ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಂಟಿಂಗ್ ಪ್ರಕಾರ ಇವರೇ ವಿಶ್ವದ ಮೂವರು ಶ್ರೇಷ್ಠ ಫೀಲ್ಡರ್‌ಗಳು

Last Updated 28 ಜನವರಿ 2020, 15:37 IST
ಅಕ್ಷರ ಗಾತ್ರ

ನವದೆಹಲಿ:ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ ತಮ್ಮಿಷ್ಟದ ಮೂವರು ಸಾರ್ವಕಾಲಿಕ ಶ್ರೇಷ್ಠ ಫೀಲ್ಡರ್‌ಗಳನ್ನು ಗುರುತಿಸಿದ್ದಾರೆ.

ಕ್ರಿಕೆಟಿಗ ಜಾಕ್‌ ಬೀಥ್‌ ಟ್ವಿಟರ್‌ನಲ್ಲಿ ರಿಕಿ ಪಾಂಟಿಂಗ್ ಅವರನ್ನುವಿಶ್ವದ ಮೂವರು ಅಗ್ರಮಾನ್ಯ ಫೀಲ್ಡರ್‌ಗಳು ಯಾರು?ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿರುವ ಪಾಂಟಿಂಗ್,ಆಸ್ಟ್ರೇಲಿಯಾದ ಮಾಜಿ ಆಟಗಾರ ಆ್ಯಂಡ್ರೋ ಸೈಮಂಡ್ಸ್‌, ದಕ್ಷಿಣ ಆಫ್ರಿಕಾದವರಾದ ಜಾಂಟಿ ರೋಡ್ಸ್‌ ಮತ್ತು ಎಬಿಡಿ ವಿಲಿಯರ್ಸ್‌ ಅವರ ಹೆಸರನ್ನು ಉಲ್ಲೇಖಸಿದ್ದಾರೆ.

ಪಂತ್‌ ಶೀಘ್ರದಲ್ಲೇ ಭಾರತ ತಂಡಕ್ಕೆ ವಾಪಸ್‌!
ಸದ್ಯ ಕ್ರಿಕೆಟ್‌ನಿಂದ ನಿವೃತ್ತರಾಗಿರುವ ಪಾಂಟಿಂಗ್, ವೀಕ್ಷಕ ವಿವರಣೆ ಮತ್ತು‌ ಕೋಚಿಂಗ್‌ನಲ್ಲಿ ತೊಡಗಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್‌ ಆಗಿರುವ ಅವರು, ಆ ತಂಡದ ರಿಷಭ್‌ ಪಂತ್‌ ಶೀಘ್ರವೇ ಭಾರತ ತಂಡಕ್ಕೆ ವಾಪಸ್‌ ಆಗಲಿದ್ದಾರೆ ಎಂದಿದ್ದಾರೆ.

ಟ್ವಿಟರ್‌ನಲ್ಲಿ ಅಭಿಮಾನಿಗಳೊಂದಿಗೆ ಚರ್ಚೆ ನಡೆಸಿರುವ ಪಾಂಟಿಂಗ್, ‘ರಿಷಭ್‌ ಪಂತ್‌ ಅಪಾರ ಪ್ರತಿಭೆಯುಳ್ಳ ಯುವ ಆಟಗಾರ. ಐಪಿಎಲ್‌ ವೇಳೆ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ಪಂತ್‌ ಶೀಘ್ರದಲ್ಲೇ ಭಾರತ ತಂಡದಲ್ಲಿ ಸ್ಥಾನಕಂಡುಕೊಳ್ಳಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಮುಕ್ತಾಯವಾದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದ ವೇಳೆ ಪಂತ್‌ ಗಾಯಗೊಂಡಿದ್ದರು. ಬ್ಯಾಟಿಂಗ್‌ ನಡೆಸುತ್ತಿದ್ದಾಗ ವೇಗಿ ಪ್ಯಾಟ್‌ ಕಮಿನ್ಸ್‌ ಎಸೆದ ಚೆಂಡು ಹೆಲ್ಮೆಟ್‌ಗೆ ಬಡಿದಿತ್ತು. ಹೀಗಾಗಿ ಅವರ ಬದಲು ಕೆ.ಎಲ್.ರಾಹುಲ್‌ ವಿಕೆಟ್‌ ಕೀಪಿಂಗ್ ಜವಾಬ್ದಾರಿ ನಿರ್ವಹಿಸಿದ್ದರು.

ರಾಹುಲ್‌ ಬ್ಯಾಟಿಂಗ್‌ ಮತ್ತು ವಿಕೆಟ್‌ ಕೀಪಿಂಗ್ ಎರಡರಲ್ಲೂ ಗಮನ ಸೆಳೆದಿರುವುದರಿಂದ, ಆಸ್ಟ್ರೇಲಿಯಾ ಸರಣಿ ಬಳಿಕ ಇದೀಗ ನ್ಯೂಜಿಲೆಂಡ್ ಪ್ರವಾಸದಲ್ಲೂ ಪಂತ್‌ ಬದಲು ರಾಹುಲ್‌ರನ್ನೇ ಮುಂದುವರಿಸಲಾಗಿದೆ. ಹೀಗಾಗಿ ಡೆಲ್ಲಿ ತಂಡದ ಆಟಗಾರನ ಬಗ್ಗೆ ಟ್ವೀಟಿಗರು ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT