ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ಕ್ರಿಕೆಟ್‌: ಪಾಕ್- ಕಿವೀಸ್ ಪಂದ್ಯ ಇಂದು

Published 17 ಏಪ್ರಿಲ್ 2024, 23:30 IST
Last Updated 17 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ರಾವಲ್ಪಿಂಡಿ: ಮಿಚೆಲ್ ಬ್ರೇಸ್‌ವೆಲ್ ನಾಯಕತ್ವದ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಗುರುವಾರ ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. 

ಖ್ಯಾತನಾಮ ಆಟಗಾರರ ಗೈರು ಹಾಜರಿಯಲ್ಲಿ ಕಿವೀಸ್ ಬಳಗವು ಪಾಕ್‌ ನೆಲಕ್ಕೆ ಬಂದಿಳಿದಿದೆ. ಐದು ಪಂದ್ಯಗಳ ಸರಣಿಯಲ್ಲಿ ಆಡಲಿದೆ. 

ಆತಿಥೇಯ ಪಾಕ್ ತಂಡವನ್ನು ಬಾಬರ್ ಆಜಂ ಮುನ್ನಡೆಸುವರು. ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಉಭಯ ತಂಡಗಳಿಗೆ ಸರಣಿಯು ಪೂರ್ವಭಾವಿ ಸಿದ್ಧತೆಯ ವೇದಿಕೆಯಾಗಲಿದೆ. 

ಕಿವೀಸ್ ಬಳಗದಲ್ಲಿ ಫಿನ್ ಅಲೆನ್, ಮಾರ್ಕ್‌ ಚಾಪ್ಮನ್, ಜಿಮ್ಮಿ ನಿಶಾಮ್, ಸ್ಪಿನ್ನರ್ ಈಶ್ ಸೋಧಿ, ಟಿಮ್ ರಾಬಿನ್ಸನ್ ಅವರು ಇದ್ದುದರಲ್ಲಿ ಅನುಭವಿಗಳಾಗಿದ್ದಾರೆ. ಉಳಿದವರಿಗೆ ಇದು ತಮ್ಮ ಸಾಮರ್ಥ್ಯವನ್ನು ತೋರಿಸಿಕೊಡುವ ಅವಕಾಶವಾಗಿದೆ. ಕೇನ್ ವಿಲಿಯಮ್ಸನ್, ಲಾಕಿ ಫರ್ಗ್ಯುಸನ್, ಡ್ಯಾರಿಲ್ ಮಿಚೆಲ್ ಅವರು ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಟಿಮ್ ಸೌಥಿ ವಿಶ್ರಾಂತಿಯಲ್ಲಿದ್ದಾರೆ.

ಆದರೆ ಪಾಕ್ ತಂಡವು ಪೂರ್ಣಪ್ರಮಾಣದ ಸಾಮರ್ಥ್ಯ ಹೊಂದಿದೆ. ಫಕಾರ್ ಜಮಾನ್, ಮೊಹಮ್ಮದ್ ರಿಜ್ವಾನ್, ಇಫ್ತಿಕಾರ್ ಅಹಮದ್, ಶಾದಾಬ್ ಖಾನ್, ನಸೀಂ ಶಾ, ಶಹೀನ್ ಅಫ್ರಿದಿ, ಮೊಹಮ್ಮದ್ ಅಮೀರ್ ಮತ್ತು ಇಮಾದ್ ವಾಸೀಮ್ ತಂಡದ ಪ್ರಮುಖ  ಆಟಗಾರರಾಗಿದ್ಧಾರೆ. 

ಪಂದ್ಯ ಆರಂಭ: ರಾತ್ರಿ 8

ನಾಯಕತ್ವ ಲಭಿಸಿರುವುದು ಹೆಮ್ಮೆಯ ವಿಷಯ: ಬ್ರೇಸ್‌ವೆಲ್ 

ಬಾಲ್ಯದಿಂದಲೂ ದೇಶದ ತಂಡಕ್ಕಾಗಿ ಆಡುವ ಕನಸು ಕಂಡಿದ್ದೆ. ಇದೀಗ ತಂಡವನ್ನು ನಾಯಕನಾಗಿ ಮುನ್ನಡೆಸುವ ಅವಕಾಶ ಸಿಕ್ಕಿರುವುದು ಹೆಮ್ಮೆಯ ವಿಷಯ ಎಂದು ಕಿವೀಸ್ ತಂಡದ ನಾಯಕ ಮಿಚೆಲ್ ಬ್ರೇಸ್‌ವೆಲ್ ಹೇಳಿದ್ದಾರೆ.

‘ಗಾಯದಿಂದ ದೀರ್ಘ ಕಾಲ ಕ್ರಿಕೆಟ್‌ನಿಂದ ಹೊರಗಿದ್ದೆ. ಆ ಸಂದರ್ಭದಲ್ಲಿ ಮನೋಬಲ ಗಟ್ಟಿಯಾಗಿರಬೇಕು. ಅದೊಂದು ಸವಾಲಾಗಿತ್ತು. ಆದರೂ ಅದರಲ್ಲಿ ಗೆದ್ದು ಬಂದಿರುವೆ. ಟಿ20 ವಿಶ್ವಕಪ್ ಹೊಸ್ತಿಲಲ್ಲಿ ನಮ್ಮ ತಂಡದ ನಾಯಕತ್ವ ವಹಿಸುತ್ತಿದ್ದೇನೆ. ಅನುಭವಿಗಳ ಗೈರುಹಾಜರಿಯಲ್ಲಿ ಯುವಪ್ರತಿಭೆಗಳೊಂದಿಗೆ ಆಡುವುದು ಉತ್ತಮ ಅನುಭವವಾಗಲಿದೆ. ಇದನ್ನು ನಾನು ಒತ್ತಡವೆಂದು ಭಾವಿಸುವುದಿಲ್ಲ. ಇದು ಉತ್ತಮ ಅವಕಾಶ’ ಎಂದು ಸೋನಿ ನೆಟ್‌ವರ್ಕ್ ಆಯೋಜಿಸಿದ್ದ ವರ್ಚುವಲ್ ಸಂವಾದದಲ್ಲಿ ಅವರು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT