ಲೀಡ್ಸ್: ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್, ಎಡಗೈ ಬ್ಯಾಟರ್ ರಿಷಭ್ ಪಂತ್ ಅಮೋಘ ಶತಕದ ಸಾಧನೆ ಮಾಡಿದ್ದಾರೆ.

ಆ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಏಳನೇ ಶತಕದ ಸಾಧನೆ ಮಾಡಿದ್ದಾರೆ. ಈ ಪೈಕಿ ಐದು ಶತಕಗಳು SENA ದೇಶಗಳಲ್ಲಿ (ದ.ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ದಾಖಲಾಗಿತ್ತು ಎಂಬುದು ಗಮನಾರ್ಹ.

178 ಎಸೆತಗಳಲ್ಲಿ ಪಂತ್ 12 ಬೌಂಡರಿ ಹಾಗೂ ಆರು ಸಿಕ್ಸರ್ ನೆರವಿನಿಂದ 134 ರನ್ ಗಳಿಸಿದರು.

ರೋಹಿತ್ ದಾಖಲೆ ಮುರಿದ ಪಂತ್...

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಇತಿಹಾಸದಲ್ಲೇ ಅತಿ ಹೆಚ್ಚು ಸಿಕ್ಸರ್ ಗಳಿಸಿದ ಬ್ಯಾಟರ್ಗಳ ಸಾಲಿನಲ್ಲಿ ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ದಾಖಲೆಯನ್ನು ಪಂತ್ ಮುರಿದಿದ್ದಾರೆ. 27 ವರ್ಷದ ಪಂತ್ ಈವರೆಗೆ 62 ಸಿಕ್ಸರ್ಗಳನ್ನು ಗಳಿಸಿದ್ದಾರೆ. ರೋಹಿತ್ 40 ಟೆಸ್ಟ್ಗಳಲ್ಲಿ 56 ಸಿಕ್ಸರ್ ಗಳಿಸಿದ್ದರು.

ಡಬ್ಲ್ಯುಟಿಸಿ ವೃತ್ತಿ ಜೀವನದಲ್ಲಿ ಪಂತ್ ಈವರೆಗೆ 35 ಪಂದ್ಯಗಳಲ್ಲಿ 41.85ರ ಸರಾಸರಿಯಲ್ಲಿ 2,386 ರನ್ ಗಳಿಸಿದ್ದಾರೆ. ಇದರಲ್ಲಿ 13 ಅರ್ಧಶತಕಗಳು ಸೇರಿವೆ.

ಅಂದ ಹಾಗೆ ಡಬ್ಲ್ಯುಟಿಸಿ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿದ ಬ್ಯಾಟರ್ಗಳ ಸಾಲಿನಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮುಂಚೂಣಿಯಲ್ಲಿದ್ದಾರೆ. ಸ್ಟೋಕ್ಸ್ 54 ಪಂದ್ಯಗಳಲ್ಲಿ 83 ಸಿಕ್ಸರ್ಗಳನ್ನು ಗಳಿಸಿದ್ದಾರೆ.

ಧೋನಿ ದಾಖಲೆಯೂ ಮುರಿದ ಪಂತ್...

ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಗಳಿಸಿದ ಭಾರತೀಯ ವಿಕೆಟ್ ಕೀಪರ್ಗಳ ಸಾಲಿನಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಪಂತ್ ಮುರಿದಿದ್ದಾರೆ.

ಪಂತ್ ಪಾಲಿಗೆ ಇದು ಏಳನೇ ಶತಕವಾಗಿದೆ. ಧೋನಿ ಟೆಸ್ಟ್ ಕ್ರಿಕೆಟ್ನಲ್ಲಿ 6 ಶತಕಗಳನ್ನು ಗಳಿಸಿದ್ದರು.

SENA ದೇಶಗಳಲ್ಲಿ ಐದನೇ ಶತಕ ಸಾಧನೆ...

SENA ದೇಶಗಳಲ್ಲಿ ರಿಷಭ್ ಪಂತ್ ಐದನೇ ಶತಕದ ಸಾಧನೆ ಮಾಡಿದ್ದಾರೆ. ಈ ಪೈಕಿ ಮೂರು ಶತಕಗಳು ಆಂಗ್ಲರ ಮಣ್ಣಿನಲ್ಲೇ ದಾಖಲಾಗಿವೆ. ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾದಲ್ಲೂ ಪಂತ್ ಶತಕ ಗಳಿಸಿದ್ದಾರೆ.

ಟೆಸ್ಟ್ ಕ್ರಿಕೆಟ್ನಲ್ಲಿ 3,000 ರನ್ ಸಾಧನೆ...

ತಮ್ಮ ಶತಕದ ಹಾದಿಯಲ್ಲಿ ಪಂತ್ ಟೆಸ್ಟ್ ಕ್ರಿಕೆಟ್ನಲ್ಲಿ 3,000 ರನ್ ಪೂರ್ಣಗೊಳಿಸಿದ್ದಾರೆ. ಧೋನಿ ಬಳಿಕ ಈ ಸಾಧನೆ ಮಾಡಿದ ಭಾರತದ ಎರಡನೇ ವಿಕೆಟ್ ಕೀಪರ್ ಬ್ಯಾಟರ್ ಎನಿಸಿದ್ದಾರೆ.

ಪಂತ್ ಟೆಸ್ಟ್ ವೃತ್ತಿ ಜೀವನ...

ಟೆಸ್ಟ್ ವೃತ್ತಿ ಜೀವನದಲ್ಲಿ ಪಂತ್ 44 ಪಂದ್ಯಗಳಲ್ಲಿ (76 ಇನಿಂಗ್ಸ್) 43.41ರ ಸರಾಸರಿಯಲ್ಲಿ ಒಟ್ಟು 3,082 ರನ್ ಗಳಿಸಿದ್ದಾರೆ. ಏಳು ಶತಕ ಹಾಗೂ 15 ಅರ್ಧಶತಕಗಳು ಸೇರಿವೆ. ಒಟ್ಟು 73 ಸಿಕ್ಸರ್ ಸಿಡಿಸಿದ್ದಾರೆ.
.ಸ್ಟುಪಿಡ್ನಿಂದ ಸೂಪರ್ವರೆಗೆ ರಿಷಭ್ ಪಂತ್.ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ವಿಕೆಟ್ ಕೀಪರ್ಗಳ ಶತಕ: ಧೋನಿ ದಾಖಲೆ ಮುರಿದ ಪಂತ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.