ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಐಪಿಎಲ್ ಪಂದ್ಯಗಳಿಗೆ ನೀರಿನ ಸಮಸ್ಯೆ ಇಲ್ಲ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ

Published 12 ಮಾರ್ಚ್ 2024, 16:14 IST
Last Updated 12 ಮಾರ್ಚ್ 2024, 16:14 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ತಲೆದೋರಿರುವ ನೀರಿನ ಕೊರತೆಯ ಸಮಸ್ಯೆಯು ಇದೇ ತಿಂಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಿಗೆ ಬಾಧಿಸುವುದಿಲ್ಲ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮೂಲಗಳು ಹೇಳಿವೆ

ಕ್ರೀಡಾಂಗಣದಲ್ಲಿ ಬಹುಕಾಲದಿಂದ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಮತ್ತು ಮಳೆ ನೀರು ಸಂಗ್ರಹ  ವ್ಯವಸ್ಥೆಯನ್ನು ನಿರ್ವಹಣೆ ಮಾಡಲಾಗುತ್ತಿದೆ. ಆದ್ದರಿಂದ ನೀರಿನ ‍ಪಂದ್ಯಗಳ ಸಂದರ್ಭದಲ್ಲಿ ನೀರಿನ ಸಮಸ್ಯೆಯ ‘ಬಿಸಿ’ ತಟ್ಟುವ ಸಾಧ್ಯತೆ ತೀರಾ ಕಡಿಮೆ ಎಂದು ಮೂಲಗಳು ತಿಳಿಸಿವೆ.

ಐಪಿಎಲ್‌ ಟೂರ್ನಿಗಾಗಿ ಪ್ರಕಟಿಸಿರುವ ಮೊದಲ ವೇಳಾಪಟ್ಟಿಯಲ್ಲಿ ಮೂರು ಪಂದ್ಯಗಳು ಇಲ್ಲಿ ನಡೆಯಲಿವೆ. ಮೊದಲ ಪಂದ್ಯವು ಇದೇ 25ರಂದು ನಡೆಯುವುದು. 

‘ನೀರಿಗೆ ಸಂಬಂಧಿಸಿದಂತೆ ನಮಗೆ ಯಾವುದೇ ಸಮಸ್ಯೆ ಇಲ್ಲ. ರಾಜ್ಯ ಸರ್ಕಾರವು  ಹೊರಡಿಸಿರುವ ನೀರು ಬಳಕೆ ಮಾರ್ಗಸೂಚಿಯನ್ನು ನಾವು (ಕೆಎಸ್‌ಸಿಎ ಪದಾಧಿಕಾರಿಗಳು) ಸ್ವೀಕರಿಸಿದ್ದೇವೆ. ಈ ಕುರಿತು ಪದಾಧಿಕಾರಿಗಳೊಂದಿಗೆ ಚರ್ಚೆ ಸಡೆಸಲಾಗುತ್ತಿದೆ’ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶುಭೇಂದು ಘೋಷ್ ತಿಳಿಸಿದ್ದಾರೆ. 

‘ಪಿಚ್ ಮತ್ತು ಹೊರಾಂಗಣಕ್ಕಾಗಿ ನಾವು ಎಸ್‌ಟಿಪಿ ಘಟಕದ ನೀರು ಬಳಸುತ್ತಿದ್ದೇವೆ.  ಕ್ರೀಡಾಂಗಣದಲ್ಲಿ ಕೆಲವು ಕಾರ್ಯಗಳಿಗಾಗಿ ಬಳಸಲು ಕೂಡ ಇದೇ ಸಂಸ್ಕರಿತ ನೀರು ಬಳಕೆ ಮಾಡುತ್ತಿದ್ದೇವೆ. ಪಂದ್ಯದ ಆಯೋಜನೆಯಾದಾಗ 10 ರಿಂದ 15 ಸಾವಿರ  ಲೀಟರ್‌ಗಳಷ್ಟು ನೀರು ಬೇಕಾಗಬಹುದು. ಇದು ಎಸ್‌ಟಿಪಿ ಘಟಕದಿಂದ ಪೂರೈಕೆಯಾಗುವ ಸಾಮರ್ಥ್ಯ ಇದೆ. ಕ್ರೀಡಾಂಗಣಕ್ಕೆ ನೀರುಣಿಸಲು ಅಂತರ್ಜಲ ಬಳಸುತ್ತಿಲ್ಲ. ನೀರು ಬಳಕೆಯ ಬಗ್ಗೆ ಸರ್ಕಾರವು ರೂಪಿಸಿರುವ ಹೊಸ ನಿಯಮಕ್ಕೆ ನಮ್ಮ ಯೋಜನೆಗಳು ಹೊಂದಾಣಿಕೆಯಾಗುತ್ತವೆ’ ಎಂದೂ ಘೋಷ್ ವಿಶ್ವಾಸ ವ್ಯಕ್ತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT