ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಂಟನರ್‌ ಕೈಚಳಕ: ನ್ಯೂಜಿಲೆಂಡ್‌ಗೆ ಜಯ

ಕ್ರಿಕೆಟ್‌
Last Updated 3 ನವೆಂಬರ್ 2019, 17:44 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್‌: ಮಿಷೆಲ್‌ ಸ್ಯಾಂಟನರ್‌ (25ಕ್ಕೆ3) ಮತ್ತು ನಾಯಕ ಟಿಮ್‌ ಸೌಥಿ (25ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ನ್ಯೂಜಿಲೆಂಡ್‌ ತಂಡ ಎರಡನೇ ಟ್ವೆಂಟಿ–20 ಪಂದ್ಯದಲ್ಲಿ 21ರನ್‌ಗಳಿಂದ ಇಂಗ್ಲೆಂಡ್‌ ತಂಡವನ್ನು ಮಣಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 1–1 ಸಮಬಲ ಸಾಧಿಸಿದೆ.

ವೆಸ್ಟ್‌ಪ್ಯಾಕ್‌ ಕ್ರೀಡಾಂಗಣದಲ್ಲಿ ಭಾನುವಾರ ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 176ರನ್‌ ಪೇರಿಸಿತು.

ಮಾರ್ಟಿನ್‌ ಗಪ್ಟಿಲ್‌ (41; 28ಎ, 3ಬೌಂ, 2ಸಿ) ಮತ್ತು ಜೇಮ್ಸ್‌ ನೀಶಮ್‌ (42; 22ಎ, 2ಬೌಂ, 4ಸಿ) ಸ್ಫೋಟಕ ಬ್ಯಾಟಿಂಗ್‌ ಮಾಡಿ ತಂಡದ ಮೊತ್ತ ಹೆಚ್ಚಿಸಿದರು.

ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ತಂಡವು 19.5 ಓವರ್‌ಗಳಲ್ಲಿ 155ರನ್‌ಗಳಿಗೆ ಆಲೌಟ್‌ ಆಯಿತು. ಈ ತಂಡದ ಕ್ರಿಸ್‌ ಜೋರ್ಡನ್‌ (23ಕ್ಕೆ3) ಮತ್ತು (36ರನ್‌; 19ಎ, 3ಬೌಂ, 3ಸಿ) ಅವರ ಆಲ್‌ರೌಂಡ್‌ ಆಟ ವ್ಯರ್ಥವಾಯಿತು.

ಸಂಕ್ಷಿಪ್ತ ಸ್ಕೋರ್‌
ನ್ಯೂಜಿಲೆಂಡ್‌:
20 ಓವರ್‌ಗಳಲ್ಲಿ 8 ವಿಕೆಟ್‌ಗೆ 176 (ಮಾರ್ಟಿನ್‌ ಗಪ್ಟಿಲ್‌ 41, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ 28, ರಾಸ್‌ ಟೇಲರ್‌ 28, ಜೇಮ್ಸ್‌ ನೀಶಮ್‌ 42; ಸ್ಯಾಮ್‌ ಕರನ್‌ 22ಕ್ಕೆ2, ಕ್ರಿಸ್‌ ಜೋರ್ಡನ್‌ 23ಕ್ಕೆ3).

ಇಂಗ್ಲೆಂಡ್‌: 19.5 ಓವರ್‌ಗಳಲ್ಲಿ 155 (ಡೇವಿಡ್‌ ಮಲಾನ್‌ 39, ಎಯೊನ್‌ ಮಾರ್ಗನ್‌ 32, ಕ್ರಿಸ್‌ ಜೋರ್ಡನ್‌ 36; ಟಿಮ್‌ ಸೌಥಿ 25ಕ್ಕೆ2, ಮಿಷೆಲ್‌ ಸ್ಯಾಂಟನರ್‌ 25ಕ್ಕೆ3, ಈಶ್‌ ಸೋಧಿ 37ಕ್ಕೆ2).

ಫಲಿತಾಂಶ: ನ್ಯೂಜಿಲೆಂಡ್‌ಗೆ 21ರನ್‌ ಗೆಲುವು.

ಪಂದ್ಯಶ್ರೇಷ್ಠ: ಮಿಷೆಲ್‌ ಸ್ಯಾಂಟನರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT