೂ ರನ್ ಗಳಿಸುವ ಅವರ ದಾಹ ಕಡಿಮೆಯಾಗಲಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ತಿಂಗಳು ಐಸಿಸಿ ರ‍್ಯಾಂಕಿಂಗ್‌ ಪಟ್ಟಿಯ ಅಗ್ರ 10ರೊಳಗೆ ಕಾಣಿಸಿಕೊಂಡಿರುವ ಬ್ರೈಸ್ ಈ ಸಾಧನೆ ಮಾಡಿದ ಸ್ಕಾಟ್ಲೆಂಡ್‌ನ ಮೊದಲ ಕ್ರಿಕೆಟರ್ ಎನಿಸಿಕೊಂಡಿದ್ದರು. ಮೇ ತಿಂಗಳಲ್ಲಿ ಅವರು ಐರ್ಲೆಂಡ್ ವಿರುದ್ಧ ನಾಲ್ಕು ಟಿ20 ಪಂದ್ಯಗಳನ್ನು ಆಡಿದ್ದು 96 ರನ್ ಗಳಿಸಿದ್ದಾರೆ. ಐದು ವಿಕೆಟ್‌ಗಳನ್ನೂ ಉರುಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು