ಗುರುವಾರ , ಅಕ್ಟೋಬರ್ 22, 2020
21 °C

ಕ್ವಾರಂಟೈನ್‌ ಇಲ್ಲದೇ ಕಣಕ್ಕಿಳಿದ ಕರನ್ ಸ್ಯಾಮ್ ಕರನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಬುಧಾಬಿ (ಪಿಟಿಐ): ಶುಕ್ರವಾರವಷ್ಟೇ ಅಬುಧಾಬಿಗೆ ಬಂದಿಳಿದಿದ್ದ  ಸ್ಯಾಮ್ ಕರನ್ ಶನಿವಾರ ಮುಂಬೈ  ಎದುರಿನ ಪಂದ್ಯದಲ್ಲಿ ಕಣಕ್ಕಿಳಿದರು.

ಜೀವ ಸುರಕ್ಷಾ ನಿಯಮದ ಪ್ರಕಾರ; ಟೂರ್ನಿಯಲ್ಲಿ ಆಡುವ ಮುನ್ನ ಆರು ದಿನಗಳ ಕ್ವಾರಂಟೈನ್ (ಪ್ರತ್ಯೇಕವಾಸ) ನಿಯಮ ಪಾಲಿಸಬೇಕು. ಆದರೆ ಆಸ್ಟ್ರೇಲಿಯಾದ ಸ್ಯಾಮ್ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿದ ನಂತರ ಇಲ್ಲಿಗೆ ಬಂದಿದ್ದರು.

ಯುಎಇಗೆ ಬರುವ ಮುನ್ನ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಆಟಗಾರರು ತಾವೆಲ್ಲರೂ ಈಗಾಗಲೇ ಜೀವಸುರಕ್ಷಾ ವಲಯದಲ್ಲಿ ಆಡಿ ಬಂದಿರುವುದರಿಂದ ಕ್ವಾರಂಟೈನ್ ನಿಯಮ ಕಡಿತ ಮಾಡಬೇಕು ಎಂದು ಮನವಿ ಮಾಡಿದ್ದರು.

ಆದರೆ ಬಿಸಿಸಿಐ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಚೆನ್ನೈ ತಂಡದಲ್ಲಿ ಸ್ಯಾಮ್ ಕರನ್ ಕಣಕ್ಕಿಳಿದಿದ್ದರಿಂದ ಅವರೊಂದಿಗೆ ಬಂದಿರುವ ಉಳಿದ ಆಟಗಾರರಿಗೂ ಕ್ವಾರಂಟೈನ್ ನಿಯಮದಿಂದ ರಿಯಾಯಿತಿ ನೀಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು