ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವೆಂಟಿ–20 ಕ್ರಿಕೆಟ್ ಟ್ರೋಫಿ: ಕರ್ನಾಟಕಕ್ಕೆ ಉತ್ತರಾಖಂಡ ಸವಾಲು

ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಕ್ರಿಕೆಟ್ ಟ್ರೋಫಿ
Last Updated 7 ನವೆಂಬರ್ 2019, 19:27 IST
ಅಕ್ಷರ ಗಾತ್ರ

ಕೋಲ್ಕತ್ತ: ಹಾಲಿ ಚಾಂಪಿಯನ್ ಕರ್ನಾ ಟಕ ತಂಡವು ಶುಕ್ರವಾರ ಇಲ್ಲಿ ಆರಂಭವಾಗಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಉತ್ತರಾಖಂಡ ತಂಡವನ್ನು ಎದುರಿಸಲಿದೆ.

ಜಾಧವಪುರ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಎ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಕರುಣ್ ನಾಯರ್ ಮುನ್ನಡೆಸುತ್ತಿದ್ದಾರೆ.

ನಾಯಕ ಮನೀಷ್ ಪಾಂಡೆ ಬಾಂಗ್ಲಾ ದೇಶ ಎದುರಿನ ಟ್ವೆಂಟಿ–20 ಸರಣಿಯಲ್ಲಿ ಆಡುತ್ತಿರುವ ಭಾರತ ತಂಡದಲ್ಲಿದ್ದಾರೆ. ಕೆ.ಎಲ್. ರಾಹುಲ್ ಕೂಡ ಅಲ್ಲಿಯೇ ಇದ್ದಾರೆ. ಆದ್ದರಿಂದ ಅವರಿಬ್ಬರಿಲ್ಲದ ತಂಡವು ಕಣಕ್ಕಿಳಿಯುತ್ತಿದೆ.

ಈಚೆಗೆ ವಿಜಯ್ ಹಜಾರೆ ಟ್ರೋಫಿ ಜಯಿಸಿದ್ದ ಕರ್ನಾಟಕ ತಂಡದಲ್ಲಿ ಮಿಂಚಿದ್ದ ಎಡಗೈ ಬ್ಯಾಟ್ಸ್‌ಮನ್ ದೇವ ದತ್ತ ಪಡಿಕ್ಕಲ್ ಮತ್ತು ಗಾಯದಿಂದ ಚೇತರಿಸಿಕೊಂಡು ಮರಳಿರುವ ಆರ್. ಸಮರ್ಥ್ ಇಲ್ಲಿ ಇನಿಂಗ್ಸ್‌ ಆರಂ ಭಿಸುವುದು ಖಚಿತವಾಗಿದೆ.

ಹೋದ ವರ್ಷದ ಟೂರ್ನಿಯಲ್ಲಿ ರನ್‌ಗಳ ಮಳೆ ಸುರಿಸಿದ್ದ ಬೆಳಗಾವಿ ಹುಡುಗ ರೋಹನ್ ಕದಂ, ಧಾರವಾಡದ ಪವನ್ ದೇಶಪಾಂಡೆ, ಆಲ್‌ರೌಂಡರ್ ಪ್ರವೀಣ್ ದುಬೆ ಮತ್ತು ಗದುಗಿನ ಅನಿರುದ್ಧ ಜೋಶಿ ಅವರಿಗೆ ಉತ್ತಮವಾಗಿ ಬ್ಯಾಟಿಂಗ್ ಮಾಡುವ ಹೊಣೆ ಇದೆ.

ಅನುಭವಿ ಮಧ್ಯಮವೇಗಿ ಅಭಿ ಮನ್ಯು ಮಿಥುನ್ ಸಾರಥ್ಯದಲ್ಲಿ ಬೌಲಿಂಗ್ ಪಡೆ ಸಿದ್ಧವಾಗಿದೆ. ವಿ. ಕೌಶಿಕ್, ಪ್ರತೀಕ್ ಜೈನ್, ಸ್ಪಿನ್ನರ್‌‍–ಆಲ್‌ರೌಂಡರ್ ಕೃಷ್ಣಪ್ಪ ಗೌತಮ್ ಮತ್ತು ಶ್ರೇಯಸ್ ಗೋಪಾಲ್ ಕಣಕ್ಕಿಳಿಯಲಿದ್ದಾರೆ. ಬಿ.ಆರ್. ಶರತ್ ಮತ್ತು ರಾಹುಲ್ ಅನುಪಸ್ಥಿತಿ ಯಲ್ಲಿ ಲವನೀತ್ ಸಿಸೋಡಿಯಾ ವಿಕೆಟ್‌ಕೀಪಿಂಗ್ ಹೊಣೆ ನಿಭಾಯಿಸಲು ಸಜ್ಜಾಗಿದ್ದಾರೆ.

ದೇಶಿ ಕ್ರಿಕೆಟ್‌ನಲ್ಲಿ ಇನ್ನೂ ಅಂಬೆಗಾಲಿಕ್ಕುತ್ತಿರುವ ಉತ್ತರಾಖಂಡ ತಂಡಕ್ಕೆ ಅನುಭವಿ ಆಟಗಾರರ ಬಲ ವಿದೆ. ಈ ತಂಡದಲ್ಲಿ ಆಡುತ್ತಿರುವ ಹೊರ ರಾಜ್ಯದ ಉನ್ಮುಕ್ತ್ ಚಾಂದ್, ತನ್ಮಯ್ ಶ್ರೀವಾಸ್ತವ್, ದಿಕ್ಷಾಂಶು ನೇಗಿ, ಕರ್ಣವೀರ್ ಕೌಶಲ್ ಅವರು ಫಲಿ ತಾಂಶದ ಮೇಲೆ ಪರಿಣಾಮ ಬೀರಬಲ್ಲ ಆಟಗಾರರಾಗಿದ್ದಾರೆ. ಜಯದ ಆರಂಭ ಮಾಡುವ ತವಕದಲ್ಲಿರುವ ಕರ್ನಾಟಕ ತಂಡಕ್ಕೆ ಸೆಡ್ಡು ಹೊಡೆಯಲು ಸನ್ನದ್ಧರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT