ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಂಗಣದ ದ್ವಾರಗಳಿಗೆ ದಿಗ್ಗಜರ ಹೆಸರಿಡಿ: ಸುನಿಲ್ ಗಾವಸ್ಕರ್

Published 1 ಏಪ್ರಿಲ್ 2024, 3:28 IST
Last Updated 1 ಏಪ್ರಿಲ್ 2024, 3:28 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ತಂಡವು ಪ್ರಥಮ ರಣಜಿ ಟ್ರೋಫಿ ಜಯಿಸಿದ ಸುವರ್ಣ ಸಂಭ್ರಮ ಆಚರಿ ಸುತ್ತಿದೆ. ದೇಶದ ಕ್ರಿಕೆಟ್‌ಗೆ ಅಮೂಲ್ಯ ಕಾಣಿಕೆ ನೀಡಿರುವ ರಾಜ್ಯದ ಹಲ ವಾರು ಆಟಗಾರರು ಇದ್ದಾರೆ. ಅವರ ಹೆಸರುಗಳನ್ನು ಚಿನ್ನಸ್ವಾಮಿ ಕ್ರೀಡಾಂಗ ಣದ ದ್ವಾರಗಳು ಮತ್ತು ಸ್ಟ್ಯಾಂಡ್‌ಗಳಿಗೆ ನಾಮಕರಣ ಮಾಡಬೇಕು ಎಂದು ಕ್ರಿಕೆಟ್ ವೀಕ್ಷಕ ವಿವರಣೆಗಾರ ಸುನಿಲ್ ಗಾವಸ್ಕರ್ ಹೇಳಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ವಿನೂ ಮಂಕಡ್, ಸುನಿಲ್ ಗಾವಸ್ಕರ್ ಹಾಗೂ ಸಚಿನ್ ತೆಂಡೂಲ್ಕರ್, ದೆಹಲಿಯ ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ  ಬಿಷನ್ ಸಿಂಗ್ ಬೇಡಿ, ಮೊಹಿಂದರ್ ಅಮರನಾಥ್ ಹಾಗೂ ವೀರೇಂದ್ರ ಸೆಹ್ವಾಗ್ ಅವರ ಹೆಸರುಗಳನ್ನು ಸ್ಟ್ಯಾಂಡ್‌ಗಳು ಮತ್ತು ದ್ವಾರಗಳಿಗೆ ನಾಮಕರಣ ಮಾಡಲಾಗಿದೆ. ಅದೇ ಮಾದರಿಯಲ್ಲಿ ಬೆಂಗಳೂರಿನಲ್ಲಿಯೂ ಮಾಡಬೇಕು ಎಂದು ಗಾವಸ್ಕರ್ ಸಲಹೆ ನೀಡಿದ್ದಾರೆ. 

ಭಾನುವಾರ ಕರ್ನಾಟಕ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ)ಯಲ್ಲಿ ಆಯೋಜಿ ಸಿದ್ದ 1974ರ ರಣಜಿ ಟ್ರೋಫಿ ವಿಜೇತ ಆಟಗಾರರ ಸನ್ಮಾನ ಸಮಾರಂಭದಲ್ಲಿ ಗಾವಸ್ಕರ್ ಅವರು ವಿಡಿಯೊ ಮೂಲಕ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಅವರು, ‘ಕರ್ನಾಟಕದ ಕ್ರಿಕೆಟಿಗರು ಬಹಳ ದೊಡ್ಡ ಸಾಧನೆ ಮಾಡಿದ್ದಾರೆ.  ಪ್ರಸನ್ನ ಬಳಗವು 50 ವರ್ಷಗಳ ಹಿಂದೆ ಮಾಡಿದ ಸಾಧನೆಯು ಸ್ಮರಣಾರ್ಹವಾದದ್ದು.  ಆ ಜಯದಿಂದಾಗಿ ಕರ್ನಾಟಕವು ಭಾರತದ ಕ್ರಿಕೆಟ್ ಕ್ಷೇತ್ರದ ಶಕ್ತಿಕೇಂದ್ರವಾಗಿ ಬೆಳೆಯಿತು. ಅಲ್ಲಿಂದ ಇಲ್ಲಿಯವರೆಗೆ ಹಲವು ಆಟಗಾರರನ್ನು ದೇಶಕ್ಕೆ ಸಮರ್ಪಿಸಿದೆ. ಆದ್ದರಿಂದ ರಾಜ್ಯದ ದಿಗ್ಗಜ ಆಟಗಾರರ ಹೆಸರುಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದ ದ್ವಾರಗಳು ಮತ್ತು ಸ್ಟ್ಯಾಂಡ್‌ಗಳಿಗೆ ನಾಮಕರಣ ಮಾಡಬೇಕು. ಆ ಮೂಲಕ ಗೌರವಿಸ ಬೇಕು’ ಎಂದು ಗಾವಸ್ಕರ್ ಹೇಳಿದರು.  

ಅವಕಾಶಗಳ ಬಾಗಿಲು ತೆರೆದ ಜಯ:  ರಣಜಿ ಟ್ರೋಫಿ ಗೆಲ್ಲುವುದು ಹೇಗೆಂದು ತೋರಿಸಿಕೊಟ್ಟ ಶ್ರೇಯ ಕರ್ನಾಟಕದ ಇಎಎಸ್ ಪ್ರಸನ್ನ ನಾಯಕತ್ವದ ತಂಡಕ್ಕೆ ಸಲ್ಲಬೇಕು. ಅ ತಂಡದ ಸಾಧನೆಯ ಕತೆಗಳೇ ತಮಗೆ ಪ್ರೇರಣೆಯಾದವು. ಅಂದಿನ ಜಯದಿಂದಾಗಿ ಕರ್ನಾಟಕದ ಕ್ರಿಕೆಟ್‌ಗೆ ಅವಕಾಶಗಳ ಬಾಗಿಲು ತೆರೆಯಿತು ಎಂದು ಕಾರ್ಯಕ್ರಮದಲ್ಲಿ ಹಾಜರಿದ್ದ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದರು. 

‘ನಾವು ಕರ್ನಾಟಕದ 15 ಮತ್ತು 17 ವರ್ಷದೊಳಗಿನವರ ತಂಡಗಳನ್ನು ಪ್ರತಿನಿಧಿಸುವ ಸಂದರ್ಭದಲ್ಲಿ ಪ್ರಸನ್ನ ಬಳಗದ ಯಶೋಗಾಥೆಗಳನ್ನು ಕೇಳಿ ರೋಮಾಂಚನಗೊಳ್ಳುತ್ತಿದ್ದೆವು. ಆ ತಂಡದಲ್ಲಿ ಆಡಿದ ಮಹನೀಯರು ನಮ್ಮ ವಯೋಮಿತಿಯ ತಂಡಗಳ ಕೋಚ್ ಅಥವಾ ಮ್ಯಾನೇಜರ್ ಆಗಿ ಬರುತ್ತಿದ್ದರು. ಅವರೊಂದಿಗಿನ ಒಡನಾಟದಿಂದ ಬಹಳಷ್ಟು ಕಲಿತೆವು’ ಎಂದರು. 

ರಣಜಿ ವಿಜೇತ ತಂಡದ ಜಿ.ಆರ್‌. ವಿಶ್ವನಾಥ್, ಸೈಯದ್ ಕಿರ್ಮಾನಿ, ಬ್ರಿಜೇಶ್ ಪಟೇಲ್, ಸುಧಾಕರ್ ರಾವ್, ಸಿದ್ದರಾಮ, ಬಿ. ರಘುನಾಥ್‌, ಸಂಜಯ ದೇಸಾಯಿ ಎಸ್. ವಿಜಯಪ್ರಕಾಶ್ ಅವರನ್ನು ಗೌರವಿಸಲಾಯಿತು. 

‘ಆ ಟೂರ್ನಿಯ ಸೆಮಿಫೈನಲ್‌ನಲ್ಲಿ ಬ್ರಿಜೇಶ್ ಆರಂಭ ಕೆಲವು ಎಸೆತಗಳಲ್ಲಿ ಹಿಂಜರಿಕೆಯಿಂದ ಬ್ಯಾಟಿಂಗ್ ಮಾಡಿ ದ್ದರು. ಒಮ್ಮೆ ಬೇರೂರಿದ ನಂತರ ಬೌಲರ್‌ ಗಳಿಗೆ ಸಿಂಹಸ್ವಪ್ನವಾದರು’ ಎಂದು ವಿಶ್ವನಾಥ್ ನೆನಪಿಸಿಕೊಂಡರು. 

ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ಸುನಿಲ್ ಜೋಶಿ ಮತ್ತು ಆರ್. ವಿನಯಕುಮಾರ್ ವಿಡಿಯೊ ಸಂದೇಶ ಗಳ ಮೂಲಕ ಶುಭ ಕೋರಿದರು.  ಭಾರತ ತಂಡದ ಮಾಜಿ ಆಟಗಾರರಾದ ವೆಂಕಟೇಶ್ ಪ್ರಸಾದ್, ದೊಡ್ಡಗಣೇಶ್, ಸುಜಿತ್ ಸೋಮಸುಂದರ್, ಎನ್‌ಸಿಎ ನಿರ್ದೇಶಕ ವಿವಿಎಸ್ ಲಕ್ಷ್ಮಣ್  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT