ಸೋಮವಾರ, ಆಗಸ್ಟ್ 8, 2022
21 °C
ವೆಸ್ಸ್ ಇಂಡೀಸ್ ತಂಡದ ವಿರುದ್ಧ ಎರಡನೇ ಟೆಸ್ಟ್ ಪಂದ್ಯ

NZ VS WI:ನಿಕೋಲ್ಸ್ ಶತಕ: ನ್ಯೂಜಿಲೆಂಡ್ ಉತ್ತಮ ಮೊತ್ತ

ಎಪಿ Updated:

ಅಕ್ಷರ ಗಾತ್ರ : | |

Prajavani

ವೆಲ್ಲಿಂಗ್ಟನ್‌: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹೆನ್ರಿ ನಿಕೋಲ್ಸ್ (ಔಟಾಗದೆ 117, 207 ಎಸೆತ) ಅವರ ಶತಕವು ನ್ಯೂಜಿಲೆಂಡ್ ತಂಡಕ್ಕೆ ಬಲ ತಂದುಕೊಟ್ಟಿತು. ಅವರ ಆಟದ ನೆರವಿನಿಂದ ಆತಿಥೇಯ ತಂಡವು, ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನವಾದ ಶುಕ್ರವಾರ 6 ವಿಕೆಟ್‌ಗೆ 294 ರನ್‌ ಗಳಿಸಿದೆ.

ಇಲ್ಲಿಯ ಬೇಸಿನ್ ರಿಸರ್ವ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಪ್ರವಾಸಿ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ತಂಡಕ್ಕೆ ಮೊದಲ ವಿಕೆಟ್‌ ಜೊತೆಯಾಟದಲ್ಲಿ ಟಾಮ್‌ ಲೇಥಮ್‌ (27) ಹಾಗೂ ಟಾಮ್ ಬ್ಲಂಡೆಲ್‌ (14) 31 ರನ್‌ ಸೇರಿಸಿದರು. ಬ್ಲಂಡೆಲ್‌ ವಿಕೆಟ್ ಗಳಿಸಿದ ಶಾನನ್‌ ಗೇಬ್ರಿಯಲ್‌ (57ಕ್ಕೆ 3)ಈ ಹೋಲ್ಡರ್ ಜೊತೆಯಾಟವನ್ನು ಮುರಿದರು. ಚೇಮರ್ ಹೋಲ್ಡರ್ ಅವರು ಲೇಥಮ್‌ ವಿಕೆಟ್‌ ತಮ್ಮದಾಗಿಸಿಕೊಂಡರು. ರಾಸ್‌ ಟೇಲರ್‌ (9) ಅವರ ಬ್ಯಾಟ್ ಸದ್ದು ಮಾಡಲಿಲ್ಲ.

ಈ ಹಂತದಲ್ಲಿ ಜೊತೆಗೂಡಿದ ವಿಲ್ ಯಂಗ್‌ (43) ಹಾಗೂ ನಿಕೋಲ್ಸ್ ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 70 ರನ್ ಸೇರಿಸಿದರು. ಆ ಬಳಿಕ ನಿಕೋಲ್ಸ್ ಅವರು ಬಿ.ಜೆ.ವಾಟ್ಲಿಂಗ್‌ ಜೊತೆ 55 ಹಾಗೂ ಡೆರಿಲ್‌ ಮಿಚೆಲ್‌ ಜೊತೆ 83 ರನ್‌ಗಳ ಜೊತೆಯಾಟವಾಡಿದರು.

‘ಪಿತೃತ್ವ ರಜೆ‘ ಪಡೆದಿರುವ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಈ ಪಂದ್ಯದಲ್ಲಿ ಆಡುತ್ತಿಲ್ಲ. ಅವರ ಬದಲಿಗೆ ಟಾಮ್‌ ಲೇಥಮ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲೆಂಡ್‌ ಮೊದಲ ಇನಿಂಗ್ಸ್: 84 ಓವರ್‌ಗಳಲ್ಲಿ 6 ವಿಕೆಟ್‌ಗೆ 294 (ಹೆನ್ರಿ ನಿಕೋಲ್ಸ್ ಔಟಾಗದೆ 117, ವಿಲ್‌ ಯಂಗ್‌ 43, ಡೆರಿಲ್‌ ಮಿಚೆಲ್‌ 42, ಬಿ.ಜೆ.ವಾಟ್ಲಿಂಗ್‌ 30; ಶಾನನ್‌ ಗೇಬ್ರಿಯಲ್‌ 57ಕ್ಕೆ 3, ಚೇಮರ್ ಹೋಲ್ಡರ್‌ 65ಕ್ಕೆ 2, ಅಲ್ಜರಿ ಜೋಸೆಫ್‌ 65ಕ್ಕೆ 1).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು