ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ವಿರುದ್ಧ ಟೆಸ್ಟ್‌: ವಿಂಡೀಸ್‌ ತಂಡದಲ್ಲಿ ಕಾರ್ನ್‌ವಾಲ್‌ಗೆ ಅವಕಾಶ

ಟೆಸ್ಟ್‌ ಕ್ರಿಕೆಟ್ ಸರಣಿ
Last Updated 10 ಆಗಸ್ಟ್ 2019, 10:39 IST
ಅಕ್ಷರ ಗಾತ್ರ

ಸೇಂಟ್‌ ಜಾನ್ಸ್‌, ಆ್ಯಂಟೀಗಾ: ಭಾರತ ಎದುರು ಎರಡು ಟೆಸ್ಟ್‌ಗಳ ಕ್ರಿಕೆಟ್‌ ಸರಣಿಗೆ ವೆಸ್ಟ್‌ ಇಂಡೀಸ್ ತಂಡವನ್ನು ಆಯ್ಕೆ ಮಾಡಲಾಗಿದ್ದು, ಸ್ಪಿನ್ನರ್‌ ಆಲ್‌ರೌಂಡರ್ ರಖೀಂ ಕಾರ್ನ್‌ವಾಲ್‌ ಅವರಿಗೆ ಆಯ್ಕೆಗಾರರು ಮೊದಲ ಬಾರಿ ಅವಕಾಶ ನೀಡಿದ್ದಾರೆ.

13 ಆಟಗಾರರ ತಂಡದಲ್ಲಿ ಅವರ ಜೊತೆ ವೆಸ್ಟ್ ಇಂಡೀಸ್‌ ‘ಎ’ ತಂಡವನ್ನು ಕೆಲ ಸಮಯದಿಂದ ಮುನ್ನಡೆಸುತ್ತಿರುವ ಶಮರ ಬ್ರೂಕ್ಸ್‌ ಅವರೂ ಮೊದಲ ಬಾರಿ ಅವಕಾಶ ಪಡೆದಿದ್ದಾರೆ.ವೇಗಿ ಆಲ್ದಾರಿ ಜೋಸೆಫ್‌ ಗಾಯಾಳಾಗಿದ್ದು, ಸರಣಿ ತಪ್ಪಿಸಿಕೊಳ್ಳಲಿದ್ದಾರೆ.

ಲೀವಾರ್ಡ್‌ ಐಲ್ಯಾಂಡ್ಸ್‌ ಹರಿಕೇನ್‌ ಮತ್ತು ವೆಸ್ಟ್‌ ಇಂಡೀಸ್‌ ‘ಎ’ ತಂಡದ ಪರ ಪರಿಣಾಮಕಾರಿ ಪ್ರದರ್ಶನದಿಂದಾಗಿ ಅವರಿಗೆ ಅವಕಾಶ ದೊರೆತಿದೆ. 26 ವರ್ಷದ ಈ ಆಫ್‌ ಸ್ಪಿನ್ನರ್‌ ಮೇಲೆ ಹೆಚ್ಚಿನ ಭರವಸೆ ಹೊಂದಿದ್ದೇವೆ ಎಂದು ಹಂಗಾಮಿ ಆಯ್ಕೆ ಸಮಿತಿ ಮುಖ್ಯಸ್ಥ ರಾಬರ್ಟ್‌ ಹೇಯ್ಸ್‌ ತಿಳಿಸಿದ್ದಾರೆ.

‘ಕೆಲ ವರ್ಷಗಳಿಂದ ರಖೀಮ್‌ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಪಂದ್ಯ ಗೆಲ್ಲಿಸಿಕೊಡುವ ಸಾಮರ್ಥ್ಯ ತಮಗಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ಬಾರಿ ಟೆಸ್ಟ್‌ ತಂಡಕ್ಕೆ ಆವಕಾಶಕ್ಕಾಗಿ ಅವರು ಅರ್ಹರಿದ್ದಾರೆ ಎಂಬ ಭಾವನೆ ಮೂಡಿದೆ. ಅವರು ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್‌ಗೂ ಬಲ ತುಂಬಬಲ್ಲರು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಖೀಮ್‌ 55 ಪ್ರಥಮ ದರ್ಜೆ ಪಂದ್ಯಗಳಲ್ಲಿ 260 ವಿಕೆಟ್‌ ಪಡೆದಿದ್ದಾರೆ.

ಮೊದಲ ಟೆಸ್ಟ್‌, ಕಾರ್ನ್‌ವಾಲ್‌ ಅವರ ತವರಾದ ಆ್ಯಂಟೀಗಾದ ಸರ್‌ ವಿವಿಯನ್‌ ರಿಚರ್ಡ್ಸ್‌ ಕ್ರೀಡಾಂಗಣದಲ್ಲಿ ಆ. 22 ರಿಂದ ನಡೆಯಲಿದೆ. ಎರಡನೇ ಟೆಸ್ಟ್‌ ಜಮೈಕಾದ ಸಬೀನಾ ಪಾರ್ಕ್‌ನಲ್ಲಿ ಆ. 30ರಿಂದ ನಡೆಯಲಿದೆ.

ತೋಳಿನ ಗಾಯದಿಂದಾಗಿ ಚೇತರಿಸಿಕೊಳ್ಳಲು ಜೋಸೆಫ್‌ ಅವರಿಗೆ ಅವಕಾಶ ನೀಡಲಾಗಿದೆ. ಭಾರತದಲ್ಲಿ ಐಪಿಎಲ್‌ ವೇಳೆ ಈ ನೋವು ಕಾಣಿಸಿಕೊಂಡಿತ್ತು.

ತಂಡ ಇಂತಿದೆ:ಜೇಸನ್‌ ಹೋಲ್ಡರ್‌ (ಕ್ಯಾಪ್ಟನ್‌), ಕ್ರೇಗ್‌ ಬ್ರಾತ್‌ವೇಟ್‌, ಡ್ಯಾರೆನ್‌ ಬ್ರಾವೊ, ಶಮರ ಬ್ರೂಕ್ಸ್‌, ಜಾನ್‌ ಕ್ಯಾಂಪ್‌ಬೆಲ್‌, ರೋಸ್ಟನ್‌ ಚೇಸ್‌, ರಖೀಮ್‌ ಕಾರ್ನ್‌ವಾಲ್‌, ಶೇನ್‌ ಡೋರಿಚ್‌, ಶಾನನ್‌ ಗೇಬ್ರಿಯಲ್, ಶಿಮ್ರಾನ್‌ ಹೆಟ್ಮೆಯರ್‌, ಶಾಯಿ ಹೋಪ್‌, ಕೀಮೊ ಪಾಲ್‌, ಕೇಮಾರ್‌ ರೋಚ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT