ಸೇನೆ ಗೌರವಾರ್ಥ ಗ್ಲೌಸ್‌ ಮೇಲೆ ಧೋನಿ ಹಾಕಿಸಿದ್ದ ಮುದ್ರೆ ತೆಗೆಸಲು ಐಸಿಸಿ ಮನವಿ

ಬುಧವಾರ, ಜೂನ್ 26, 2019
24 °C

ಸೇನೆ ಗೌರವಾರ್ಥ ಗ್ಲೌಸ್‌ ಮೇಲೆ ಧೋನಿ ಹಾಕಿಸಿದ್ದ ಮುದ್ರೆ ತೆಗೆಸಲು ಐಸಿಸಿ ಮನವಿ

Published:
Updated:

ಸೌತಾಂಪ್ಟನ್: ಭಾರತದ ವಿಕೆಟ್‌ಕೀಪರ್ ಮಹೇಂದ್ರಸಿಂಗ್ ಧೋನಿ ಅವರು ಭಾರತೀಯ ಸೇನೆಗೆ ಗೌರವ ಸಲ್ಲಿಸುವ ಸಲುವಾಗಿ ತಮ್ಮ ಕೈಗವಸುಗಳ ಮೇಲೆ ಹಾಕಿಸಿಕೊಂಡಿದ್ದ 'ಕಠಾರಿ ಮುದ್ರೆ-ಬಲಿದಾನದ ಪಟ್ಟಿ’ ಯನ್ನು ತೆಗೆಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯು ಭಾರತೀಯ ಕ್ರಿಕೆಟ್‌ ನಿಯಂತ್ರಣಾ ಮಂಡಳಿಗೆ ಮನವಿ ಮಾಡಿದೆ. 

ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ತಾವು ಧರಿಸಿದ್ದ ಕೈಗವಸುಗಳ ಮೇಲೆ ಧೋನಿ ಅವರು ಸೇನೆಯ ‘ಕಠಾರಿ ಮುದ್ರೆ’ಯನ್ನು ಹಾಕಿಸಿಕೊಂಡು ಗಮನ ಸೆಳೆದರು. ಹಸಿರು ಬಣ್ಣದ ಕೈಗವಸಿನ ಮೇಲೆ ಹಾಕಿಸಿರುವ ಮುದ್ರೆಯು ಕ್ಯಾಮೆರಾ ಕಣ್ಣಿಗೆ ಬಿದ್ದಿತು. ಟಿವಿ ವಾಹಿನಿಗಳಲ್ಲಿ ಆ ದೃಶ್ಯ ಪ್ರಸಾರವಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿಯಿತು.

ಇದನ್ನೂ ಓದಿರಿ:  ಧೋನಿ ಗ್ಲೌಸ್‌ನಲ್ಲಿ ಸೇನೆಗೆ ಗೌರವ

ಈ ಕುರಿತು ಮಾತನಾಡಿರುವ ಐಸಿಸಿಯ ಪ್ರಧಾನ ವ್ಯವಸ್ಥಾಪ ಕ್ಲೈರ್‌ ಫರ್ಲಾಂಗ್, ‘ಧೋನಿ ಅವರು ತಮ್ಮ ವಿಕೆಟ್‌ ಕೀಪಿಂಗ್‌ ಗ್ಲೌಸ್‌ಗಳ ಮೇಲೆ ಹಾಕಿಕೊಂಡಿರುವ ಮುದ್ರೆಯನ್ನು ತೆಗೆಯಲು ಸೂಚಿಸುವಂತೆ ಬಿಸಿಸಿಐಗೆ ಮನವಿ ಮಾಡಿದ್ದೇವೆ,’ ಎಂದು ಹೇಳಿದ್ದಾರೆ. 

ಧೋನಿಯವರು ಭಾರತೀಯ ಸೇನೆಯ ಪ್ಯಾರಾಶೂಟ್ ರೆಜಿಮೆಂಟ್‌ನ ಗೌರವ ಕರ್ನಲ್  ಕೂಡ ಆಗಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !