ನ್ಯೂಜಿಲೆಂಡ್‌ ‘ಕ್ಲೀನ್‌ ಸ್ವೀಪ್‌’ ಸಾಧನೆ

7
ಕ್ರಿಕೆಟ್‌: ಅಂತಿಮ ಪಂದ್ಯದಲ್ಲಿ 115ರನ್‌ಗಳಿಂದ ಗೆದ್ದ ವಿಲಿಯಮ್ಸನ್‌ ಬಳಗ

ನ್ಯೂಜಿಲೆಂಡ್‌ ‘ಕ್ಲೀನ್‌ ಸ್ವೀಪ್‌’ ಸಾಧನೆ

Published:
Updated:
Prajavani

ನೆಲ್ಸನ್‌, ನ್ಯೂಜಿಲೆಂಡ್‌: ರಾಸ್‌ ಟೇಲರ್‌ (137; 131ಎ, 9ಬೌಂ, 4ಸಿ) ಮತ್ತು ಹೆನ್ರಿ ನಿಕೋಲ್ಸ್‌ (ಔಟಾಗದೆ 124; 80ಎ, 12ಬೌಂ, 3ಸಿ) ಮಂಗಳವಾರ ಸ್ಯಾಕ್ಸ್‌ಟನ್‌ ಓವಲ್‌ ಕ್ರೀಡಾಂಗಣದಲ್ಲಿ ಶತಕಗಳ ಸಂಭ್ರಮ ಆಚರಿಸಿದರು.

ಇವರ ಆಕರ್ಷಕ ಆಟದ ಬಲದಿಂದ ನ್ಯೂಜಿಲೆಂಡ್‌ ತಂಡ ಮೂರನೆ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 115ರನ್‌ಗಳಿಂದ ಪ್ರವಾಸಿ ಶ್ರಿಲಂಕಾ ತಂಡವನ್ನು ಪರಾಭವಗೊಳಿಸಿತು. ಇದರೊಂದಿಗೆ ಸರಣಿ ‘ಕ್ಲೀನ್‌ ಸ್ವೀಪ್‌’ ಸಾಧನೆ ಮಾಡಿತು.

ಮೊದಲು ಬ್ಯಾಟ್‌ ಮಾಡಿದ ಕೇನ್‌ ವಿಲಿಯಮ್ಸನ್‌ ಸಾರಥ್ಯದ ಆತಿಥೇಯ ತಂಡ 50 ಓವರ್‌ಗಳಲ್ಲಿ 4 ವಿಕೆಟ್‌ಗೆ 364ರನ್‌ ದಾಖಲಿಸಿತು.

ಮಾರ್ಟಿನ್‌ ಗಪ್ಟಿಲ್‌ (2) ಮತ್ತು ಕಾಲಿನ್‌ ಮನ್ರೊ (21) ಬೇಗನೆ ಔಟಾದರು. ಆದರೆ ನಾಯಕ ವಿಲಿಯಮ್ಸನ್‌ (55; 65ಎ, 6ಬೌಂ, 1ಸಿ), ಟೇಲರ್‌ ಮತ್ತು ನಿಕೋಲ್ಸ್‌ ಅಮೋಘ ಜೊತೆಯಾಟಗಳನ್ನು ಆಡಿ ತವರಿನ ಅಭಿಮಾನಿಗಳನ್ನು ರಂಜಿಸಿದರು.

ಕಠಿಣ ಗುರಿ ಬೆನ್ನಟ್ಟಿದ ಸಿಂಹಳೀಯ ನಾಡಿನ ತಂಡ 41.4 ಓವರ್‌ಗಳಲ್ಲಿ 249ರನ್‌ಗಳಿಗೆ ಹೋರಾಟ ಮುಗಿಸಿತು.

ಆರಂಭಿಕರಾದ ನಿರೋಷನ್‌ ಡಿಕ್ವೆಲ್ಲಾ (48; 37ಎ, 3ಬೌಂ, 2ಸಿ) ಮತ್ತು ಧನಂಜಯ ಡಿಸಿಲ್ವ (36; 29ಎ, 5ಬೌಂ, 1ಸಿ) ಲಂಕಾ ತಂಡಕ್ಕೆ ಅಬ್ಬರದ ಆರಂಭ ನೀಡಿದರು. ಈ ಜೋಡಿ 49 ಎಸೆತಗಳಲ್ಲಿ 66ರನ್‌ ದಾಖಲಿಸಿತು. ಕುಶಾಲ್‌ ಪೆರೇರಾ (43; 49ಎ, 5ಬೌಂ, 1ಸಿ) ಮತ್ತು ತಿಸಾರ ಪೆರೇರಾ (80; 63ಎ, 7ಬೌಂ, 3ಸಿ) ಕೂಡಾ ಕೆಚ್ಚೆದೆಯಿಂದ ಹೋರಾಡಿದರು. ಮಧ್ಯಮ ಮತ್ತು ಕೆಳ ಕ್ರಮಾಂಕದ ಆಟಗಾರರ ವೈಫಲ್ಯ ತಂಡಕ್ಕೆ ಮುಳುವಾಯಿತು.

ಸಂಕ್ಷಿಪ್ತ ಸ್ಕೋರ್‌

ನ್ಯೂಜಿಲೆಂಡ್‌: 50 ಓವರ್‌ಗಳಲ್ಲಿ 4 ವಿಕೆಟ್‌ಗೆ 364 (ಕಾಲಿನ್‌ ಮನ್ರೊ 21, ಕೇನ್‌ ವಿಲಿಯಮ್ಸನ್‌ 55, ರಾಸ್‌ ಟೇಲರ್‌ 137, ಹೆನ್ರಿ ನಿಕೋಲ್ಸ್‌ ಔಟಾಗದೆ 124, ಜೇಮ್ಸ್‌ ನೀಶಮ್‌ ಔಟಾಗದೆ 12; ಲಸಿತ್‌ ಮಾಲಿಂಗ 93ಕ್ಕೆ3, ಲಕ್ಷಣ್‌ ಸಂದಕನ್‌ 54ಕ್ಕೆ1).

ಶ್ರೀಲಂಕಾ: 41.4 ಓವರ್‌ಗಳಲ್ಲಿ 249 (ನಿರೋಷನ್‌ ಡಿಕ್ವೆಲ್ಲಾ 46, ಧನಂಜಯ ಡಿಸಿಲ್ವ 36, ಕುಶಾಲ್‌ ಪೆರೇರಾ 43, ತಿಸಾರ ಪೆರೇರಾ 80, ಧನುಷ್ಕಾ ಗುಣತಿಲಕ 31; ಟಿಮ್‌ ಸೌಥಿ 46ಕ್ಕೆ1, ಲೂಕಿ ಫರ್ಗ್ಯೂಸನ್‌ 40ಕ್ಕೆ4, ಜೇಮ್ಸ್‌ ನೀಶಮ್‌ 34ಕ್ಕೆ1, ಈಶ್‌ ಸೋಧಿ 40ಕ್ಕೆ3).

ಫಲಿತಾಂಶ: ನ್ಯೂಜಿಲೆಂಡ್‌ ತಂಡಕ್ಕೆ 115ರನ್‌ ಗೆಲುವು ಮತ್ತು 3–0ರಲ್ಲಿ ಸರಣಿ ಕೈವಶ.

‍ಪಂದ್ಯ ಶ್ರೇಷ್ಠ: ರಾಸ್‌ ಟೇಲರ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !