ಭಾನುವಾರ, ಏಪ್ರಿಲ್ 2, 2023
31 °C

ಅಫ್ಗಾನಿಸ್ತಾನದ ಟಿ–20 ತಂಡಕ್ಕೆ ರಶೀದ್ ಖಾನ್ ನಾಯಕ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ಮಿಂಚಿದ ಸ್ಟಾರ್ ಲೆಗ್ ಸ್ಪಿನ್ನರ್ ರಶೀದ್ ಖಾನ್ ಅವರನ್ನು ಅಫ್ಗಾನಿಸ್ತಾನದ ಟಿ–20 ತಂಡದ ನಾಯಕರಾಗಿ ನೇಮಕ ಮಾಡಲಾಗಿದೆ.

ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ದುಬೈನಲ್ಲಿ ಆಯೋಜಿಸಲು ಉದ್ದೇಶಿಸಿರುವ ಟಿ–20ವಿಶ್ವಕಪ್ ಸರಣಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನೇಮಕ ಮಾಡಲಾಗಿದೆ

ಎಡಗೈ ಬ್ಯಾಟ್ಸ್‌ಮನ್ ನಜೀಬುಲ್ಲಾ ಝದ್ರಾನ್ ಅವರನ್ನು ತಂಡದ ಉಪನಾಯಕನಾಗಿ ನೇಮಿಸಲಾಗಿದೆ.

‘ಆಲ್ ರೌಂಡರ್ ರಶೀದ್ ಖಾನ್ ಅವರನ್ನು ಟೀಮ್ ಅಫ್ಗಾನಿಸ್ತಾನದ ಟಿ–20 ತಂಡದ ನಾಯಕನಾಗಿ ನೇಮಿಸಲಾಗಿದೆ. ಈ ಮಧ್ಯೆ ನಜೀಬುಲ್ಲಾ ಝದ್ರಾನ್ ಅವರನ್ನು ರಾಷ್ಟ್ರೀಯ ತಂಡದ ಉಪನಾಯಕನಾಗಿ ನೇಮಕ ಮಾಡಲಾಗಿದೆ’ಎಂದು ಅಫ್ಗಾನಿಸ್ತಾನ ಕ್ರಿಕೆಟ್ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಟಿ 20 ಬೌಲರ್‌ಗಳಲ್ಲಿ ವಿಶ್ವದ 2 ನೇ ಸ್ಥಾನದಲ್ಲಿರುವ ರಶೀದ್ ಈ ಹಿಂದೆ ಅಫ್ಗಾನಿಸ್ತಾನದ ಟಿ 20 ನಾಯಕತ್ವವನ್ನು ನಿರಾಕರಿಸಿದ್ದರು. ನಾಯಕನಾಗಿ ಇರುವುದಕ್ಕಿಂತ ಆಟಗಾರನಾಗಿ ಹೆಚ್ಚು ಮೌಲ್ಯಯುತ ಎಂದು ನಂಬಿದ್ದೇನೆ ಎಂದು ಹೇಳಿದ್ದಾರೆ.

2019 ರಲ್ಲಿ, ಎಲ್ಲ ಮಾದರಿಯ ಕ್ರಿಕೆಟ್ ತಂಡಕ್ಕೆ ಅವರನ್ನು ನಾಯಕನನ್ನಾಗಿ ನೇಮಿಸಲಾಯಿತು. ಬಳಿಕ, ಅಫ್ಗಾನಿಸ್ತಾನ ತಂಡವು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ, ಟೆಸ್ಟ್ ಸರಣಿಯಲ್ಲಿ ಸೋತ ನಂತರ ಅವರನ್ನು ಬದಲಾಯಿಸಲಾಯಿತು.

ಟಿ 20 ವಿಶ್ವಕಪ್ 2021ರ ಬಿ ಗುಂಪಿನಲ್ಲಿ ಅಫ್ಗಾನಿಸ್ತಾನವನ್ನು ಇಂಗ್ಲೆಂಡ್, ಭಾರತ ಮತ್ತು ದಕ್ಷಿಣ ಆಫ್ರಿಕಾದೊಂದಿಗೆ ಸೇರಿಸಲಾಗಿದೆ. ಉಳಿದ ಎರಡು ತಂಡಗಳನ್ನು ಅರ್ಹತಾ ಪಂದ್ಯಗಳಿಂದ ಆಯ್ಕೆ ಮಾಡಲಾಗುತ್ತದೆ.

ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯಿಂದಾಗಿ ಪಂದ್ಯಾವಳಿಯನ್ನು ಇತ್ತೀಚೆಗೆ ಭಾರತದಿಂದ ಯುಎಇಗೆ ಸ್ಥಳಾಂತರಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು