ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ:  ಕರ್ನಾಟಕ–ಸರ್ವಿಸಸ್ ಪಂದ್ಯ ವಿಳಂಬ, ನಿಕಿನ್, ವಿಶಾಲ್‌ಗೆ ಕ್ಯಾಪ್

Last Updated 13 ಡಿಸೆಂಬರ್ 2022, 5:27 IST
ಅಕ್ಷರ ಗಾತ್ರ

ಬೆಂಗಳೂರು: ಮಂಗಳವಾರ ಬೆಳಿಗ್ಗೆ ಸುರಿದ ಮಳೆಯಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣ ಹೊರ ಅಂಗಳವು ತೇವವಾಗಿರುವುದರಿಂದ ಕರ್ನಾಟಕ ಮತ್ತು ಸರ್ವಿಸಸ್ ನಡುವಣ ಪಂದ್ಯದ ಆರಂಭವು ವಿಳಂಬವಾಗಿದೆ.

ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ತಂಡಕ್ಕೆ ಇದು ಸಿ ಗುಂಪಿನಲ್ಲಿ ಮೊದಲ ಪಂದ್ಯವಾಗಿದೆ. 9.30ಕ್ಕೆ ಆರಂಭವಾಗಬೇಕಿದ್ದ ಪಂದ್ಯವು ವಿಳಂಬವಾಗಿದೆ. ಇ ನ್ನೂ ಟಾಸ್ ಕೂಡ ಹಾಕಲಾಗಿಲ್ಲ. 10.45ರ ನಂತರ ಶುರುವಾಗುವ ನಿರೀಕ್ಷೆ ಇದೆ.

ತಂಡದಲ್ಲಿ ಇದೇ ಮೊದಲ ಬಾರಿಗೆ ಸ್ಥಾನ ಪಡೆದಿರುವ ಯುವಪ್ರತಿಭೆಗಳಾದ ಮೈಸೂರಿನ ನಿಕಿನ್ ಜೋಸ್ ಮತ್ತು ಬೆಂಗಳೂರಿನ ವಿಶಾಲ್ ಒನತ್ ಅವರಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರಘುರಾಮ್ ಭಟ್ ಕ್ಯಾಪ್ ನೀಡಿ ಶುಭ ಹಾರೈಸಿದರು.

ಕರ್ನಾಟಕ ಬಳಗ ಇಂತಿದೆ: ಮಯಂಕ್ ಅಗರವಾಲ್ (ನಾಯಕ), ಆರ್. ಸಮರ್ಥ್ (ಉಪನಾಯಕ), ನಿಕಿನ್ ಜೋಸ್, ವಿಶಾಲ್ ಓನತ್, ಮನೀಷ್ ಪಾಂಡೆ, ಕೆ.ವಿ. ಸಿದ್ಧಾರ್ಥ್, ಬಿ.ಆರ್. ಶರತ್, ಶರತ್ ಶ್ರೀನಿವಾಸ್ (ಇಬ್ಬರೂ ವಿಕೆಟ್‌ಕೀಪರ್), ಕೆ. ಗೌತಮ್, ಶ್ರೇಯಸ್ ಗೋಪಾಲ್, ರೋನಿತ್ ಮೋರೆ, ವಿ. ಕೌಶಿಕ್, ವಿದ್ವತ್ ಕಾವೇರಪ್ಪ, ವಿ. ವೈಶಾಖ, ಶುಭಾಂಗ್ ಹೆಗ್ಡೆ. ಪಿ.ವಿ. ಶಶಿಕಾಂತ್ (ಕೋಚ್), ದೀಪಕ್ ಚೌಗುಲೆ (ಫೀಲ್ಡಿಂಗ್ ಕೋಚ್), ಜಾಬ ಪ್ರಭು (ಫಿಸಿಯೊ), ಕೆ.ಸಿ. ಅವಿನಾಶ್ (ಸ್ಟ್ರೆಂಥ್‌–ಕಂಡಿಷನಿಂಗ್), ಎ. ರಮೇಶ್ ರಾವ್ (ಮ್ಯಾನೇಜರ್), ಸಿ.ಎಂ. ಸೋಮಸುಂದರ್ (ಮಸಾಜ್ ತಜ್ಞ), ರಾಜ್ ಕೀರ್ತಿ ಕಪಾಡಿಯಾ (ವಿಡಿಯೊ ಅನಾಲಿಸ್ಟ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT