ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 World Cup| ಪಾಕಿಸ್ತಾನ ಸೆಮಿಫೈನಲ್‌ ಆಸೆ ಜೀವಂತ

ನೆದರ್ಲೆಂಡ್ಸ್ ಎದುರು ಬಾಬರ್ ಪಡೆಗೆ ಆರು ವಿಕೆಟ್‌ಗಳ ಜಯ
Last Updated 30 ಅಕ್ಟೋಬರ್ 2022, 12:22 IST
ಅಕ್ಷರ ಗಾತ್ರ

ಪರ್ತ್‌: ಗೆಲ್ಲಲೇಬೇಕಾದ ಪಂದ್ಯದಲ್ಲಿ ಪಾಕಿಸ್ತಾನ ತಂಡವು ನೆದರ್ಲೆಂಡ್ಸ್ ತಂಡವನ್ನು ಆರು ವಿಕೆಟ್‌ಗಳಿಂದ ಮಣಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ ಆಸೆ ಜೀವಂತವಾಗಿರಿಸಿಕೊಂಡಿತು.

ಬೌಲರ್‌ಸ್ನೇಹಿ ಪಿಚ್‌ನಲ್ಲಿ, ಟಾಸ್‌ ಗೆದ್ದು ಬ್ಯಾಟ್ ಮಾಡಿದ ನೆದರ್ಲೆಂಡ್ಸ್ ತಂಡವನ್ನು ಪಾಕಿಸ್ತಾನ 9 ವಿಕೆಟ್‌ಗೆ 91 ರನ್‌ಗಳಿಗೆ ನಿಯಂತ್ರಿಸಿತು. ಪ್ರತಿಯಾಗಿ ಬಾಬರ್ ಆಜಂ ನಾಯಕತ್ವದ ತಂಡ 14ನೇ ಓವರ್‌ನಲ್ಲಿ 4 ವಿಕೆಟ್‌ ಕಳೆದುಕೊಂಡು ಜಯದ ಗುರಿ ತಲುಪಿತು.

ಸಾಧಾರಣ ಗುರಿ ಬೆನ್ನತ್ತಿದರೂ ಪಾಕಿಸ್ತಾನ ಜಯ ಸಾಧಿಸಲು 13.5 ಓವರ್‌ಗಳನ್ನು ತೆಗೆದುಕೊಂಡಿತು. ಮೊಹಮ್ಮದ್ ರಿಜ್ವಾನ್‌ (49, 39ಎ, 4X5) ಗೆಲುವಿಗೆ ಕೊಡುಗೆ ನೀಡಿದರು. ಫಕರ್ ಜಮಾನ್ (20) ಅವರೂ ಕಾಣಿಕೆ ಕೊಟ್ಟರು. ನೆದರ್ಲೆಂಡ್ಸ್ ಪರ ಬ್ರೆಂಡನ್ ಗ್ಲೋವರ್ (22ಕ್ಕೆ 2) ಬೌಲಿಂಗ್‌ನಲ್ಲಿ ಮಿಂಚಿದರು.

ಇದಕ್ಕೂ ಮೊದಲು ನೆದರ್ಲೆಂಡ್ಸ್ ಬ್ಯಾಟರ್‌ಗಳ ಮೇಲೆ ಪಾಕ್‌ ಬೌಲರ್‌ಗಳಾದ ಶಾಹೀನ್ ಶಾ ಆಫ್ರಿದಿ (19ಕ್ಕೆ 1), ನಸೀಮ್ ಶಾ (11ಕ್ಕೆ 1), ಮೊಹಮ್ಮದ್ ವಾಸೀಂ (15ಕ್ಕೆ 2) ಮತ್ತು ಶಾದಾಬ್ ಖಾನ್‌ (22ಕ್ಕೆ 3) ನಿಯಂತ್ರಣ ಹೇರಿದರು. ನಿರಂತರವಾಗಿ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಕಾಲಿನ್ ಅಕರಮನ್‌ (27) ಮತ್ತು ಸ್ಕಾಟ್‌ ಎಡ್ವರ್ಡ್ಸ್ (15) ಅಲ್ಪ ಆಸರೆಯಾಗದಿದ್ದರೆ ಇನ್ನೂ ಕಳಪೆ ಮೊತ್ತಕ್ಕೆ ತಂಡ ಕುಸಿಯುತ್ತಿತ್ತು.

ಇನ್ನೊಂದು ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ಜಿಂಬಾಬ್ವೆಯನ್ನು ಮಣಿಸಿದ್ದರಿಂದ ಪಾಕಿಸ್ತಾನದ ನಾಲ್ಕರ ಘಟ್ಟ ತಲುಪುವ ಅವಕಾಶ ಇನ್ನಷ್ಟು ವೃದ್ಧಿಸಿದೆ.

ಸಂಕ್ಷಿಪ್ತ ಸ್ಕೋರು: ನೆದರ್ಲೆಂಡ್ಸ್: 20 ಓವರ್‌ಗಳಲ್ಲಿ 9ಕ್ಕೆ 91 (ಕಾಲಿನ್ ಅಕರ್‌ಮನ್‌ 27, ಸ್ಕಾಟ್‌ ಎಡ್ವರ್ಡ್ಸ್ 15; ಶಾಹೀನ್ ಶಾ ಅಫ್ರಿದಿ 19ಕ್ಕೆ 1, ನಸೀಮ್ ಶಾ 11ಕ್ಕೆ 1, ಮೊಹಮ್ಮದ್ ವಾಸೀಂ 15ಕ್ಕೆ 2, ಹ್ಯಾರಿಸ್‌ ರವೂಫ್‌ 10ಕ್ಕೆ 1, ಶಾದಾಬ್ ಖಾನ್‌ 22ಕ್ಕೆ 3). ಪಾಕಿಸ್ತಾನ: 13.5 ಓವರ್‌ಗಳಲ್ಲಿ 4ಕ್ಕೆ 95 (ಮೊಹಮ್ಮದ್ ರಿಜ್ವಾನ್‌ 49, ಫಕರ್ ಜಮಾನ್‌ 20, ಶಾನ್ ಮಸೂದ್‌ 12; ಪಾಲ್ ವ್ಯಾನ್ ಮಿಕೆರನ್‌ 19ಕ್ಕೆ 1, ಬ್ರೆಂಡನ್ ಗ್ಲೋವರ್ 22ಕ್ಕೆ 2). ಫಲಿತಾಂಶ: ಪಾಕಿಸ್ತಾನ ತಂಡಕ್ಕೆ ಆರು ವಿಕೆಟ್‌ಗಳ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT