ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮಿಂಚಿದ ರಿಜ್ವಾನ್, ಬಾಬರ್‌: ಪಾಕಿಸ್ತಾನಕ್ಕೆ ಸರಣಿ ಜಯ

Last Updated 25 ಏಪ್ರಿಲ್ 2021, 15:15 IST
ಅಕ್ಷರ ಗಾತ್ರ

ಹರಾರೆ: ಆರಂಭಿಕ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ (ಔಟಾಗದೆ 91; 60 ಎಸೆತ, 5 ಬೌಂಡರಿ, 3 ಸಿಕ್ಸರ್‌) ಮತ್ತು ನಾಯಕ ಬಾಬರ್ ಆಜಂ (52; 46 ಎ, 5 ಬೌಂ) ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ವೈಭವ ತೋರಿಸಿದರು. ಇವರಿಬ್ಬರ ಅಮೋಘ ಆಟದ ನೆರವಿನಿಂದ ಪಾಕಿಸ್ತಾನ ತಂಡ ಜಿಂಬಾಬ್ವೆ ಎದುರಿನ ಟಿ20 ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು.

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಭಾನುವಾರ ನಡೆದ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ 24 ರನ್‌ಗಳಿಂದ ಗೆದ್ದ ಪಾಕಿಸ್ತಾನ 2–1ರಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿತು.

ರಿಜ್ವಾನ್ ಮತ್ತು ಆಜಂ ಎರಡನೇ ವಿಕೆಟ್‌ಗೆ 126 ರನ್ ಕಲೆ ಹಾಕಿದರು. ಇದರಿಂದಾಗಿ ಪಾಕಿಸ್ತಾನ ಮೂರು ವಿಕೆಟ್‌ಗಳಿಗೆ 165 ರನ್ ಗಳಿಸಿತು. ಗುರಿ ಬೆನ್ನತ್ತಿದ ಜಿಂಬಾಬ್ವೆ ಏಳು ವಿಕೆಟ್‌ ಕಳೆದುಕೊಂಡು 141 ರನ್ ಗಳಿಸಿತು.

ಮೊದಲ ಪಂದ್ಯದಲ್ಲಿ ಅಜೇಯ 82 ರನ್ ಗಳಿಸಿದ್ದ ರಿಜ್ವಾನ್ ಎರಡನೇ ಪಂದ್ಯದಲ್ಲಿ 13 ರನ್ ಗಳಿಸಿ ಔಟಾಗಿದ್ದರು. ಭಾನುವಾರ ಮತ್ತೊಮ್ಮೆ ಮಿಂಚಿದರು. ಅವರಿಗೆ ಉತ್ತಮ ಸಹಕಾರ ನೀಡಿದ ಬಾಬರ್ ಕೊನೆಯ ಓವರ್‌ನಲ್ಲಿ ಔಟಾದರು.

ಜಿಂಬಾಬ್ವೆ ಕೂಡ ಗೆಲುವಿಗೆ ಸಕಲ ಪ್ರಯತ್ನ ಮಾಡಿತು. ಆರಂಭಿಕ ಬ್ಯಾಟ್ಸ್‌ಮನ್‌ ವೆಸ್ಲಿ ಮಧೆವೆರೆ (59; 47 ಎ, 7 ಬೌಂ) ಮತ್ತು ತಡಿವನಶೆ ಮರುಮನಿ (35; 26 ಎ, 4 ಬೌಂ) ಅವರ ಅಮೋಘ ಜೊತೆಯಾಟದ ನೆರವಿನಿಂದ 13 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 101 ರನ್ ಗಳಿಸಿದ್ದ ತಂಡದಲ್ಲಿ ಜಯದ ಭರವಸೆ ಮೂಡಿತ್ತು.

ಇವರಿಬ್ಬರು ಔಟಾದ ನಂತರ ಪಾಕ್ ಬೌಲರ್‌ಗಳು ಹಿಡಿತ ಬಿಗಿ ಮಾಡಿದರು. ಹಸನ್ ಅಲಿ ಮತ್ತು ಆಜಾದ್ ರವೂಫ್ ದಾಳಿಗೆ ಜಿಂಬಾಬ್ವೆ ನಲುಗಿತು. 15 ರನ್‌ಗಳ ಅಂತರದಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ತಂಡಕ್ಕೆ ನಂತರ ಚೇತರಿಸಿಕೊಳ್ಳಲು ಆಗಲಿಲ್ಲ. ಬ್ರೆಂಡನ್ ಟೇಲರ್ ಸ್ವಲ್ಪ ಪ್ರತಿರೋಧ ತೋರಿದರು. ಐವರು ಎರಡಂಕಿ ಮೊತ್ತವನ್ನೂ ದಾಟಲಾಗದೆ ವಾಪಸಾದರು.

ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ: 20 ಓವರ್‌ಗಳಲ್ಲಿ 3ಕ್ಕೆ 165 (ಮೊಹಮ್ಮದ್ ರಿಜ್ವಾನ್ ಔಟಾಗದೆ 91, ಶರ್ಜೀಲ್ ಖಾನ್ 18, ಬಾಬರ್ ಆಜಂ 52; ಲೂಕ್ ಜೊಂಗ್ವೆ 37ಕ್ಕೆ3); ಜಿಂಬಾಬ್ವೆ: 20 ಓವರ್‌ಗಳಲ್ಲಿ 7ಕ್ಕೆ 141 (ವೆಸ್ಲಿ ಮಧೆವೆರೆ 59, ತಡಿವನಶೆ ಮರುಮನಿ 35, ಬ್ರೆಂಡನ್ ಟೇಲರ್ 20; ಮೊಹಮ್ಮದ್ ಹಸ್ನೈನ್ 26ಕ್ಕೆ1, ಹಸನ್ ಅಲಿ 18ಕ್ಕೆ4, ಆಜಾದ್ ರವೂಫ್ 34ಕ್ಕೆ2). ಫಲಿತಾಂಶ: ಪಾಕಿಸ್ತಾನಕ್ಕೆ 24 ರನ್‌ಗಳ ಜಯ; ಮೂರು ಪಂದ್ಯಗಳ ಸರಣಿಯಲ್ಲಿ 2–1ರ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT