ಶಾರ್ಜಾ (ಪಿಟಿಐ): ಜಾರ್ಜಿಯಾ ಪ್ಲಿಮ್ಮರ್ (53;44ಎ) ಅವರ ಅರ್ಧಶತಕದ ಬಲದಿಂದ ನ್ಯೂಜಿಲೆಂಡ್ ತಂಡವು ಐಸಿಸಿ ಮಹಿಳಾ ಟಿ20 ವಿಶ್ವಕಪ್ನ ಎ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 8 ವಿಕೆಟ್ಗಳಿಂದ ಸುಲಭವಾಗಿ ಮಣಿಸಿ, ಸೆಮಿಫೈನಲ್ ಕನಸನ್ನು ಜೀವಂತವಾಗಿರಿಸಿಕೊಂಡಿತು.

‘ಎ’ ಗುಂಪಿನಲ್ಲಿ ಆಡಿರುವ ಮೂರೂ ಪಂದ್ಯಗಳನ್ನು ಗೆದ್ದು 6 ಅಂಕ ಗಳಿಸಿರುವ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದ್ದು, ಸೆಮಿಫೈನಲ್ ಪ್ರವೇಶ ಬಹುತೇಕ ಖಚಿತವಾಗಿದೆ. ಆದರೆ, ನಾಲ್ಕರ ಘಟ್ಟ ಪ್ರವೇಶಿಸುವ ಎರಡನೇ ತಂಡಕ್ಕಾಗಿ ಈಗ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಪೈಪೋಟಿ ಏರ್ಪಟ್ಟಿದೆ.

ಎರಡೂ ತಂಡಗಳು ಮೂರು ಪಂದ್ಯಗಳ ಪೈಕಿ ಎರಡನ್ನು ಗೆದ್ದು ತಲಾ 4 ಪಾಯಿಂಟ್ಸ್ ಗಳಿಸಿವೆ. ಉಭಯ ತಂಡಗಳಿಗೆ ತಲಾ ಒಂದು ಪಂದ್ಯ ಮಾತ್ರ ಬಾಕಿ ಉಳಿದಿದೆ. ಭಾರತ, ಭಾನುವಾರ ಆಸ್ಟ್ರೇಲಿಯಾ ತಂಡವನ್ನು; ಕಿವೀಸ್, ಸೋಮವಾರ ಪಾಕಿಸ್ತಾನವನ್ನು ಎದುರಿಸಲಿದೆ.

ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಲಂಕಾ ತಂಡವು ನಾಯಕಿ ಚಾಮರಿ ಅಟಪಟ್ಟು (35;41) ಅವರ ಬ್ಯಾಟಿಂಗ್ ಬಲದಿಂದ 20 ಓವರ್ಗಳಲ್ಲಿ 115 ರನ್ ಗಳಿಸಿತು. ನ್ಯೂಜಿಲೆಂಡ್ ತಂಡವು 15 ಎಸೆತ ಬಾಕಿ ಇರುವಂತೆ ಗೆಲುವು ಸಾಧಿಸಿತು. ಬೌಲಿಂಗ್ನಲ್ಲಿ ಮಿಂಚಿದ್ದ ಅಮೆಲಿಯಾ ಕೆರ್ (ಔಟಾಗದೇ 34; 31) ಬ್ಯಾಟಿಂಗ್ನಲ್ಲೂ ಗಮನ ಸೆಳೆದರು. ಅವರು ಸಿಕ್ಸರ್ನೊಂದಿಗೆ ತಂಡವನ್ನು ಗೆಲುವಿನ ದಡ ಸೇರಿಸಿದರು.

ಏಷ್ಯಾಕಪ್ ಚಾಂಪಿಯನ್ ಶ್ರೀಲಂಕಾ ತಂಡವು, ಟೂರ್ನಿಯಲ್ಲಿ ಸತತ ನಾಲ್ಕು ಸೋಲಿನೊಂದಿಗೆ ಅಭಿಯಾನ ಮುಗಿಸಿತು.

ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ: 20 ಓವರ್ಗಳಲ್ಲಿ 5ಕ್ಕೆ 115 (ಚಾಮರಿ ಅಟಪಟ್ಟು 35, ಅಮೆಲಿಯಾ ಕೆರ್ 13ಕ್ಕೆ 2, ಲೇ ಕಾಸ್ಪರೆಕ್ 27ಕ್ಕೆ 2). ನ್ಯೂಜಿಲೆಂಡ್: 17.3 ಓವರ್ಗಳಲ್ಲಿ 2ಕ್ಕೆ 118 (ಜಾರ್ಜಿಯಾ ಪ್ಲಿಮ್ಮರ್ 53, ಅಮೆಲಿಯಾ ಕೆರ್ ಔಟಾಗದೇ 34, ಚಾಮರಿ ಅಟಪಟ್ಟು 8ಕ್ಕೆ 1). ಫಲಿತಾಂಶ: ನ್ಯೂಜಿಲೆಂಡ್ಗೆ 8 ವಿಕೆಟ್ ಜಯ. ಪಂದ್ಯದ ಆಟಗಾರ್ತಿ: ಜಾರ್ಜಿಯಾ ಪ್ಲಿಮ್ಮರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.