ವಾಗ್ನರ್-ಬೌಲ್ಟ್‌ ಬಿರುಗಾಳಿ ವೇಗಕ್ಕೆ ದೂಳೀಪಟ

ಶನಿವಾರ, ಮಾರ್ಚ್ 23, 2019
24 °C
ನ್ಯೂಜಿಲೆಂಡ್‌ಗೆ ಜಯ

ವಾಗ್ನರ್-ಬೌಲ್ಟ್‌ ಬಿರುಗಾಳಿ ವೇಗಕ್ಕೆ ದೂಳೀಪಟ

Published:
Updated:
Prajavani

ವೆಲ್ಲಿಂಗ್ಟನ್: ನೀಲ್ ವಾಗ್ನರ್ ಮತ್ತು ಟ್ರೆಂಟ್ ಬೌಲ್ಟ್‌ ಅವರ ಬಿರುಗಾಳಿ ವೇಗದ ಬೌಲಿಂಗ್‌ಗೆ ಬಾಂಗ್ಲಾದೇಶ ತಂಡವು ಮಂಗಳವಾರ ಇಲ್ಲಿ ಮುಕ್ತಾಯವಾದ ನ್ಯೂಜಿಲೆಂಡ್‌ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ದೂಳೀಪಟವಾಯಿತು. 12 ರನ್‌ಗಳಿಂದ ಗೆದ್ದ ಆತಿಥೇಯ ತಂಡವು ಮೂರು ಪಂದ್ಯಗಳ ಸರಣಿಯಲ್ಲಿ 2–0ಯಿಂದ ಮುನ್ನಡೆ ಸಾಧಿಸಿತು.

ಮೂರನೇ ದಿನದಾಟದಲ್ಲಿ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 211 ರನ್‌ ಗಳಿಸಿ ಸರ್ವಪತನವಾಗಿತ್ತು.  ರಾಸ್ ಟೇಲರ್ (200; 212 ಎಸೆತ, 19ಬೌಂಡರಿ, 4ಸಿಕ್ಸರ್) ದ್ವಿಶತಕ ಮತ್ತು ಹೆನ್ರಿ ನಿಕೋಲ್ಸ್‌ (107 ರನ್) ಅವರ ಶತಕದ ಬಲದಿಂದ ತಂಡವು 6 ವಿಕೆಟ್‌ಗಳಿಗೆ 432 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.

ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್
ಬಾಂಗ್ಲಾ
211; ನ್ಯೂಜಿಲೆಂಡ್: 84.5 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 432 ಡಿಕ್ಲೇರ್ಡ್‌
ಎರಡನೇ ಇನಿಂಗ್ಸ್‌
ಬಾಂಗ್ಲಾ:
56 ಓವರ್‌ಗಳಲ್ಲಿ 209 (ಮೊಹಮ್ಮದ್ ಮಿಥುನ್ 47, ಮಹಮೂದುಲ್ಲಾ 67, ಟ್ರೆಂಟ್ ಬೌಲ್ಟ್ 52ಕ್ಕೆ4, ನೀಲ್ ವಾಗ್ನರ್ 45ಕ್ಕೆ5)
ಫಲಿತಾಂಶ: ನ್ಯೂಜಿಲೆಂಡ್‌ಗೆ12 ರನ್‌ಗಳ ಜಯ. ಸರಣಿಯಲ್ಲಿ 2–0 ಮುನ್ನಡೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !