ಗಾಲ್ (ಶ್ರೀಲಂಕಾ): ಸಾವುದ್ ಶಕೀಲ್ (ಬ್ಯಾಟಿಂಗ್ 69, 88 ಎ) ಮತ್ತು ಆಗಾ ಸಲ್ಮಾನ್ (ಬ್ಯಾಟಿಂಗ್ 61, 84 ಎ) ಅವರ ಅಜೇಯ ಅರ್ಧಶತಕಗಳ ನೆರವಿನಿಂದ ಪಾಕಿಸ್ತಾನ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಕುಸಿತದಿಂದ ಚೇತರಿಸಿಕೊಂಡಿತು. ಎರಡನೇ ದಿನದಾಟದ ಕೊನೆಗೆ ಪ್ರವಾಸಿ ತಂಡ 5 ವಿಕೆಟ್‌ಗೆ 221 ರನ್ ಗಳಿಸಿದೆ.
ಇದಕ್ಕೆ ಮೊದಲು, ಭಾನುವಾರ 6 ವಿಕೆಟ್‌ಗೆ 242 ರನ್ ಗಳಿಸಿದ್ದ ಶ್ರೀಲಂಕಾ, ಧನಂಜಯ ಡಿ ಸಿಲ್ವ (122, 214 ಎ., 4X12, 6x3) ಅವರ ಶತಕದ ನೆರವಿನಿಂದ 312 ರನ್‌ಗಳ ಗೌರವಾರ್ಹ ಮೊತ್ತ ಗಳಿಸಿತು. ಲಂಚ್ ನಂತರ ಎಡಗೈ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ತಮ್ಮ ನೆಚ್ಚಿನ ಕ್ರೀಡಾಂಗಣದಲ್ಲಿ ಮೂರು ವಿಕೆಟ್ ಪಡೆದು ಪಾಕ್ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಒಂದು ಹಂತದಲ್ಲಿ, ಲಂಚ್ ಮತ್ತು ಟೀ ವಿರಾಮದ ನಡುವೆ ಪಾಕಿಸ್ತಾನದ ಐದು ವಿಕೆಟ್‌ಗಳು 101 ರನ್‌ಗಳಾಗುವಷ್ಟರಲ್ಲಿ ಉರುಳಿದ್ದವು.
ಶಕೀಲ್ ಜೊತೆಗೂಡಿದ ಸಲ್ಮಾನ್ ಮುರಿಯದ ಆರನೇ ವಿಕೆಟ್‌ಗೆ 120 ರನ್ ಸೇರಿಸಿ ತಂಡಕ್ಕೆ ಜೀವ ತುಂಬಿದರು. ಶ್ರೀಲಂಕಾ ಬೌಲರ್‌ಗಳನ್ನು ಆಗಾಗ ಬದಲಾಯಿಸಿದರೂ, ಇವರಿಬ್ಬರ ಮೇಲೆ ಅಂಥ ಪರಿಣಾಮವಾಗಲಿಲ್ಲ. ಮಳೆಯಿಂದಾಗಿ ಎರಡನೇ ದಿನ 75 ಓವರುಗಳ ಆಟವಷ್ಟೇ ಸಾಧ್ಯವಾಯಿತು.
ಸ್ಕೋರುಗಳು
ಮೊದಲ ಇನಿಂಗ್ಸ್: ಶ್ರೀಲಂಕಾ: 95.2 ಓವರುಗಳಲ್ಲಿ 312 (ಧನಂಜಯ ಡಿ ಸಿಲ್ವ 122, ವಿಶ್ವ ಫೆರ್ನಾಂಡೊ ಔಟಾಗದೇ 21; ಶಾಹೀನ್ ಶಾ ಅಫ್ರೀದಿ 86ಕ್ಕೆ3, ನಸೀಮ್ ಶಾ 90ಕ್ಕೆ3, ಅಬ್ರಾರ್ ಅಹ್ಮದ್ 68ಕ್ಕೆ3)
ಪಾಕಿಸ್ತಾನ: 45 ಓವರುಗಳಲ್ಲಿ 5 ವಿಕೆಟ್‌ಗೆ 221 (ಶಾನ್ ಮಸೂದ್ 39, ಸಾವುದ್ ಶಕೀಲ್ ಔಟಾಗದೇ 69, ಆಗಾ ಸಲ್ಮಾನ್ ಔಟಾಗದೇ 61; ಪ್ರಭಾತ್ ಜಯಸೂರ್ಯ 83ಕ್ಕೆ3).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.