ಜೊಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ 2022 ರಲ್ಲಿ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದರು. ಸದ್ಯ, ಅವರು ತಮ್ಮ ನಿವೃತ್ತಿ ನಿರ್ಧಾರ ಹಿಂಪಡೆದಿದ್ದು, ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡದ ಭಾಗವಾಗಿದ್ದಾರೆ.

ಮುಂಬರುವ ಪಾಕಿಸ್ತಾನ ಪ್ರವಾಸಕ್ಕೆ ದಕ್ಷಿಣ ಆಫ್ರಿಕಾ ಘೋಷಣೆ ಮಾಡಿರುವ ಏಕದಿನ ಹಾಗೂ ಟಿ–20ಐ ತಂಡದಲ್ಲಿ ಡಿ ಕಾಕ್ ಅವರು ಸ್ಥಾನ ಪಡೆದುಕೊಂಡಿದ್ದಾರೆ. ಅಂದಹಾಗೆ ಅವರು 2022ರಲ್ಲಿ ಏಕದಿನ ಕ್ರಿಕೆಟ್ನಿಂದ ನಿವೃತ್ತಿ ಹೊಂದುತ್ತಿರುವುದಾಗಿ ಘೋಷಣೆ ಮಾಡಿದ್ದರು. 2024ರ ಟಿ–20ಐ ವಿಶ್ವಕಪ್ ಬಳಿಕ ಟಿ–20 ಕ್ರಿಕೆಟ್ನಿಂದಲೂ ದೂರವಾಗಿದ್ದರು. ಸುಮಾರು ಒಂದು ವರ್ಷದ ಬಳಿಕ ಸೌತ್ ಆಫ್ರಿಕಾ ಜೆರ್ಸಿಯಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ.

ಕ್ವಿಂಟನ್ ಡಿ ಕಾಕ್ ತಂಡಕ್ಕೆ ಮರಳಿರುವುದು ಸಂತಸ ತಂದಿದೆ, ಅವರು ತಂಡದ ಬಲ ಹೆಚ್ಚಿಸಲಿದ್ದಾರೆ ಎಂದು ತಂಡದ ತರಬೇತುದಾರ ಶುಕ್ರಿ ಕಾನ್ರಾಡ್ ಹೇಳಿದರು.

ಪಾಕಿಸ್ತಾನ ವಿರುದ್ಧದ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಹೀಗಿದೆ

ಟಿ–20ಐ ತಂಡ:

ಡೇವಿಡ್ ಮಿಲ್ಲರ್ (ನಾಯಕ), ಕಾರ್ಬಿನ್ ಬಾಷ್, ಡೆವಾಲ್ಡ್ ಬ್ರೆವಿಸ್, ನಾಂಡ್ರೆ ಬರ್ಗರ್, ಜೆರಾಲ್ಡ್ ಕೊಯೆಟ್ಜಿ, ಕ್ವಿಂಟನ್ ಡಿ ಕಾಕ್, ಡೊನೊವನ್ ಫೆರೀರಾ, ರೀಜಾ ಹೆಂಡ್ರಿಕ್ಸ್, ಜಾರ್ಜ್ ಲಿಂಡೆ, ಕ್ವೆನಾ ಮಫಕಾ, ಲುಂಗಿ ಎನ್ಗಿಡಿ, ಎನ್ಕಾಬಾ ಪೀಟರ್, ಪ್ರಿಟೋರಿಯಸ್, ಆಂಡಿಲೆ ಸಿಮೆಲೇನ್, ಲಿಜಾಡ್ ವಿಲಿಯಮ್ಸ್ ಸ್ಥಾನ ಪಡೆದಿದ್ದಾರೆ.

ಏಕದಿನ ತಂಡ:

ಮ್ಯಾಥ್ಯೂ ಬ್ರೀಟ್ಜ್ಕೆ (ನಾಯಕ), ಕಾರ್ಬಿನ್ ಬಾಷ್, ಡೆವಾಲ್ಡ್ ಬ್ರೆವಿಸ್, ನಾಂಡ್ರೆ ಬರ್ಗರ್, ಜೆರಾಲ್ಡ್ ಕೊಯೆಟ್ಜಿ, ಕ್ವಿಂಟನ್ ಡಿ ಕಾಕ್, ಟೋನಿ ಡಿ ಜೊರ್ಜಿ, ಡೊನೊವನ್ ಫೆರೆರಾ, ಜಾರ್ನ್ ಫೋರ್ಚುಯಿನ್, ಜಾರ್ಜ್ ಲಿಂಡೆ, ಕ್ವೆನಾ ಮಫಕಾ, ಲುಂಗಿ ಎನ್ಗಿಡಿ, ನ್ಕಾಬಾ ಪೀಟರ್, ಪ್ರಿಟೋರಿಯಸ್, ಸಿನೆತೆಂಬ ಕ್ವೆಶಿಲೆ ಇದ್ದಾರೆ.

ಟೆಸ್ಟ್ ತಂಡ:

ಐಡೆನ್ ಮಾರ್ಕ್ರಾಮ್ (ನಾಯಕ), ಡೇವಿಡ್ ಬೆಡಿಂಗ್ಹ್ಯಾಮ್, ಕಾರ್ಬಿನ್ ಬಾಷ್, ಡೆವಾಲ್ಡ್ ಬ್ರೆವಿಸ್, ಟೋನಿ ಡಿ ಜೊರ್ಜಿ, ಜುಬೇರ್ ಹಮ್ಜಾ, ಸೈಮನ್ ಹಾರ್ಮರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ವಿಯಾನ್ ಮುಲ್ಡರ್, ಸೆನುರಾನ್ ಮುತ್ತುಸಾಮಿ, ಕಗಿಸೊ ರಬಾಡಾ, ರ್ಯಾನ್ ರಿಕೆಲ್ಟನ್, ಪ್ರೆನೆಲಾನ್ ಸುಬ್ರಯೆನ್, ಕೈಲ್ ವೆರ್ರೆನ್ನೆ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.