ಮುಂಬೈ: ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರಿಗೆಹಿತಾಸಕ್ತಿ ಸಂಘರ್ಷ ಆರೋಪದ ಮೇಲೆಬಿಸಿಸಿಐ ಒಂಬುಡ್ಸ್‌ಮನ್ ಡಿ.ಕೆ.ಜೈನ್ ಅವರು ನೋಟಿಸ್ ನೀಡಿದ್ದಾರೆ.

ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಸದಸ್ಯರೂ ಆಗಿರುವ ಸಚಿನ್ ಐಪಿಎಲ್ ಪ್ರಾಂಚೈಸ್ ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಈ ಮೂಲಕ ಹಿತಾಸಕ್ತಿ ಸಂಘರ್ಷಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಲಾಗಿತ್ತು.

ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಸದಸ್ಯ ಸಂಜೀವ್ ಕುಮಾರ್ ಅವರು ನೀಡಿದ ದೂರಿನನ್ವಯ, ಬಿಸಿಸಿಐನ ನಿಯಮಗಳು ಮತ್ತು ನಿಬಂಧನೆಗಳ ಅಧಿನಿಯಮ 39ರ ಅಡಿಯಲ್ಲಿ ಒಂಬಡ್ಸ್‌ಮನ್ ನೋಟಿಸ್ ನೀಡಲಾಗಿದೆ. 46 ವರ್ಷದ ಸಚಿನ್ ಏಪ್ರಿಲ್ 29ರ ಒಳಗಾಗಿ ಬರಹದ ಮೂಲಕ ಪ್ರತಿಕ್ರಿಯೆ ದಾಖಲಿಸುವಂತೆ ಸೂಚಿಸಲಾಗಿದೆ.

‘39ರ ಅಧಿನಿಯಮದ ಅಡಿಯಲ್ಲಿ ಬಿಸಿಸಿಐನನೀತಿ ಅಧಿಕಾರಿಗಳು ದೂರು ಸ್ವೀಕರಿಸಿದ್ದಾರೆ. ಹಾಗಾಗಿ ವಿಚಾರಕ್ಕೆ ಸಂಬಂಧಿಸಿದ ಮುಂದಿನ ಪ್ರಕ್ರಿಯೆಗಳಿಗಾಗಿ ನೀವು(ಸಚಿನ್) ಏಪ್ರಿಲ್ 28ರ ಒಳಗಾಗಿ ಅಫಿಡವಿಟ್ ಇಲ್ಲವೇ ಬರಹದ ಮೂಲಕ ಬಿಸಿಸಿಐನ ನೀತಿ ಅಧಿಕಾರಿಗಳ ಕಚೇರಿಗೆಪ್ರತಿಕ್ರಿಯೆ ಸಲ್ಲಿಸಬೇಕು’ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಸದ್ಯ ನೀಡಲಾಗಿರುವ ನೋಟಿಸ್‌ಗೆ ಪ್ರತಿಕ್ರಿಯಿಸಲು ವಿಫಲವಾದರೆ, ನೀತಿ ಅಧಿಕಾರಿಯು ಮತ್ತೊಂದು ಅವಕಾಶಗಳನ್ನು ನೀಡದೆ ನಿಮ್ಮ ಮೇಲೆ ನಿರ್ಬಂಧಗಳನ್ನು ವಿಧಿಸಬಹುದು ಎಂದೂ ಉಲ್ಲೇಖಿಸಿದ್ದಾರೆ.

ನೋಟಿಸ್ ಪ್ರತಿಯನ್ನು ಬಿಸಿಸಿಐಗೂ ಕಳುಹಿಸಿಕೊಡಲಾಗಿದೆ. ಇದೇ ವಿಚಾರಕ್ಕೆ(ಹಿತಾಸಕ್ತಿ ಸಂಘರ್ಷ) ಸಂಬಂಧಿಸಿದಂತೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೂ ಒಂಬಡ್ಸ್‌ಮನ್‌ಡಿ.ಕೆ.ಜೈನ್ ಸಮನ್ಸ್‌ನೀಡಿದ್ದರು. ಗಂಗೂಲಿ ಇತ್ತೀಚೆಗೆ ವಿವರಣೆ ನೀಡಿದ್ದರು.

ಬಂಗಾಳ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥ, ಕ್ರಿಕೆಟ್ ಸಲಹಾ ಸಮಿತಿಯ ಸದಸ್ಯರಾಗಿರುವ ಗಂಗೂಲಿ ಐಪಿಎಲ್‌ನಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದ ಮೆಂಟರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಇನ್ನಷ್ಟು...
*ಸೌರವ್ ಗಂಗೂಲಿಗೆ ಸಮನ್ಸ್
*ಹಿತಾಸಕ್ತಿ ಸಂಘರ್ಷ ಆರೋಪಕ್ಕೆ ಸ್ಪಷ್ಟನೆ: ಒಂಬುಡ್ಸ್ಮನ್ಗೆ ಪತ್ರ ಬರೆದ ಗಂಗೂಲಿ
*ವಿವರಣೆ ನೀಡಿದ ಸೌರವ್ ಗಂಗೂಲಿ
*ಗಂಗೂಲಿ ಮೇಲೆ ಸದ್ಯಕ್ಕಿಲ್ಲ ಕ್ರಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.