ನಾಯಕ ರಜತ್ ಪಾಟೀದಾರ್ ಮತ್ತು ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ಗಾಯದಿಂದ ಗುಣಮುಖರಾಗಿದ್ದು ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ‘ರಜತ್ ಅವರ ಬಲಗೈ ಬೆರಳಿಗೆ ಜೋರಾಗಿಯೇ ಪೆಟ್ಟಾಗಿತ್ತು. ಈಗ ಚೇತರಿಸಿಕೊಂಡಿದ್ದಾರೆ. ಬ್ಯಾಟಿಂಗ್ ಮಾಡಲು ಸಿದ್ಧರಾಗಿದ್ದಾರೆ. ದೀರ್ಘ ಬಿಡುವು ಲಭಿಸಿದ್ದರಿಂದ ಫಿಲ್ ಸಾಲ್ಟ್ ಕೂಡ ಫಿಟ್ ಆಗಿದ್ದಾರೆ’ ಎಂದು ಆರ್‌ಸಿಬಿ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ತಿಳಿಸಿದ್ದಾರೆ.