ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತಿ ತೊರೆದ ಪಾಕ್‌ನ ಇಮದ್ ವಾಸಿಂ

Published 24 ಮಾರ್ಚ್ 2024, 4:53 IST
Last Updated 24 ಮಾರ್ಚ್ 2024, 4:53 IST
ಅಕ್ಷರ ಗಾತ್ರ

ಲಾಹೋರ್‌: ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಅಧಿಕಾರಿಗಳನ್ನು ಭೇಟಿಯಾದ ಆಲ್‌ರೌಂಡರ್‌ ಇಮದ್‌ ವಾಸಿಂ ಅವರು ನಿವೃತ್ತಿಯಿಂದ ಹೊರಬಂದಿದ್ದು, ಜೂನ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ತಂಡದ ಆಯ್ಕೆಗೆ ಲಭ್ಯವಿರುವುದಾಗಿ ಶನಿವಾರ ತಿಳಿಸಿದ್ದಾರೆ.

ಕಳೆದ ವರ್ಷದ ನವೆಂಬರ್‌ನಲ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಪಿಸಿಬಿ ಅಧಿಕಾರಿಗಳ ಮನವೊಲಿಕೆಯ ನಂತರ ನಿರ್ಧಾರ ಬದಲಿಸಿದ್ದಾರೆ.

ಟಿ20 ವಿಶ್ವಕಪ್ ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿದೆ. 35 ವರ್ಷದ ಇಮದ್ 66 ಟಿ20 ಪಂದ್ಯಗಳನ್ನು ಆಡಿದ್ದು 65 ವಿಕೆಟ್ ಪಡೆದಿದ್ದಾರೆ. 55 ಏಕದಿನ ಪಂದ್ಯಗಳಲ್ಲಿ 44 ವಿಕೆಟ್ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT