ಸೋಮವಾರ, ಮಾರ್ಚ್ 1, 2021
29 °C

ಆರ್ಥರ್ ಬಗ್ಗೆ ಇನ್ನೂ ನಿರ್ಧರಿಸಿಲ್ಲ:ಪಿಸಿಬಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರಾಚಿ: ಕೋಚ್ ಮಿಕಿ ಆರ್ಥರ್‌ ಅವಧಿಯನ್ನು ವಿಸ್ತರಿಸುವ ಕುರಿತು ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತಿಳಿಸಿದೆ.

‘ಮೂರು ವರ್ಷಗಳಲ್ಲಿ ತಂಡ ತೋರಿರುವ ಸಾಮರ್ಥ್ಯವನ್ನು ಪರಿಶೀಲನೆ ಮಾಡಿದ ನಂತರ ಕೋಚ್ ಸೇರಿದಂತೆ ನೆರವು ಸಿಬ್ಬಂದಿಯ ಭವಿಷ್ಯದ ಕುರಿತು ತೀರ್ಮಾನಿಸಲಾಗುವುದು’ ಎಂದು ಮಂಡಳಿಯ ಮುಖ್ಯಸ್ಥ ಎಹ್ಸಾನ್ ಮನಿ ವಿವರಿಸಿದ್ದಾರೆ.

ಮುಂದಿನ ವರ್ಷ ಏಷ್ಯಾ ಕಪ್ ಮತ್ತು ಟ್ವೆಂಟಿ–20 ವಿಶ್ವಕಪ್ ಟೂರ್ನಿ ನಡೆಯಲಿರುವುದರಿಂದ ಆರ್ಥರ್ ಅವರನ್ನು ಕೋಚ್ ಸ್ಥಾನದಲ್ಲಿ ಒಂದು ವರ್ಷ ಮುಂದುವರಿಸುವ ಸಾಧ್ಯತೆ ಇದೆ ಎಂದು ಇತ್ತೀಚೆಗೆ ವರದಿಯಾಗಿತ್ತು.

‘ಹಿಂದಿನ ಮುಖ್ಯಸ್ಥರ ಅವಧಿಯಲ್ಲಿ ತಂಡದ ನೆರವು ಸಿಬ್ಬಂದಿ ನೇಮಕವಾಗಿದ್ದರು. ನಾನು ಅಧಿಕಾರ ವಹಿಸಿಕೊಂಡ ನಂತರ ವಿಶ್ವಕಪ್‌ ಟೂರ್ನಿಗೆ ಹೆಚ್ಚು ಸಮಯ ಇರಲಿಲ್ಲ. ಆದ್ದರಿಂದ ಬದಲಾಯಿಸಲು ಮುಂದಾಗಲಿಲ್ಲ. ಈಗ, ಮುಂದಿನ ನಾಲ್ಕು ವರ್ಷಗಳನ್ನು ಗಮನದಲ್ಲಿರಿಸಿಕೊಂಡು ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು