ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಯಕ್ಕೆ ಮರಳುತ್ತಿರುವ ಪೂಜಾರ

Last Updated 20 ನವೆಂಬರ್ 2020, 3:14 IST
ಅಕ್ಷರ ಗಾತ್ರ

ಸಿಡ್ನಿ (ಪಿಟಿಐ): ಟೆಸ್ಟ್ ಕ್ರಿಕೆಟ್ ಪರಿಣತ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಅವರು ನಿಧಾನವಾಗಿ ತಮ್ಮ ಲಯಕ್ಕೆ ಮರಳುತ್ತಿರುವುದು ಭಾರತ ತಂಡದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ.

ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ಪೂಜಾರ ಆಡಲಿದ್ದಾರೆ. ಆದರೆ ಅವರು ಹೋದ ಮಾರ್ಚ್‌ನಿಂದ ಯಾವುದೇ ಪಂದ್ಯವನ್ನೂ ಆಡಿಲ್ಲ. ಅದರಿಂದಾಗಿ ಅವರು ನೆಟ್ಸ್‌ನಲ್ಲಿ ಲಯಕ್ಕೆ ಮರಳಲು ಬಹಳಷ್ಟು ಶ್ರಮಪಡುತ್ತಿದ್ದಾರೆ.‌

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ವೇಗದ ಬೌಲರ್‌ಗಳ ಎಸೆತಗಳನ್ನು ಎದುರಿಸಲು ಸಿದ್ಧರಾಗುತ್ತಿದ್ದಾರೆ. ನೆಟ್ಸ್‌ನಲ್ಲಿ ಬೌಲರ್‌ಗಳು ಮತ್ತು ಥ್ರೋ ಡೌನ್ ಪರಿಣತರಿಂದ ವಿಭಿನ್ನ ಎಸೆತಗಳಿಗೆ ಎದೆಯೊಡ್ಡಿ ಆಡುತ್ತಿದ್ಧಾರೆ. ಕಾರ್ತಿಕ್ ತ್ಯಾಗಿ, ಇಶಾನ್ ಪೊರೆಲ್, ಉಮೇಶ್ ಯಾದವ್ ಎಸೆತಗಳನ್ನು ಅವರು ಎದುರಿಸಿದರು. ಸ್ಪಿನ್ನರ್ ಆರ್. ಅಶ್ವಿನ್ ಕೂಡ ಬೌಲಿಂಗ್ ಮಾಡಿದರು.

ನೆರವು ಸಿಬ್ಬಂದಿಯೊಂದಿಗೆ ನೂರಾರು ಎಸೆತಗಳನ್ನು ಎದುರಿಸುತ್ತ ತಮ್ಮ ಬ್ಯಾಟಿಂಗ್‌ ನಲ್ಲಿ ಏಕಾಗ್ರತೆ ಸಾಧಿಸುವತ್ತ ಚಿತ್ತ ನೆಟ್ಟಿದ್ದಾರೆ. ಅವರ ಅಭ್ಯಾಸದ ವಿಡಿಯೊ ತುಣುಕೊಂದನ್ನು ಬಿಸಿಸಿಐ ತನ್ನ ಸಾಮಾಜಿಕ ಜಾಲಾತಾಣಗಳಲ್ಲಿ ಹಾಕಿದೆ.

ಭಾರತ ತಂಡವು ಹೋದ ವಾರ ಆಸ್ಟ್ರೇಲಿಯಾಕ್ಕೆ ಬಂದಿಳಿದಿದೆ. 14 ದಿನಗಳ ಕ್ವಾರಂಟೈನ್ ನಿಯಮವನ್ನು ಪಾಲಿಸುತ್ತಿದೆ. ಈ ನಡುವೆ ಆಟಗಾರರಿಗೆ ಅಭ್ಯಾಸ ನಡೆಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಎರಡು ವರ್ಷಗಳ ಹಿಂದೆ ಭಾರತವು ಆಸ್ಟ್ರೇಲಿಯಾದಲ್ಲಿ ವಿಜಯದ ದಾಖಲೆ ಬರೆಯಲು ಪೂಜಾರ ಅವರ ಆಟವು ಪ್ರಮುಖ ಕಾರಣವಾಗಿತ್ತು. ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್ ತಮ್ಮ ತಾಳ್ಮೆಯ ಆಟದ ಮೂಲಕ ಎದುರಾಳಿ ಬೌಲರ್‌ಗಳಿಗೆ ಕಬ್ಬಿಣದ ಕಡಲೆಯಾಗಿದ್ದರು.

ಅಡಿಲೇಡ್‌ನಲ್ಲಿ ಡಿಸೆಂಬರ್ 17ರಂದು ಮೊದಲ ಟೆಸ್ಟ್ ಆರಂಭವಾಗಲಿದೆ. ಹೊನಲು ಬೆಳಕಿನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಪಿಂಕ್ ಬಾಲ್ ಬಳಕೆಯಾಗಲಿದೆ. ಆಧರೆ ಇದರ ನಂತರದ ಪಂದ್ಯಗಳಲ್ಲಿ ನಾಯಕ ವಿರಾಟ್ ಕೊಹ್ಲಿ ಇರುವುದಿಲ್ಲ. ಆದ್ದರಿಂದ ಬ್ಯಾಟಿಂಗ್ ಬಲ ಹೆಚ್ಚಿಸುವ ಹೊಣೆ ಪೂಜಾರ ಮೇಲೆ ಇದೆ.

ಆಸ್ಟ್ರೇಲಿಯಾಕ್ಕೆ ರಘು: ಭಾರತ ತಂಡದ ಅನುಭವಿ ಥ್ರೋಡೌನ್ ಪರಿಣತ ರಾಘವೇಂದ್ರ ದಿವಗಿ (ರಘು) ಅವರು ಆಸ್ಟ್ರೇಲಿಯಾ ತಲುಪಿದ್ದಾರೆ.

ಸ್ಥಳೀಐ ಸರ್ಕಾರದ ನಿಯಮದ ಪ್ರಕಾರ 14 ದಿನಗಳ ಕ್ವಾರಂಟೈನ್ ನಿಯಮ ಪಾಲನೆ ಮಾಡುತ್ತಿದ್ದಾರೆ.

ಹೋದ ತಿಂಗಳು ಅವರಿಗೆ ಕೋವಿಡ್ –19 ಸೋಂಕು ಇದ್ದ ಕಾರಣ ಭಾರತ ತಂಡದೊಂದಿಗೆ ಆಸ್ಟ್ರೇಲಿಯಾಕ್ಕೆ ಹೋಗಿರಲಿಲ್ಲ. ಅವರು ಗುಣಮುಖರಾದ ನಂತರ ಆಸ್ಟ್ರೇಲಿಯಾಕ್ಕೆ ತೆರಳಲು ಅನುಮತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT