ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ದಿಲ್ ಚಾಹ್ತಾ ಹೈ' ಎಂದ ಸಚಿನ್ ತೆಂಡೂಲ್ಕರ್, ಕುಂಬ್ಳೆ, ಯುವರಾಜ್‌ ಸಿಂಗ್‌!

Last Updated 5 ಮಾರ್ಚ್ 2023, 5:03 IST
ಅಕ್ಷರ ಗಾತ್ರ

ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ನಂತರ ಸಚಿನ್ ತೆಂಡೂಲ್ಕರ್ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ ತಮ್ಮ ಪ್ರವಾಸದ ಚಿತ್ರಗಳನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಾರೆ. ಇದೀಗ ಸಚಿನ್ ತೆಂಡೂಲ್ಕರ್ ಅವರು ಯುವರಾಜ್ ಸಿಂಗ್ ಮತ್ತು ಅನಿಲ್ ಕುಂಬ್ಳೆ ಅವರೊಂದಿಗಿನ ಚಿತ್ರವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡು 'ದಿಲ್ ಚಾಹ್ತಾ ಹೈ' ಮರುಸೃಷ್ಟಿಯಾಗಿದೆ ಎಂದು ಬರೆದುಕೊಂಡಿದ್ದಾರೆ.

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಇತ್ತೀಚೆಗೆ ಗೋವಾದಲ್ಲಿ ತಮ್ಮ ಸ್ನೇಹಿತರು ಮತ್ತು ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ ಮತ್ತು ಯುವರಾಜ್ ಸಿಂಗ್ ಅವರನ್ನು ಭೇಟಿಯಾಗಿದ್ದಾರೆ. ಇದರ ಫೋಟೊ ಹಂಚಿಕೊಂಡ ಸಚಿನ್‌, ‘ದಿಲ್ ಚಾಹ್ತಾ ಹೈ’ ಕ್ಷಣವನ್ನು ಮರುಸೃಷ್ಟಿಸಿದ್ದಾರೆ. ಇದರಲ್ಲಿ ಯಾರು 'ಆಕಾಶ್, ಸಮೀರ್ ಮತ್ತು ಸಿದ್' ಎಂದು ಭಾವಿಸು‌ವಿರಿ ಎಂಬುದಾಗಿ ಸಚಿನ್‌ ತಮ್ಮ ಅಭಿಮಾನಿಗಳಿಗೆ ಪ್ರಶ್ನಿಸಿದ್ದಾರೆ. 2001 ರಲ್ಲಿ ಬಿಡುಗಡೆಗೊಂಡ ‘ದಿಲ್ ಚಾಹ್ತಾ ಹೈ’ ನಲ್ಲಿ ಅಮೀರ್ ಖಾನ್, ಅಕ್ಷಯ್ ಖನ್ನಾ ಮತ್ತು ಸೈಫ್ ಅಲಿ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

‘ಗೋವಾದಲ್ಲಿ ನಮ್ಮ ದಿಲ್ ಚಾಹ್ತಾ ಹೈ ಕ್ಷಣ! ಆಕಾಶ್, ಸಮೀರ್ ಮತ್ತು ಸಿದ್ ಯಾರು ಎಂದು ನೀವು ಯೋಚಿಸುತ್ತೀರಿ?’ ಎಂದು ಸಚಿನ್‌ ಪೋಸ್ಟ್‌ ಮಾಡಿದ್ದಾರೆ. ಸುಮಾರು 13 ಲಕ್ಷ ಅಭಿಮಾನಿಗಳು ಸಚಿನ್‌ ಅವರ ಈ ಪೋಸ್ಟ್‌ ಮೆಚ್ಚಿದ್ದಾರೆ. ಅನೇಕ ಅಭಿಮಾನಿಗಳು ಚಿತ್ರಕ್ಕೆ ಪ್ರತಿಕ್ರಿಯಿಸಿದ್ದಾರೆ.

ಚಿತ್ರದಲ್ಲಿ ಮೂವರೂ ಕ್ರಿಕೆಟ್‌ ದಿಗ್ಗಜರು ಸನ್ ಗ್ಲಾಸ್ ಹಾಕಿಕೊಂಡು ಕ್ಯಾಮೆರಾಗಾಗಿ ನಗುತ್ತಿದ್ದಾರೆ. ಅನಿಲ್ ಕುಂಬ್ಳೆ ಸೆಲ್ಫಿ ಕ್ಲಿಕ್ಕಿಸುತ್ತಿರುವ ಈ ಚಿತ್ರವನ್ನು ಸಚಿನ್‌ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT