ಜನಾಂಗೀಯ ನಿಂದನೆ: ಪಾಕ್ ಕ್ರಿಕೆಟ್ ಮಂಡಳಿ ವಿಷಾದ

7

ಜನಾಂಗೀಯ ನಿಂದನೆ: ಪಾಕ್ ಕ್ರಿಕೆಟ್ ಮಂಡಳಿ ವಿಷಾದ

Published:
Updated:
Prajavani

ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹಮ್ಮದ್ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಆ್ಯಂಡಿಲೆ ಫಿಶುವಾಯೊ ಅವರನ್ನು ಜನಾಂಗೀಯ ನಿಂದನೆಗೆ ಒಳಪಡಿಸಿದ್ದಕ್ಕೆ ಪಾಕ್ ಕ್ರಿಕೆಟ್ ಮಂಡಳಿ (ಪಿಸಿಬಿ) ವಿಷಾದ ವ್ಯಕ್ತಪಡಿಸಿದೆ.

ಡರ್ಬನ್‌ನಲ್ಲಿ ಬುಧವಾರ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಪಿಶುವಾಯೊ ರನ್‌ ಗಳಿಸುತ್ತಿದ್ದಾಗ ವಿಕೆಟ್ ಕೀಪರ್‌ ಸರ್ಫರಾಜ್‌ ‘ಏ ಕರಿಯ...’ ಎಂದು ನಿಂದಿಸಿದ್ದರು. ಸ್ಟಂಪ್‌ಗೆ ಅಳವಡಿಸಿದ್ದ ಮೈಕ್‌ನಲ್ಲಿ ಅವರ ಅವಹೇಳನಕಾರಿ ಮಾತುಗಳು ದಾಖಲಾಗಿದ್ದವು.

‘ಶಿಕ್ಷಾರ್ಹ ಅಪರಾಧವೆನಿಸುವ ಯಾವುದೇ ಕೃತ್ಯವನ್ನು ಪಿಸಿಬಿ ಬೆಂಬಲಿಸುವುದಿಲ್ಲ. ಜನಾಂಗೀಯ ನಿಂದನೆಯನ್ನಂತೂ ಸಹಿಸುವುದೇ ಇಲ್ಲ. ಆದ್ದರಿಂದ ಸರ್ಫರಾಜ್ ಹೇಳಿಕೆಯ ಬಗ್ಗೆ ಮಂಡಳಿಗೆ ತೀವ್ರ ವಿಷಾದವಿದೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದು ‘ಇಂಥ ಘಟನೆಗಳು ತಂಡದ ಆಟಗಾರರಿಗೆ ನೈತಿಕ ಶಿಕ್ಷಣದ ಅಗತ್ಯವಿದೆ ಎಂಬುದನ್ನು ಸಾರಿ ಹೇಳುತ್ತದೆ’ ಎಂದಿದೆ.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 1

  Sad
 • 1

  Frustrated
 • 2

  Angry

Comments:

0 comments

Write the first review for this !