ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸಿದ್ಧ: ರೋಹಿತ್

Last Updated 22 ನವೆಂಬರ್ 2020, 14:43 IST
ಅಕ್ಷರ ಗಾತ್ರ

ನವದೆಹಲಿ: ಟೆಸ್ಟ್ ಪಂದ್ಯದಲ್ಲಿ ಯಾವುದೇ ಕ್ರಮಾಂಕದಲ್ಲಿಯೂ ಬ್ಯಾಟಿಂಗ್ ಮಾಡಲು ತಾವು ಸಿದ್ಧ ಎಂದು ಭಾರತ ತಂಡದ ಆಟಗಾರ ರೋಹಿತ್ ಶರ್ಮಾ ಹೇಳಿದ್ದಾರೆ.

ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್‌ನೆಸ್‌ ಪುನಶ್ಚೇತನ ಶಿಬಿರದಲ್ಲಿರುವ ರೋಹಿತ್ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

'ತಂಡದ ಗೆಲುವಿಗೆ ಕಾಣಿಕೆ ನೀಡುವುದು ನನ್ನ ಪರಮ ಗುರಿ. ತಂಡದ ವ್ಯವಸ್ಥಾಪಕ ಮಂಡಳಿಯು ತೆಗೆದುಕೊಳ್ಳುವ ನಿರ್ಣಯಕ್ಕೆ ನಾನು ಬದ್ಧ. ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕಳಿಸಿದರೂ ಆಡಲು ಸಿದ್ಧ‘ ಎಂದಿದ್ದಾರೆ.

ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಯ ಮೊದಲ ಪಂದ್ಯದ ನಂತರ ವಿರಾಟ್ ಕೊಹ್ಲಿ ಭಾರತಕ್ಕೆ ಮರಳಲಿದ್ದಾರೆ. ಉಳಿದ ಮೂರು ಪಂದ್ಯಗಳಲ್ಲಿ ಉಪನಾಯಕ ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ ಅವರೊಂದಿಗೆ ರೋಹಿತ್ ಮೇಲೆ ಹೆಚ್ಚಿ ಹೊಣೆ ಬೀಳಲಿದೆ. ಈ ಹಿಂದೆ ಅವರು ಆರಂಭಿಕ ಬ್ಯಾಟ್ಸ್‌ಮನ್ ಆಗಿ ಟೆಸ್ಟ್‌ನಲ್ಲಿಯೂ ಮಿಂಚಿದ್ದಾರೆ. ಆದರೆ ವಿರಾಟ್ ಅನುಪಸ್ಥಿತಿಯಲ್ಲಿ ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಪರಿಸ್ಥಿತಿ ಬರಬಹುದು.

'ಆಸ್ಟ್ರೇಲಿಯಾದಲ್ಲಿ ನಾನು ನಿರ್ವಹಿಸಬೇಕಾಗಿರುವ ಪಾತ್ರದ ಬಗ್ಗೆ ತಂಡದ ಚಿಂತಕರ ಚಾವಡಿ ಈಗಾಗಲೇ ಒಂದು ರೂಪುರೇಷೆ ಸಿದ್ಧಪಡಿಸಿರಬಹುದು. ಆದರೆ ನನಗೆ ಅದರ ಮಾಹಿತಿ ಇಲ್ಲ. ಅಲ್ಲಿಗೆ ತೆರಳಿದ ನಂತರ ಎಲ್ಲವೂ ಸ್ಪಷ್ಟವಾಗುತ್ತದೆ. ವಿರಾಟ್ ತವರಿಗೆ ಮರಳಿದಾಗ ಇನಿಂಗ್ಸ್‌ ಆರಂಭಿಸುವ ಮತ್ತು ಮೂರನೇ ಸ್ಥಾನದಲ್ಲಿ ಆಡುವ ಬ್ಯಾಟ್ಸ್‌ಮನ್ ಕುರಿತು ತಿಳಿಯಲಿದೆ' ಎಂದು ಹೇಳಿದರು.

'ಆಸ್ಟ್ರೇಲಿಯಾದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಪರ್ತ್‌ ಪಿಚ್ ಬಿಟ್ಟರೆ ಉಳಿದೆಡೆ ಹೆಚ್ಚಿನ ಬೌನ್ಸಿ ವಿಕೆಟ್‌ಗಳು ಇಲ್ಲ. ನಾನು ಕೂಡ ಈಗ ಪುಲ್ ಶಾಟ್ ಮತ್ತು ಕಟ್‌ಗಳ ಮೇಲೆ ಹೆಚ್ಚಿನ ಗಮನ ಇಟ್ಟಿಲ್ಲ. ಆದಷ್ಟು ’ವಿ‘ ಮಾದರಿಯ ಬ್ಯಾಟಿಂಗ್ ಮತ್ತು ನೇರ ಹೊಡೆತಗಳ ಬಗ್ಗೆ ಹೆಚ್ಚು ಚಿತ್ತ ನೆಟ್ಟಿದ್ದೇನೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT