ಶನಿವಾರ, ಸೆಪ್ಟೆಂಬರ್ 18, 2021
21 °C

Ind VS Eng 4th Test: ರೋಹಿತ್ ಶರ್ಮಾ ಶತಕ, ಚಹಾ ವಿರಾಮಕ್ಕೆ ಭಾರತ 199/1

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಓವಲ್: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೆ ಟೆಸ್ಟ್ ಪಂದ್ಯದ ಎರಡನೆ ಇನಿಂಗ್ಸ್‌ನಲ್ಲಿ ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅಮೋಘ ಶತಕ ದಾಖಲಿಸಿದ್ದಾರೆ.

2013ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರೋಹಿತ್, ವಿದೇಶದಲ್ಲಿ ಗಳಿಸಿದ ಮೊದಲ ಶತಕ ಇದಾಗಿದೆ. ತವರಿನ ಟೆಸ್ಟ್ ಪಂದ್ಯಗಳಲ್ಲಿ ಅವರು 7 ಶತಕ ದಾಖಲಿಸಿದ್ದಾರೆ.

ಮೋಯಿನ್ ಅಲಿ ಎಸೆತದಲ್ಲಿ ಸಿಕ್ಸರ್ ಹೊಡೆಯುವ ಮೂಲಕ ರೋಹಿತ್ ಶರ್ಮಾ ಶತಕ ದಾಖಲಿಸಿದ್ದು, ವಿಶೇಷವಾಗಿತ್ತು. 

ಮೊದಲ ಇನಿಂಗ್ಸ್‌ನಲ್ಲಿ 99 ರನ್‌ಗಳ ಹಿನ್ನಡೆ ಅನುಭವಿಸಿದ್ದ ಭಾರತಕ್ಕೆ ಚೇತರಿಕೆ ನೀಡಿದ ರೋಹಿತ್, ಕೆ.ಎಲ್. ರಾಹುಲ್ ಜೊತೆಗೂಡಿ 83 ರನ್‌ಗಳ ಜೊತೆಯಾಟ ನೀಡಿದರು. ರಾಹುಲ್ 46 ರನ್ ಗಳಿಸಿ ನಿರ್ಗಮಿಸಿದ ಬಳಿಕ ಚೆತೇಶ್ವರ್ ಪೂಜಾರ ಜೊತೆ ಇನಿಂಗ್ಸ್ ಕಟ್ಟುತ್ತಿದ್ದಾರೆ.

ಮೊದಲ ಇನಿಂಗ್ಸ್‌ನ ಹಿನ್ನಡೆಯಿಂದ ಹೊರಬಂದಿರುವ ಭಾರತ ಲೀಡ್ ಪಡೆದಿದೆ.

ಚಹಾ ವಿರಾಮದ ವೇಳೆಗೆ ಭಾರತ 1 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿದ್ದು, ಎರಡನೇ ಇನಿಂಗ್ಸ್‌ನಲ್ಲಿ 100 ರನ್ ಮುನ್ನಡೆ ಪಡೆದಿದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು