ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜದ್ರಾನ್‌ ಭರ್ಜರಿ ಆಟ: ಶ್ರೀಲಂಕಾ ಮಣಿಸಿದ ಅಫ್ಗಾನಿಸ್ತಾನ

Published 2 ಜೂನ್ 2023, 14:20 IST
Last Updated 2 ಜೂನ್ 2023, 14:20 IST
ಅಕ್ಷರ ಗಾತ್ರ

ಹಂಬಂಟೋಟಾ: ಇಬ್ರಾಹಿಂ ಜದ್ರಾನ್‌ (98) ಅವರ ಭರ್ಜರಿ ಆಟದ ನೆರವಿನಿಂದ ಅಫ್ಗಾನಿಸ್ತಾನ ತಂಡ, ಮೊದಲ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿತು.

ಮಹಿಂದ ರಾಜಪಕ್ಸ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆತಿಥೇಯ ತಂಡ, 50 ಓವರ್‌ಗಳಲ್ಲಿ 268 ರನ್‌ಗಳಿಗೆ ಆಲೌಟಾಯಿತು. ಅಫ್ಗಾನಿಸ್ತಾನ 46.5 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ಗೆದ್ದಿತು. ಇದರೊಂದಿಗೆ ಹಷ್ಮತ್‌ಉಲ್ಲಾ ಶಾಹಿದಿ ಬಳಗ ಮೂರು ಪಂದ್ಯಗಳ ಸರಣಿಯಲ್ಲಿ 1–0 ರಲ್ಲಿ ಮುನ್ನಡೆ ಗಳಿಸಿದೆ.

98 ಎಸೆತಗಳನ್ನು ಎದುರಿಸಿದ ಜದ್ರಾನ್‌ 11 ಬೌಂಡರಿ ಮತ್ತು ಎರಡು ಸಿಕ್ಸರ್‌ ಹೊಡೆದರು. ರಹಮತ್ ಶಾ 55 ರನ್‌ ಗಳಿಸಿದರು.

ಮಥೀಷ ಪದಾರ್ಪಣೆ: ಶ್ರೀಲಂಕಾ ತಂಡದ ಮಥೀಷ ಪಥಿರಾಣ ಮತ್ತು ದುಶನ್‌ ಹೇಮಂತ ಅವರು ಈ ಪಂದ್ಯದ ಮೂಲಕ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಮಥೀಷ ಅವರು 8.5 ಓವರ್‌ಗಳಲ್ಲಿ 66 ರನ್‌ ನೀಡಿ ಒಂದು ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌:

ಶ್ರೀಲಂಕಾ 50 ಓವರ್‌ಗಳಲ್ಲಿ 268 (ಪಥುಮ್‌ ನಿಸಾಂಕ 38, ಚರಿತ್‌ ಅಸಲಂಕಾ 91, ಧನಂಜಯ ಡಿಸಿಲ್ವಾ 51, ಫಜಲ್‌ಹಕ್‌ ಫರೂಕಿ 58ಕ್ಕೆ 2, ಫರೀದ್‌ ಅಹಮದ್‌ 43ಕ್ಕೆ 2)

ಅಫ್ಗಾನಿಸ್ತಾನ 46.5 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 269 (ಇಬ್ರಾಹಿಂ ಜದ್ರಾನ್ 98, ರಹಮತ್‌ ಶಾ 55, ಹಷ್ಮತ್‌ಉಲ್ಲಾ ಶಾಹಿದಿ 38, ಕಸುನ್‌ ರಜಿತ 49ಕ್ಕೆ 2) ಫಲಿತಾಂಶ: ಅಫ್ಗಾನಿಸ್ತಾನಕ್ಕೆ 6 ವಿಕೆಟ್‌ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT