ದಿನೇಶ್ ಕಾರ್ತಿಕ್ ಮೆಚ್ಚುಗೆ
ಜಿತೇಶ್ ಆಟದ ಬಗ್ಗೆ ಆರ್‌ಸಿಬಿಯ ಮೆಂಟರ್ ದಿನೇಶ್ ಕಾರ್ತಿಕ್ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಅವರು (ಜಿತೇಶ್ ಶರ್ಮಾ) ಕಲಿಯುವ ಹಂಬಲ ಹೊಂದಿರುತ್ತಾರೆ. ನನ್ನನ್ನು ಅಣ್ಣ ಎಂದು ಕರೆಯುವ, ಅವರು 'ನಾನೇನು ಮಾಡಲಿ' ಎಂದು ಯಾವಾಗಲೂ ಕೇಳುತ್ತಿರುತ್ತಾರೆ. ಅವರೊಂದಿಗೆ ಮಾತುಕತೆ ಖುಷಿ ನೀಡುತ್ತದೆ. ನಾನು ಹೇಳುವ ಏನನ್ನು ಬೇಕಾದರೂ ಮಾಡುತ್ತೇನೆ ಎಂಬ ವಿಶ್ವಾಸ ಅವರಲ್ಲಿದೆ. ಜಿತೇಶ್ ಜೊತೆ ಒಂದು ಅಥವಾ ಎರಡು ವರ್ಷ ಕೆಲಸ ಮಾಡಿದರೆ, ಎಲ್ಲ ಮಿತಿಗಳನ್ನೂ ಮೀರಬಲ್ಲೆ ಎನಿಸುತ್ತದೆ' ಎಂದು ಹೇಳಿದ್ದಾರೆ.