ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಚ್‌ ಅರ್ಥರ್‌ ಒಪ್ಪಂದ ನವೀಕರಿಸದಿರಲು ಪಿಸಿಬಿ ನಿರ್ಧಾರ

Last Updated 7 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಲಾಹೋರ್‌ (ಪಿಟಿಐ): ಪಾಕಿಸ್ತಾನ ತಂಡದ ಮುಖ್ಯ ಕೋಚ್‌ ಮಿಕಿ ಅರ್ಥರ್‌ ಹಾಗೂ ಸಹಾಯಕ ಸಿಬ್ಬಂದಿಯ ಒಪ್ಪಂದವನ್ನು ನವೀಕರಿಸದಿರಲು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಬುಧವಾರ ನಿರ್ಧರಿಸಿದೆ.

ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ತಂಡ ವೈಫಲ್ಯ ಅನುಭವಿಸಿದ ಬಳಿಕ ಪಾಕ್‌ ಕ್ರಿಕೆಟ್‌ ಮಂಡಳಿಯಿಂದ ಈ ನಿರ್ಧಾರವನ್ನು ನಿರೀಕ್ಷಿಸಲಾಗಿತ್ತು.

ಬ್ಯಾಟಿಂಗ್‌ ಕೋಚ್‌ ಗ್ರ್ಯಾಂಟ್‌ ಫ್ಲಾವರ್‌, ಬೌಲಿಂಗ್‌ ಕೋಚ್‌ ಅಜರ್‌ ಮೆಹಮೂದ್‌ ಹಾಗೂ ಟ್ರೇನರ್‌ ಗ್ರ್ಯಾಂಟ್‌ ಲೂಡೆನ್‌ ಅವರ ಒಪ್ಪಂದವನ್ನೂ ಮುಂದುವರಿಸದಿರಲು ಪಿಸಿಬಿ ಪ್ರಕಟನೆಯಲ್ಲಿ ತಿಳಿಸಿದೆ. ಈ ಕುರಿತು ಶುಕ್ರವಾರ ಸಭೆ ಸೇರಿದ್ದ ಪಿಸಿಬಿ ಹೊಸ ಬದಲಾವಣೆಗಳಿಗೆ ಶಿಫಾರಸು ಮಾಡಿತ್ತು.

ಜೂನ್‌–ಜುಲೈನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ನಾಕೌಟ್‌ ಹಂತ ತಲುಪಲು ವಿಫಲವಾಗಿತ್ತು. ತಾನಾಡಿದ ಒಂಬತ್ತು ಪಂದ್ಯಗಳಲ್ಲಿ ಐದರಲ್ಲಿ ಗೆದ್ದು ಮೂರರಲ್ಲಿ ಸೋಲು ಕಂಡಿತ್ತು.

‘ನೇಮಕಾತಿ ಪ್ರಕ್ರಿಯೆಗಳ ಭಾಗವಾಗಿ, ಲಭ್ಯ ನಾಲ್ಕು ಸ್ಥಾನಗಳಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗುವುದು’ ಎಂದು ಪಿಸಿಬಿ ಹೇಳಿಕೆ ತಿಳಿಸಿದೆ.

ಪಿಸಿಬಿ ಪರವಾಗಿ ಮಿಕಿ ಅರ್ಥರ್‌, ಗ್ರ್ಯಾಂಟ್‌ ಫ್ಲಾವರ್‌, ಗ್ರ್ಯಾಂಟ್‌ ಲೂಡೆನ್‌ ಹಾಗೂ ಅಜರ್‌ ಮೆಹಮೂದ್‌ ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ಪಿಸಿಬಿ ಮುಖ್ಯಸ್ಥ ಎಹಸಾನ್‌ ಮಣಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT