ಭಾನುವಾರ, ಏಪ್ರಿಲ್ 5, 2020
19 °C

ಟಿ20 ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಬಲ್ಲ ಏಕೈಕ ಆಟಗಾರ ರೋಹಿತ್ ಶರ್ಮಾ: ಹಾಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್‌ ಹಾಗ್ ಅವರು ಭಾರತ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಅವರು ಟಿ20 ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಇದುವರೆಗೆ ಯಾವೊಬ್ಬ ಬ್ಯಾಟ್ಸ್‌ಮನ್‌ ಕೂಡ ದ್ವಿಶತಕ ಸಿಡಿಸಿಲ್ಲ. ಹಾಗಾಗಿ ಟ್ವಿಟರ್‌ನಲ್ಲಿ ಶಿವಂ ಜೈಸ್ವಾಲ್‌ ಎನ್ನುವವರು, ‘ಬ್ರಾಡ್‌ ಹಾಗ್‌, ನಿಮ್ಮ ಪ್ರಕಾರ ಟಿ20 ಕ್ರಿಕೆಟ್‌ನಲ್ಲಿ ಮೊದಲ ದ್ವಿಶತಕ ಸಿಡಿಸಬಲ್ಲ ಆಟಗಾರ ಯಾರಾಗಬಲ್ಲರು?’ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಹಾಗ್‌, ‘ಸದ್ಯಕ್ಕೆ ರೋಹಿತ್‌ ಶರ್ಮಾ ಅವರಿಗೆ ಮಾತ್ರವೇ ಆ ಸಾಮರ್ಥ್ಯವಿದೆ ಎಂದು ಅಂದುಕೊಂಡಿದ್ದೇನೆ. ಉತ್ತಮ ಸ್ಟ್ರೈಕ್‌ರೇಟ್‌, ಒಳ್ಳೆಯ ಟೈಮಿಂಗ್‌, ಕ್ರೀಡಾಂಗಣದ ಎಲ್ಲ ಮೂಲೆಗಳಿಗೂ ಸಿಕ್ಸರ್ ಎತ್ತುವಂತಹ ಶಾಟ್‌ಗಳನ್ನು ಪ್ರಯೋಗಿಸಬಲ್ಲರು’ ಎಂದಿದ್ದಾರೆ.

ರೋಹಿತ್‌ ಏಕದಿನ ಕ್ರಿಕೆಟ್‌ನಲ್ಲಿ ಮೂರು ಬಾರಿ ದ್ವಿಶತಕ ಸಿಡಿಸಿದ್ದಾರೆ. ಟಿ20ಯಲ್ಲಿ ಹೆಚ್ಚು (4) ಶತಕ ಸಿಡಿಸಿದ ದಾಖಲೆಯನ್ನೂ ಹೊಂದಿದ್ದಾರೆ. ಇದುವರೆಗೆ ಒಟ್ಟು 108 ಅಂ.ರಾ ಟಿ20 ಪಂದ್ಯಗಳನ್ನು ಆಡಿರುವ ಅವರು, 2773 ರನ್ ಗಳಿಸಿದ್ದಾರೆ.

ಟಿ20ಯಲ್ಲಿ ಇನಿಂಗ್ಸ್‌ವೊಂದರಲ್ಲಿ ವೈಯಕ್ತಿಕ ಗರಿಷ್ಠ ಮೊತ್ತದ ದಾಖಲೆ ಇರುವುದು ಆಸಿಸ್‌ ನಾಯಕ ಆ್ಯರನ್‌ ಫಿಂಚ್‌ ಹೆಸರಲ್ಲಿ. ಅವರು ಜಿಂಬಾಬ್ವೆ ವಿರುದ್ಧ ಕೇವಲ 76 ಎಸೆತಗಳಲ್ಲಿ 176ರನ್‌ ಬಾರಿಸಿದ್ದರು. ಅಫ್ಗಾನಿಸ್ತಾನದ ಹಜ್ರತುಲ್ಲಾ ಜಜಾಯ್‌ (162) 2ನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು