ಆರ್‌ಸಿಬಿ Vs ಆರ್‌ಆರ್: ಅರ್ಧ ಶತಕ ದಾಖಲಿಸಿದ ರಜತ್ ಪಾಟೀದಾರ್

ಅಹಮದಾಬಾದ್: ರಾಜಸ್ಥಾನ ರಾಯಲ್ಸ್ ವಿರುದ್ಧದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಅಬ್ಬರಿಸಿದ ರಜತ್ ಪಾಟೀದಾರ್ ಆಕರ್ಷಕ ಅರ್ಧ ಶತಕ ದಾಖಲಿಸಿದ್ದಾರೆ.
42 ಎಸೆತಗಳನ್ನು ಎದುರಿಸಿದ ರಜತ್ ಪಾಟೀದಾರ್ 3 ಸಿಕ್ಸರ್ ಮತ್ತು 4 ಫೋರ್‌ಗಳುಳ್ಳ 58 ರನ್ ಪೇರಿಸಿದರು. 15ನೇ ಓವರ್‌ನಲ್ಲಿ ರವಿಚಂದ್ರ ಅಶ್ವಿನ್ ಎಸೆತಕ್ಕೆ ಸಿಕ್ಸರ್ ಬಾರಿಸಲು ಯತ್ನಿಸಿ ವಿಕೆಟ್ ಒಪ್ಪಿಸಿದರು. ಬೌಂಡರಿಯಲ್ಲಿ ಲೈನ್ ಸಮೀಪದಲ್ಲಿ ನಿಂತಿದ್ದ ಜೋಸ್ ಬಟ್ಲರ್ ಸುರಕ್ಷಿತವಾಗಿ ಕ್ಯಾಚ್ ಹಿಡಿದರು.
28 ವರ್ಷದ ರಜತ್ ಪಾಟೀದಾರ್ ಎಲಿಮಿನೇಟರ್ ಪಂದ್ಯದಲ್ಲಿ ಶತಕದಾಟದೊಂದಿಗೆ ಮಿಂಚಿದ್ದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬೆಂಗಳೂರು ತಂಡ ಬಹಳ ಬೇಗನೆ ವಿರಾಟ್ ಕೋಹ್ಲಿ ವಿಕೆಟ್ ಕಳೆದುಕೊಂಡಿತು. ನಾಯಕ ಫಫ್ ಡುಪ್ಲೆಸಿ 25 ರನ್, ಗ್ಲೆನ್ ಮ್ಯಾಕ್ಸ್‌ವೆಲ್ 24 ರನ್‌ಗಳ ಕೊಡುಗೆ ನೀಡಿದರು. ನಂತರ ಬಂದ ಮಹಿಪಾಲ್ ಲೊಮ್ರೊರ್(8), ದಿನೇಶ್ ಕಾರ್ತಿಕ್(6), ಹರ್ಷಲ್ ಪಟೇಲ್(1) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ವಣಿಂದು ಹಸರಂಗಾ ಶೂನ್ಯಕ್ಕೆ ಔಟಾದರು. ಶಹಬಾಜ್ ಅಹಮದ್ ಔಟಾಗದೆ 12 ರನ್ ಗಳಿಸಿದರು.
20 ಓವರ್ ಅಂತ್ಯಕ್ಕೆ ಆರ್‌ಸಿಬಿ 8 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ರಾಜಸ್ಥಾನ ಪರ ಪ್ರಸಿದ್ಧ ಕೃಷ್ಣ ಮತ್ತು ಒಬೆದ್ ಮೆಕಾಯ್ ತಲಾ 3 ವಿಕೆಟ್ ಪಡೆದರು. ಟ್ರೆಂಟ್ ಬೌಲ್ಟ್ ಮತ್ತು ರವಿಚಂದ್ರ ಅಶ್ವಿನ್ ತಲಾ 1 ವಿಕೆಟ್ ಪಡೆದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.