ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ಕ್ರಿಕೆಟ್‌ನಲ್ಲಿ ಎಸೆದ ಮೊದಲ ಓವರ್‌ನಲ್ಲೇ ಹ್ಯಾಟ್ರಿಕ್ ವಿಕೆಟ್ ಕಿತ್ತ ಮೈಕಲ್

ಅಕ್ಷರ ಗಾತ್ರ

ಬೆಲ್‌ಫಾಸ್ಟ್‌ (ಐರ್ಲೆಂಡ್‌): ನ್ಯೂಜಿಲೆಂಡ್‌ ಹಾಗೂ ಐರ್ಲೆಂಡ್‌ ತಂಡಗಳು ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯಲ್ಲಿ ಮುಖಾಮುಖಿಯಾಗಿವೆ. ಈ ಟೂರ್ನಿ ಮೂಲಕ ಅಂತರರಾಷ್ಟ್ರೀಯ ಚುಟುಕು ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ನ್ಯೂಜಿಲೆಂಡ್‌ನಸ್ಪಿನ್ನರ್‌ ಮೈಕಲ್‌ ಬ್ರೇಸ್‌ವೆಲ್‌ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ.

ಐರ್ಲೆಂಡ್‌ನಲ್ಲಿ ನಡೆಯುತ್ತಿರುವಟೂರ್ನಿಯ ಮೊದಲೆರಡು ಪಂದ್ಯಗಳು ಮುಕ್ತಾಯವಾಗಿದ್ದು, ನ್ಯೂಜಿಲೆಂಡ್‌ 2–0 ಅಂತರದ ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯವನ್ನು 31 ರನ್‌ಗಳಿಂದ ಗೆದ್ದಿದ್ದ ಮಿಚೆಲ್ ಸ್ಯಾಂಟ್ನರ್‌ ಬಳಗ, ಇದೀಗ ಎರಡನೇ ಪಂದ್ಯವನ್ನು 98 ರನ್‌ಗಳಿಂದ ಜಯಿಸಿದೆ. ಕೊನೇ ಪಂದ್ಯ ಜು.22 ರಂದು ನಡೆಯಲಿದೆ.

ಬ್ರೇಸ್‌ವೆಲ್‌ ಸಾಧನೆ
ಎರಡನೇ ಟಿ20 ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದಿದ್ದ ನ್ಯೂಜಿಲೆಂಡ್‌, ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 174ರನ್‌ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಆತಿಥೇಯ ಐರ್ಲೆಂಡ್‌ 13 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 86 ರನ್‌ ಗಳಿಸಿತ್ತು. 14ನೇ ಓವರ್‌ ಬೌಲಿಂಗ್‌ ಮಾಡಿದ ಬ್ರೇಸ್‌ವೆಲ್‌ ಮೊದಲೆರಡು ಎಸೆತಗಳಲ್ಲಿ 5 ರನ್ ಬಿಟ್ಟುಕೊಟ್ಟರು. ಆದರೆ, ನಂತರದ ಮೂರು ಎಸೆತಗಳಲ್ಲಿ ಕ್ರಮವಾಗಿ ಮಾರ್ಕ್‌ ಅದೈರ್‌ (27), ಬ್ಯಾರಿ ಮೆಕ್‌ಕ್ಯಾರ್ಥಿ (11) ಹಾಗೂ ಕ್ರೇಗ್‌ ಯಂಗ್‌ (0) ಅವರ ವಿಕೆಟ್‌ ಕಬಳಿಸಿದರು.

ಹೀಗಾಗಿ ಐರ್ಲೆಂಡ್‌ ಆಟ 91 ರನ್‌ಗೆ ಕೊನೆಯಾಯಿತು. ಇದರೊಂದಿಗೆ ಟಿ20 ಕ್ರಿಕೆಟ್‌ನಲ್ಲಿ ಎಸೆದ ಮೊದಲ ಓವರ್‌ನಲ್ಲೇ ಹ್ಯಾಟ್ರಿಕ್‌ ವಿಕೆಟ್‌ ಕಬಳಿಸಿದ ಬೌಲರ್‌ ಎಂಬ ಶ್ರೇಯಕ್ಕೆ ಭಾಜನರಾದರು.ಅವರು (ಬ್ರೇಸ್‌ವೆಲ್‌) ಮೊದಲ ಪಂದ್ಯದಲ್ಲಿ ಆಡಿದ್ದರಾದರೂ ಬೌಲಿಂಗ್ ಮಾಡಿರಲಿಲ್ಲ.

ಇದಕ್ಕೂ ಮೊದಲು ವೇಗಿಗಳಾದ ಜೇಕಬ್‌ ಓರಮ್‌ (2009, ಶ್ರೀಲಂಕಾ ವಿರುದ್ಧ) ಮತ್ತು ಟಿಮ್‌ ಸೌಥಿ (2010, ಪಾಕಿಸ್ತಾನ ವಿರುದ್ಧ) ನ್ಯೂಜಿಲೆಂಡ್‌ ಪರ ಈ ಮಾದರಿಯ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್‌ ಕಿತ್ತ ಸಾಧನೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT