ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

IPL 2024 | ಪಂಜಾಬ್ ಕಿಂಗ್ಸ್ ಎದುರು ಗುಜರಾತ್ ಟೈಟನ್ಸ್‌ಗೆ 3 ವಿಕೆಟ್ ಜಯ

Published 21 ಏಪ್ರಿಲ್ 2024, 17:43 IST
Last Updated 21 ಏಪ್ರಿಲ್ 2024, 17:43 IST
ಅಕ್ಷರ ಗಾತ್ರ

ಮುಲ್ಲನಪುರ: ಎಡಗೈ ಸ್ಪಿನ್ನರ್ ಸಾಯಿಕಿಶೋರ್‌ ಸ್ಪಿನ್ ಮೋಡಿ ಮತ್ತು ಬ್ಯಾಟರ್‌ಗಳ ತಾಳ್ಮೆಯ ಆಟದಿಂದ ಗುಜರಾತ್ ಟೈಟನ್ಸ್ ತಂಡವು ಪಂಜಾಬ್ ಕಿಂಗ್ಸ್ ಎದುರು ಐದು ಎಸೆತಗಳಿರುವಂತೆ ಮೂರು ವಿಕೆಟ್‌ಗಳಿಂದ ಜಯಿಸಿತು.

ಎಂವೈಎಸ್‌ಐಸಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಪಂಜಾಬ್ ತಂಡವು 20 ಓವರ್‌ಗಳಲ್ಲಿ 142 ರನ್‌ ಗಳಿಸಲಷ್ಟೇ ಶಕ್ತವಾಯಿತು. ಗುಜರಾತ್ ಟೈಟನ್ಸ್ ತಂಡದ ಸ್ಪಿನ್ನರ್‌ಗಳಾದ ಸಾಯಿಕಿಶೋರ್ (33ಕ್ಕೆ4) ಮತ್ತು ನೂರ್ (20ಕ್ಕೆ2 ), ಸ್ಪಿನ್ನರ್ ರಶೀದ್ ಖಾನ್ (15ಕ್ಕೆ1) ಅವರು ಬ್ಯಾಟರ್‌ಗಳನ್ನು ನಿಯಂತ್ರಿಸಿದರು. ‌

ಗುರಿ ಬೆನ್ನಟ್ಟಿದ ಗುಜರಾತ್ ತಂಡವು 19.1 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ ‌146 ರನ್ ಗಳಿಸಿ ಗೆದ್ದಿತು. ಪಂಜಾಬ್ ಬೌಲರ್‌ಗಳು ಗುಜರಾತ್ ತಂಡಕ್ಕೆ ಸುಲಭವಾಗಿ ಜಯಿಸಲು ಬಿಡಲಿಲ್ಲ. ಗುಜರಾತ್ ತಂಡದ ಶುಭಮನ್ ಗಿಲ್ (35; 29ಎ), ಸಾಯಿ ಸುದರ್ಶನ್ (31; 34ಎ) ಹಾಗೂ ರಾಹುಲ್ ತೆವಾಟಿಯಾ (36; 18ಎ) ತಾಳ್ಮೆಯಿಂದ ಆಡಿದರು.

ಟಾಸ್ ಗೆದ್ದ ಪಂಜಾಬ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಈ ಪಂದ್ಯಕ್ಕೂ ಶಿಖರ್ ಧವನ್ ಅಲಭ್ಯರಾದರು.

ಹಂಗಾಮಿ ನಾಯಕ ಸ್ಯಾಮ್ ಕರನ್ (20; 19ಎ, 4X2) ಮತ್ತು ಪ್ರಭಸಿಮ್ರನ್ ಸಿಂಗ್ (35; 21ಎ) ಅವರು ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 52 ರನ್‌ ಸೇರಿಸಿದರು. ಪ್ರಭಸಿಮ್ರನ್ 3 ಸಿಕ್ಸರ್ ಮತ್ತು 3 ಬೌಂಡರಿ ಗಳಿಸಿದರು. ಆರನೇ ಓವರ್‌ನಲ್ಲಿ ವೇಗಿ ಮೋಹಿತ್ ಶರ್ಮಾ ಅವರು ಪ್ರಭಸಿಮ್ರನ್ ವಿಕೆಟ್ ಗಳಿಸಿ ಜೊತೆಯಾಟವನ್ನು ಮುರಿದರು. ನಂತರದ ಓವರ್‌ಗಳಲ್ಲಿ ಸ್ಪಿನ್ನರ್‌ಗಳು ವಿಜೃಂಭಿಸಿದರು.

ಶಶಾಂಕ್ ಸಿಂಗ್, ಆಷುತೋಷ್ ಶರ್ಮಾ ಹಾಗೂ ಜಿತೇಶ್ ಶರ್ಮಾ ಅವರೂ ವಿಫಲರಾದರು.

ಇದರಿಂದಾಗಿ ತಂಡವು 99 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿತು. ಆದರೆ ಕೊನೆಯ ಹಂತದ ಓವರ್‌ಗಳಲ್ಲಿ ಹರಪ್ರೀತ್ ಸಿಂಗ್ (14; 19ಎ) ಮತ್ತು ಹರಪ್ರೀತ್ ಬ್ರಾರ್ (29; 12ಎ, 4X4, 6X1) ಸ್ವಲ್ಪ ಹೋರಾಟ ನಡೆಸಿದರು.

ಸಂಕ್ಷಿಪ್ತ ಸ್ಕೋರು

ಪಂಜಾಬ್ ಕಿಂಗ್ಸ್: 20 ಓವರ್‌ಗಳಲ್ಲಿ 142 (ಸ್ಯಾಮ್ ಕರನ್ 20, ಪ್ರಭಸಿಮ್ರನ್‌ ಸಿಂಗ್ 35, ಹರಪ್ರೀತ್ ಬ್ರಾರ್ 29, ಮೋಹಿತ್ ಶರ್ಮಾ 32ಕ್ಕೆ2, ನೂರ್ ಅಹಮದ್ 20ಕ್ಕೆ2, ಸಾಯಿಕಿಶೋರ್ 33ಕ್ಕೆ4)

ಗುಜರಾತ್ ಟೈಟನ್ಸ್: 19.1 ಓವರ್‌ಗಳಲ್ಲಿ 7ಕ್ಕೆ 146. (ಶುಭಮನ್ ಗಿಲ್ 35, ರಾಹುಲ್ ತೆವಾಟಿಯಾ (ಔಟಾಗದೇ 36), ಹರ್ಷಲ್ ಪಟೇಲ್ 15ಕ್ಕೆ3, ಲಿಯಾಮ್ ಲಿವಿಂಗ್‌ಸ್ಟೋನ್ 19ಕ್ಕೆ2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT