ಮಂಗಳವಾರ, ಜುಲೈ 14, 2020
28 °C

ಪ್ರೇಕ್ಷಕರಿಲ್ಲದ ಕ್ರಿಕೆಟ್‌ನಲ್ಲಿ ಮೋಹಕತೆ ಇಲ್ಲ: ವಿರಾಟ್ ಕೊಹ್ಲಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ರೇಕ್ಷಕರಿಲ್ಲದ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ಆಡಿದರೆ ಆಟದ ಮೋಹಕತೆ ಕಳೆದುಕೊಂಡಂತಾಗುತ್ತದೆ  ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್ –19 ವೈರಸ್‌ ಪರಿಣಾಮವಾಗಿ ಲಾಕ್‌ಡೌನ್ ವಿಧಿಸಲಾಗಿದೆ. ಇದರಿಂದಾಗಿ ಕ್ರಿಕೆಟ್ ಚಟುವಟಿಕೆಗಳು ಸ್ಥಗಿತವಾಗಿವೆ. ಸೋಂಕು ಹರಡುವುದನ್ನು ತಡೆಯಲು  ಕ್ರಿಕೆಟ್ ಪಂದ್ಯಗಳನ್ನು  ಪ್ರೇಕ್ಷಕರಿಲ್ಲದ ಕ್ರೀಡಾಂಗಣದಲ್ಲಿ  ನಡೆಸಬೇಕು ಎಂಬು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಈ ಕುರಿತು ಸ್ಟಾರ್ ಸ್ಪೋರ್ಟ್ಸ್‌ ವಾಹಿನಿಯ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ನಮಗೆಲ್ಲರಿಗೂ ಪ್ರೇಕ್ಷಕರಿಂದ ತುಂಬಿದ ಕ್ರೀಡಾಂಗಣದಲ್ಲಿ ಆಡಿ ರೂಢಿಯಾಗಿದೆ.  ಈ ಪರಿಸ್ಥಿತಿಯಲ್ಲಿ ಖಾಲಿ ಕ್ರೀಡಾಂಗಣದಲ್ಲಿ ಆಡುವುದನ್ನು ಎಲ್ಲರೂ ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ನಾವು ಕ್ರೀಡಾ ಮನೋಭಾವದಿಂದ ಆಡಿಯೇ ಆಡುತ್ತೇವೆ. ಆದರೆ ಆ ಜಾದೂಮಯ ವಾತಾವರಣದ ಅನುಭವದಿಂದ ವಂಚಿತರಾಗುತ್ತೇವೆ. ಅದನ್ನು ಈಗ ನಿರೀಕ್ಷೆ ಮಾಡುವುದೂ ತಪ್ಪಾಗುತ್ತದೆ’ ಎಂದಿದ್ದಾರೆ.

ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್‌, ಜೇಸನ್ ರಾಯ್. ಜೋಸ್ ಬಟ್ಟರ್ ಮತ್ತು ಆಸ್ಟ್ರೇಲಿಯಾ ಪ್ಯಾಟ್ ಕಮಿನ್ಸ್‌ ಅವರು ಪ್ರೇಕ್ಷಕರಿಲ್ಲದ ಕ್ರೀಡಾಂಗಣದಲ್ಲಿ ಪಂದ್ಯ ನಡೆಸಲು ಬೆಂಬಲ ಸೂಚಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು