ನವದೆಹಲಿ: ಭಾರತ ಟೆಸ್ಟ್ ಕ್ರಿಕೆಟ್ ತಂಡದ ಭವಿಷ್ಯದ ನಾಯಕ ಸ್ಥಾನಕ್ಕೆ ರಿಷಭ್ ಪಂತ್ ಅವರನ್ನು ಸಿದ್ಧಗೊಳಿಸಬೇಕು ಎಂದು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸಲಹೆ ಮಾಡಿದ್ದಾರೆ.
ಈ ಕುರಿತು ಹೊಸತಾದ ಸ್ಪೋಟ್ಸ್18 ಕ್ರೀಡಾ ಚಾನೆಲ್‌ನ 'ಹೋಮ್ ಆಫ್ ಹೀರೊಸ್' ಕಾರ್ಯಕ್ರಮದಲ್ಲಿ ಯುವಿ ಪ್ರತಿಕ್ರಿಯಿಸಿದ್ದಾರೆ.
'ಟೆಸ್ಟ್ ತಂಡಕ್ಕೆ ನೀವು ಯಾರನ್ನಾದರೂ ಸಿದ್ಧಗೊಳಿಸಬೇಕು. ಮಹೇಂದ್ರ ಸಿಂಗ್ ಧೋನಿಯನ್ನು ನಾಯಕರನ್ನಾಗಿ ಮಾಡಿದಂತೆ ರಿಷಭ್ ಪಂತ್ ಅವರನ್ನು ಸಿದ್ಧಗೊಳಿಸಬೇಕು. ಬಳಿಕ ಅವರು (ಧೋನಿ) ನಾಯಕರಾಗಿ ಬೆಳೆದರು' ಎಂದು ಹೇಳಿದ್ದಾರೆ.
'ವಿಕೆಟ್ ಕೀಪರ್ ಯಾವಾಗಲೂ ಉತ್ತಮ ಚಿಂತಕನಾಗಿರುತ್ತಾನೆ. ಏಕೆಂದರೆ ಮೈದಾನದಲ್ಲಿ ವಿಕೆಟ್ ಹಿಂದೆ ನಿಂತುಕೊಂಡು ಪಂದ್ಯದ ಮೇಲೆ ಉತ್ತಮ ನೋಟವನ್ನು ಹೊಂದಿರುತ್ತಾನೆ' ಎಂದು ತಿಳಿಸಿದ್ದಾರೆ.
'ಭವಿಷ್ಯದ ನಾಯಕನಾಗಬಲ್ಲ ಯುವ ಆಟಗಾರನನ್ನು ಆರಿಸಿರಿ. ಅವರಿಗೆ ಸಮಯವನ್ನು ನೀಡಿ. ಮೊದಲ ಒಂದು ವರ್ಷದಲ್ಲಿ ಅದ್ಭುತಗಳನ್ನು ನಿರೀಕ್ಷಿಸಬೇಡಿ. ಯುವ ಆಟಗಾರನ ಮೇಲೆ ನೀವು ನಂಬಿಕೆಯನ್ನಿಡಬೇಕು' ಎಂದು ಹೇಳಿದರು.
'ನಾಯಕ ಸ್ಥಾನಕ್ಕೆ ಪಂತ್ ಅಪಕ್ವ ಎಂಬ ಟೀಕೆಗಳಿಗೆ ಉತ್ತರಿಸಿದ ಯುವಿ, ಆ ವಯಸ್ಸಿನಲ್ಲಿ ನಾನು ಅಪ್ರಬುದ್ಧನಾಗಿದ್ದೆ, ವಿರಾಟ್ ಕೊಹ್ಲಿ ಅಪಕ್ವರಾಗಿದ್ದರು. ಪಂತ್ ಕೂಡ ಸಮಯಕ್ಕೆ ತಕ್ಕಂತೆ ಪ್ರಬುದ್ಧರಾಗುತ್ತಿದ್ದಾರೆ. ಭಾರತದ ಟೆಸ್ಟ್ ತಂಡವನ್ನು ಮುನ್ನಡೆಸಲು ಪಂತ್ ಸೂಕ್ತ ಆಟಗಾರ ಎಂಬುದು ನನ್ನ ನಂಬಿಕೆ' ಎಂದು ಹೇಳಿದ್ದಾರೆ.
ರಿಷಭ್ ಪಂತ್, ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.