ಶನಿವಾರ, ಏಪ್ರಿಲ್ 1, 2023
26 °C

ಭಾರತ ವಿರುದ್ಧ ಟೆಸ್ಟ್ ಸರಣಿಗೆ ಕಿವೀಸ್ ತಂಡದಲ್ಲಿ ಐವರು ಸ್ಪಿನ್ನರ್‌ಗಳಿಗೆ ಸ್ಥಾನ!

ಪಿಟಿಐ Updated:

ಅಕ್ಷರ ಗಾತ್ರ : | |

ವೆಲ್ಲಿಂಗ್ಟನ್: ಭಾರತ ವಿರುದ್ಧ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ 15 ಸದಸ್ಯರ ಬಳಗದ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು, ಐವರು ಸ್ಪಿನ್ನರ್‌ಗಳಿಗೆ ಸ್ಥಾನ ಕಲ್ಪಿಸಲಾಗಿದೆ.  

ಬಯೋಬಬಲ್ ದಣಿವಿನಿಂದಾಗಿ ಅನುಭವಿ ಎಡಗೈ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಹಾಗೂ ಆಲ್‌ರೌಂಡರ್ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಟೂರ್ನಿಗೆ ಅಲಭ್ಯರಾಗಿದ್ದಾರೆ. 

ಇದನ್ನೂ ಓದಿ: 

ಆಟಗಾರರ ಯೋಗಕ್ಷೇಮಕ್ಕಾಗಿ ಮೊದಲ ಆದ್ಯತೆ ಕೊಡಲಾಗಿದೆ ಎಂದು ನ್ಯೂಜಿಲೆಂಡ್‌ನ ಕೋಚ್ ಗ್ಯಾರಿ ಸ್ಟೀಡ್ ತಿಳಿಸಿದ್ದಾರೆ. 

ನ್ಯೂಜಿಲೆಂಡ್ ತಂಡದಲ್ಲಿ ಐವರು ಸ್ಪಿನ್ನರ್‌ಗಳನ್ನು ಹೆಸರಿಸಲಾಗಿದೆ. ಅಜಾಜ್ ಪಟೇಲ್, ವಿಲ್ ಸೋಮರ್‌ವಿಲ್, ಮಿಚೆಲ್ ಸ್ಯಾಂಟ್ನರ್, ರಚಿನ್ ರವೀಂದ್ರ ಹಾಗೂ ಗ್ಲೆನ್ ಫಿಲಿಪ್ಸ್ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. 

ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಟೆಸ್ಟ್ ಸರಣಿಯ ವೇಳಾಪಟ್ಟಿ ಇಂತಿದೆ:
ಮೊದಲ ಟೆಸ್ಟ್ (ನ. 25-29): ಕಾನ್ಪುರ
ದ್ವಿತೀಯ ಟೆಸ್ಟ್ (ಡಿ. 3-7): ಮುಂಬೈ 

ನ್ಯೂಜಿಲೆಂಡ್ ತಂಡ ಇಂತಿದೆ:
ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಡೆವೊನ್ ಕಾನ್ವೆ, ಕೈಲ್ ಜೇಮಿಸನ್, ಟಾಮ್ ಲೇಥಮ್, ಹೆನ್ರಿ ನಿಕೋಲಸ್, ಅಜಾಜ್ ಪಟೇಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ವಿಲ್ ಸೋಮರ್‌ವಿಲ್, ಟಿಮ್ ಸೌಥಿ, ರಾಸ್ ಟೇಲರ್, ವಿಲ್ ಯಂಗ್ ಮತ್ತು ನೀಲ್ ವ್ಯಾಗ್ನರ್. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು