ಟೆಸ್ಟ್ ಕ್ರಿಕೆಟ್: ಕಿವೀಸ್ಗೆ ಕೇನ್, ಟಾಮ್ ಆಸರೆ

ಹ್ಯಾಮಿಲ್ಟನ್: ಆರಂಭಿಕ ಆಟಗಾರ ಟಾಮ್ ಲೇಥಮ್ ಮತ್ತು ನಾಯಕ ಕೇನ್ ವಿಲಿಯಮ್ಸನ್ ಅವರ ಚೆಂದದ ಬ್ಯಾಟಿಂಗ್ ಬಲದಿಂದ ನ್ಯೂಜಿಲೆಂಡ್ ತಂಡವು ಗುರುವಾರ ವೆಸ್ಟ್ ಇಂಡೀಸ್ ಎದುರು ಆರಂಭವಾದ ಮೊದಲ ಟೆಸ್ಟ್ನಲ್ಲಿ ಉತ್ತಮ ಮೊತ್ತ ಕಲೆಹಾಕಿದೆ.
ಟಾಸ್ ಗೆದ್ದ ವೆಸ್ಟ್ ಇಂಡೀಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಾಲ್ಕನೇ ಓವರ್ನಲ್ಲಿಯೇ ಶಾನನ್ ಗ್ಯಾಬ್ರಿಯಲ್ ಆತಿಥೇಯ ತಂಡದ ವಿಲ್ ಯಂಗ್ ವಿಕೆಟ್ ಕಬಳಿಸಿ, ಪೆಟ್ಟುಕೊಟ್ಟರು. ಈ ಹಂತದಲ್ಲಿ ಟಾಮ್ (86; 194ಎಸೆತ, 12ಬೌಂಡರಿ, 1ಸಿಕ್ಸರ್ ) ಜೊತೆಗೂಡಿದ ಕೇನ್ ವಿಲಿಯಮ್ಸನ್ (ಬ್ಯಾಟಿಂಗ್ 97; 219ಎ) ಎರಡನೇ ವಿಕೆಟ್ ಜೊತೆಯಾಟದಲ್ಲಿ 154 ರನ್ ಸೇರಿಸಿದರು. ಇದರಿಂದಾಗಿ ತಂಡವು ದಿನದಾಟದ ಅಂತ್ಯಕ್ಕೆ 78 ಓವರ್ಗಳಲ್ಲಿ 2 ವಿಕೆಟ್ಗಳಿಗೆ 243 ರನ್ ಗಳಿಸಿತು.
ಟಾಮ್ 56ನೇ ಓವರ್ನಲ್ಲಿ ಕೇಮರ್ ರೋಚ್ ಬೌಲಿಂಗ್ನಲ್ಲಿ ಔಟಾದ ನಂತರ ಕೇನ್ ಜೊತೆಗೂಡಿದ ಅನುಭವಿ ಆಟಗಾರ ರಾಸ್ ಟೇಲರ್ (ಔಟಾಗದೆ 31; 61ಎ) ಇನಿಂಗ್ಸ್ಗೆ ಬಲ ತುಂಬಿದರು. ಮುರಿಯದ ಮೂರನೇ ವಿಕೆಟ್ ಜೊತೆಯಾಟದಲ್ಲಿ 75 ರನ್ಗಳನ್ನು ಸೇರಿಸಿದರು.
ಕೊರೊನಾ ಕಾಲಘಟ್ಟದಲ್ಲಿ ನ್ಯೂಜಿಲೆಂಡ್ ತಂಡವು ಆಡುತ್ತಿರುವ ಮೊದಲ ಟೆಸ್ಟ್ ಇದಾಗಿದೆ. ವೆಸ್ಟ್ ಇಂಡೀಸ್ ತಂಡವು ಈಗಾಗಲೇ ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿ ಆಡಿತ್ತು.
ಸಂಕ್ಷಿಪ್ತ ಸ್ಕೋರು
ನ್ಯೂಜಿಲೆಂಡ್: 78 ಓವರ್ಗಳಲ್ಲಿ 2 ವಿಕೆಟ್ಗಳಿಗೆ 243 (ಟಾಮ್ ಲೇಥಮ್ 86, ಕೇನ್ ವಿಲಿಯಮ್ಸನ್ ಬ್ಯಾಟಿಂಗ್ 97, ರಾಸ್ ಟೇಲರ್ ಬ್ಯಾಟಿಂಗ್ 31, ಕೇಮರ್ ರೋಚ್ 53ಕ್ಕೆ1, ಶಾನನ್ ಗ್ಯಾಬ್ರಿಯಲ್ 62ಕ್ಕೆ1)
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.