ಶನಿವಾರ, ಜನವರಿ 29, 2022
17 °C

ರಾಹುಲ್ ಹೊಸ ತಂಡ ಸಂಪರ್ಕಿಸಿದ್ದಲ್ಲಿ ಅದು ನಿಯಮಕ್ಕೆ ವಿರುದ್ಧ: ಪಂಜಾಬ್ ಕಿಂಗ್ಸ್

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೆ.ಎಲ್.ರಾಹುಲ್ ಅವರು ಈ ಹಿಂದೆಯೇ ಬೇರೆ ಫ್ರಾಂಚೈಸಿಗಳನ್ನು ಸಂಪರ್ಕಿಸಿದ್ದೇ ಆದಲ್ಲಿ ಅದು ನಿಯಮಗಳಿಗೆ ವಿರುದ್ಧವಾದದ್ದು ಎಂದು ಇಂಡಿಯನ್‌ ಪ್ರೀಮಿಯರ್ ಲೀಗ್‌ನ (ಐಪಿಎಲ್) ಪಂಜಾಬ್‌ ಕಿಂಗ್ಸ್ ಫ್ರಾಂಚೈಸಿ ಹೇಳಿದೆ.

ತಂಡದ ನಾಯಕನಾಗಿ ಎಲ್ಲ ಸ್ವಾತಂತ್ರ್ಯ ಹೊಂದಿದ್ದರೂ ರಾಹುಲ್ ಅವರು ಫ್ರಾಂಚೈಸಿ ತೊರೆದಿರುವುದಕ್ಕೆ ಪಂಜಾಬ್‌ ಕಿಂಗ್ಸ್ ಅಸಮಾಧಾನ ವ್ಯಕ್ತಪಡಿಸಿದೆ.

ಓದಿ: 

2020ರ ಋತುವಿನಲ್ಲಿ ರಾಹುಲ್ ಅವರನ್ನು ಪಂಜಾಬ್ ಕಿಂಗ್ಸ್ ನಾಯಕನನ್ನಾಗಿ ಮಾಡಿತ್ತು. ಬಳಿಕ ಅವರು ಅತ್ಯುತ್ತಮ ಪ್ರದರ್ಶನ ತೋರಿದ್ದರಾದರೂ ತಂಡವನ್ನು ಪ್ಲೇ–ಆಫ್‌ ಪ್ರವೇಶಿಸುವಂತೆ ಮಾಡುವುದು ಅವರಿಂದಾಗಿರಲಿಲ್ಲ. ಅವರೀಗ ಹೊಸದಾಗಿ ಐಪಿಎಲ್ ಸೇರಿಕೊಳ್ಳಲಿರುವ ಲಖನೌ ಫ್ರಾಂಚೈಸಿ ಜತೆ ಸಂಪರ್ಕ ಹೊಂದಿದ್ದು, ಮುಂದಿನ ಸೀಸನ್‌ನಲ್ಲಿ ಆ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ.

‘ನಾವು ರಾಹುಲ್ ಅವರನ್ನು ಉಳಿಸಿಕೊಳ್ಳಲು ಬಯಸಿದ್ದೆವು. ಆದರೆ, ಅವರು ಹರಾಜು ಪ್ರಕ್ರಿಯೆಗೆ ಒಳಪಡಲು ನಿರ್ಧರಿಸಿದರು. ಅವರು ಒಂದು ವೇಳೆ ಈ ಹಿಂದೆಯೇ ಬೇರೆ ಫ್ರಾಂಚೈಸಿಯನ್ನು ಸಂಪರ್ಕಿಸಿದ್ದಲ್ಲಿ ಅದು ನಿಯಮಬಾಹಿರ’ ಎಂದು ಪಂಜಾಬ್ ಕಿಂಗ್ಸ್ ಸಹ ಮಾಲೀಕ ನೆಸ್ ವಾಡಿಯಾ ಹೇಳಿದ್ದಾರೆ.

ಓದಿ: 

ರಾಹುಲ್‌ಗೆ ಲಖನೌನ ಹೊಸ ಫ್ರಾಂಚೈಸಿ ಆಮಿಷವೊಡ್ಡಿತ್ತೆಂಬ ವರದಿಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ವಾಡಿಯಾ, ‘ಹಾಗಾಗಿರದು ಎಂದು ಭಾವಿಸುತ್ತೇನೆ. ಯಾಕೆಂದರೆ ಅದು ಬಿಸಿಸಿಐ ನಿಯಮಗಳಿಗೆ ವಿರುದ್ಧವಾದದ್ದು’ ಎಂದು ಹೇಳಿದ್ದಾರೆ.

2010ರಲ್ಲಿ ರಾಜಸ್ಥಾನ್ ರಾಯಲ್ಸ್‌ ತಂಡದಿಂದ ಬಿಡುಗಡೆ ಹೊಂದುವುದಕ್ಕೂ ಮೊದಲೇ ಬೇರೆ ತಂಡಗಳ ಜತೆ ಮಾತುಕತೆ ನಡೆಸಿದ್ದಕ್ಕಾಗಿ ರವೀಂದ್ರ ಜಡೇಜಾ ಅವರನ್ನು ಒಂದು ವರ್ಷ ಕಾಲ ಅಮಾನತು ಮಾಡಲಾಗಿತ್ತು.

ಹೊಸ ಫ್ರಾಂಚೈಸಿಗಳಿಗೆ (ಲಖನೌ ಹಾಗೂ ಅಹಮದಾಬಾದ್) ಮೂವರು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಡಿಸೆಂಬರ್ 25ರವರೆಗೆ ಕಾಲಾವಕಾಶವಿದೆ. ಈಗಾಗಲೇ ಫ್ರಾಂಚೈಸಿಗಳು ಕೈಬಿಟ್ಟಿರುವ ಆಟಗಾರರ ಪೈಕಿ ಮೂವರು ಆಟಗಾರರನ್ನು ಫ್ರಾಂಚೈಸಿಗಳು ಆಯ್ಕೆ ಮಾಡಬಹುದಾಗಿದೆ.

ಓದಿ: 

ಐಪಿಎಲ್‌ ಕ್ರಿಕೆಟ್ ಟೂರ್ನಿಯ 2022ರ ಆವೃತ್ತಿಗೆ ಆಟಗಾರರನ್ನು ಉಳಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಳಿಸಲು ಫ್ರಾಂಚೈಸಿಗಳಿಗೆ ನವೆಂಬರ್ 30 ಕೊನೆಯ ದಿನವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು