ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಪಾಕ್‌ ಅಲ್ಪ ಮೊತ್ತ

Last Updated 19 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಕರಾಚಿ (ಎಎಫ್‌ಪಿ): ಲಾಹಿರು ಕುಮಾರ (49ಕ್ಕೆ4) ಮತ್ತು ಲಸಿತ್‌ ಎಂಬುಲ್ದೆನಿಯಾ (71ಕ್ಕೆ4) ಅವರ ದಾಳಿಗೆ ಬೆದರಿದ ಪಾಕಿಸ್ತಾನ ತಂಡ ಶ್ರೀಲಂಕಾ ಎದುರಿನ ಎರಡನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಅಲ್ಪ ಮೊತ್ತಕ್ಕೆ ಕುಸಿದಿದೆ.

ಇಲ್ಲಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಅಜರ್‌ ಅಲಿ ಬಳಗ 59.3 ಓವರ್‌ಗಳಲ್ಲಿ 191ರನ್‌ಗಳಿಗೆ ಆಲೌಟ್‌ ಆಯಿತು.

ಬ್ಯಾಟಿಂಗ್‌ ಆರಂಭಿಸಿರುವ ಶ್ರೀಲಂಕಾ ದಿನದಾಟದ ಅಂತ್ಯಕ್ಕೆ 19 ಓವರ್‌ ಗಳಲ್ಲಿ 3 ವಿಕೆಟ್‌ಗೆ 64ರನ್‌ ಗಳಿಸಿದೆ.

ಆರಂಭಿಕ ಸಂಕಷ್ಟ: ಸಿಂಹಳೀಯ ತಂಡದ ಮಧ್ಯಮ ವೇಗದ ಬೌಲರ್‌ ವಿಶ್ವ ಫರ್ನಾಂಡೊ, ಆರಂಭದಲ್ಲೇ ಆತಿಥೇಯರಿಗೆ ಪೆಟ್ಟು ನೀಡಿದರು.

ಏಳನೇ ಓವರ್‌ನ ಮೊದಲ ಮತ್ತು ಮೂರನೇ ಎಸೆತಗಳಲ್ಲಿ ಕ್ರಮವಾಗಿ ಶಾನ್‌ ಮಸೂದ್‌ (5) ಹಾಗೂ ನಾಯಕ ಅಜರ್‌ (0) ವಿಕೆಟ್‌ ಉರುಳಿಸಿ ಸಂಭ್ರಮಿಸಿದರು. ಆಗ ಪಾಕ್‌ ಖಾತೆಯಲ್ಲಿದ್ದದ್ದು 10ರನ್‌.

ನಂತರ ಅಬಿದ್‌ ಅಲಿ (38; 66ಎ, 7ಬೌಂ, 1ಸಿ) ಮತ್ತು ಬಾಬರ್‌ ಅಜಂ (60; 96ಎ, 8ಬೌಂ, 1ಸಿ) ತಂಡಕ್ಕೆ ಆಸರೆಯಾದರು. ಈ ಜೋಡಿ ಎರಡನೇ ವಿಕೆಟ್‌ಗೆ 55ರನ್‌ ಸೇರಿಸಿತು.

21ನೇ ಓವರ್‌ನಲ್ಲಿ ಅಬಿದ್‌ ಔಟಾದರು. ಅವರನ್ನು ಲಾಹಿರು ಕುಮಾರ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು.

ಬಳಿಕ ಬಾಬರ್‌ ಮತ್ತು ಅಸಾದ್‌ ಶಫಿಕ್‌ (63; 126ಎ, 6ಬೌಂ) ಲಂಕಾ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. 40ನೇ ಓವರ್‌ನಲ್ಲಿ ದಾಳಿಗಿಳಿದ ಎಂಬುಲ್ದೆನಿಯಾ, ಬಾಬರ್‌ ವಿಕೆಟ್‌ ಉರುಳಿಸಿದರು. ಇದರೊಂದಿಗೆ 62ರನ್‌ಗಳ ನಾಲ್ಕನೇ ವಿಕೆಟ್‌ ಜೊತೆಯಾಟಕ್ಕೂ ತೆರೆ ಬಿತ್ತು.

ನಂತರ ಪಾಕ್‌ ಪಡೆಯ ಬೆನ್ನೆಲುಬು ಮುರಿದ ಲಾಹಿರು ಮತ್ತು ಎಂಬುಲ್ದೆನಿಯಾ, ಆತಿಥೇಯರನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿದರು.

ಮೊದಲ ಇನಿಂಗ್ಸ್‌ ಶುರುಮಾಡಿರುವ ಲಂಕಾ ಕೂಡ ಆರಂಭಿಕ ಸಂಕಷ್ಟ ಎದುರಿಸಿತು. ಏಳನೇ ಓವರ್‌ನಲ್ಲಿ ಒಶಾಡ ಫರ್ನಾಂಡೊ (4) ಔಟಾದರು. ನಾಯಕ ದಿಮುತ್‌ ಕರುಣಾರತ್ನೆ (25; 42ಎ, 4ಬೌಂ) ಮತ್ತು ಕುಶಾಲ್‌ ಮೆಂಡಿಸ್‌ (13; 27ಎ, 1ಬೌಂ) ವಿಕೆಟ್‌ ಉರುಳಿಸಿದ ಮೊಹಮ್ಮದ್‌ ಅಬ್ಬಾಸ್‌, ಪಾಕ್‌ ಪಾಳಯದಲ್ಲಿ ಮಂದಹಾಸ ಮೂಡಿಸಿದರು.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ತಾನ; ಮೊದಲ ಇನಿಂಗ್ಸ್‌: 59.3 ಓವರ್‌ಗಳಲ್ಲಿ 191 (ಅಬಿದ್‌ ಅಲಿ 38, ಬಾಬರ್‌ ಅಜಂ 60, ಅಸಾದ್‌ ಶಫಿಕ್‌ 63; ವಿಶ್ವ ಫರ್ನಾಂಡೊ 31ಕ್ಕೆ2, ಲಾಹಿರು ಕುಮಾರ 49ಕ್ಕೆ4, ಲಸಿತ್‌ ಎಂಬುಲ್ದೆನಿಯಾ 71ಕ್ಕೆ4).

ಶ್ರೀಲಂಕಾ: ಪ್ರಥಮ ಇನಿಂಗ್ಸ್‌; 19 ಓವರ್‌ಗಳಲ್ಲಿ 3 ವಿಕೆಟ್‌ಗೆ 64 (ದಿಮುತ್‌ ಕರುಣಾರತ್ನೆ 25, ಕುಶಾಲ್‌ ಮೆಂಡಿಸ್‌ 13; ಶಾಹೀನ್‌ ಶಾ ಅಫ್ರಿದಿ 18ಕ್ಕೆ1, ಮೊಹಮ್ಮದ್‌ ಅಬ್ಬಾಸ್‌ 21ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT