ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024: ಲಖನೌಗೆ ಸಮಾಧಾನಕರ ಜಯ

ಪೂರನ್ ಬಿರುಸಿನ ಅರ್ಧ ಶತಕ
Published 17 ಮೇ 2024, 20:49 IST
Last Updated 17 ಮೇ 2024, 20:49 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಅಧಿಕ ಸ್ಕೋರ್‌ಗಳನ್ನು ಕಂಡ ಐಪಿಎಲ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ ಶುಕ್ರವಾರ 18 ರನ್‌ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ, ಗೆಲುವಿನೊಡನೆ ಅಭಿಯಾನ ಮುಕ್ತಾಯಗೊಳಿಸಿತು. 
ಈಗಾಗಲೇ ಪ್ಲೇ ಆಫ್ ಅವಕಾಶದಿಂದ ಹೊರಗೆ ಬಿದ್ದಿರುವ ಲಖನೌ ತಂಡ ಆರನೇ ಸ್ಥಾನಕ್ಕೇರಿತು. ಮುಂಬೈ ತಂಡ ಮೂರು ವರ್ಷಗಳಲ್ಲಿ ಎರಡನೇ ಸಲ ಕೊನೆ ಸ್ಥಾನಕ್ಕೆ ಇಳಿಯಿತು.

ಈ ಹಿಂದಿನ ಪಂದ್ಯಗಳಲ್ಲಿ ಪರದಾಡಿದ ರೋಹಿತ್ ಶರ್ಮಾ (68, 38ಎ) ಆರಂಭದಲ್ಲಿ ಮತ್ತು ನಮನ್‌ ಧೀರ್ (ಅಜೇಯ 62, 28) ಅವರು ಕೊನೆಯಲ್ಲಿ ಭರ್ಜರಿ ಅರ್ಧ ಶತಕದ ಆಟವಾಡಿದರೂ ಲಖನೌ ನಿಗದಿಪಡಿಸಿದ್ದ 215 ರನ್ ಗಳ ಗುರಿ ತಲುಪಲು ಆಗಲಿಲ್ಲ. ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 196 ರನ್ ಗಳಿಸಿತು. 

ನಮನ್‌ ಧೀರ್‌ಗೆ ಇದು ಐಪಿಎಲ್‌ನಲ್ಲಿ ಮೊದಲ ಅರ್ಧ ಶತಕ. ಕೃಣಾಲ್ ಪಾಂಡ್ಯ (29ಕ್ಕೆ1) ಬಿಗು ಬೌಲಿಂಗ್ ಪ್ರದರ್ಶಿಸಿಲ್ಲದೆ, ಅಂತಿಮ ಓವರ್‌ನಲ್ಲಿ ಒಂದು ಸಿಕ್ಸರ್ ತಡೆದು ಗಮನ ಸೆಳೆದರು.

ಸೂರ್ಯಕುಮಾರ್ ಅವರಿಗೆ ಖಾತೆ ತೆರೆಯಲು ಕೃಣಾಲ್ ಅವಕಾಶ ನೀಡಲಿಲ್ಲ.  
ಇದಕ್ಕೆ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಲಖನೌ ತಂಡದ ನಾಯಕ ಕೆ.ಎಲ್.ರಾಹುಲ್ ಅವರು ಆರಂಭದಲ್ಲೇ ಗಳಿಸಿದ 55 ರನ್ ಹಾಗೂ ಕೊನೆಯಲ್ಲಿ ನಿಕೊಲಸ್ ಪೂರನ್ 29 ಎಸೆತಗಳಲ್ಲಿ ಗಳಿಸಿದ ಮಿಂಚಿನ 75 ರನ್‌ಗಳ ನೆರವಿನಿಂದ ಆರು ವಿಕೆಟ್‌ಗೆ 214 ರನ್‌ಗಳ ದೊಡ್ಡ ಮೊತ್ತ ಕಲೆ ಹಾಕಿತು. ಮಳೆಯ ಕಾರಣ ಕೆಲ ಕಾಲ ಪಂದ್ಯ ಸ್ಥಗಿತಗೊಂಡಿತು.  ಸ್ಟೊಯಿನಿಸ್ (28; 22ಎ) ಅವರು ರಾಹುಲ್ ಜತೆಗೆ ಸೇರಿ 49 ರನ್‌ ಸೇರಲು ಕಾರಣರಾದರು.


ಸಂಕ್ಷಿಪ್ತ ಸ್ಕೋರು: ಲಖನೌ ಸೂಪರ್‌ಜೈಂಟ್ಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 214 (ಕೆ.ಎಲ್. ರಾಹುಲ್ 55, ಮಾರ್ಕಸ್ ಸ್ಟೊಯಿನಿಸ್ 28, ನಿಕೊಲಸ್ ಪೂರನ್ 75, ಆಯುಷ್ ಬಡೋನಿ  ಔಟಾಗದೆ 22, ನುವಾನ್ ತುಷಾರ 28ಕ್ಕೆ3, ಪೀಯೂಷ್ ಚಾವ್ಲಾ 29ಕ್ಕೆ3) ಮುಂಬೈ ಇಂಡಿಯನ್ಸ್‌: 20 ಓವರ್‌ಗಳಲ್ಲಿ  (ರೋಹಿತ್ ಶರ್ಮಾ 68, ಡೆವಾಲ್ಡ್ ಬ್ರೆವಿಸ್ 23, ನಮನ್ ಧೀರ್ ಔಟಾಗದೇ 62, ರವಿ ಬಿಷ್ಣೋಯಿ 37ಕ್ಕೆ2) 

ಕೆ.ಎಲ್. ರಾಹುಲ್ ಬ್ಯಾಟಿಂಗ್ ಸ
ಕೆ.ಎಲ್. ರಾಹುಲ್ ಬ್ಯಾಟಿಂಗ್ ಸ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT